ಕರಾವಳಿ

ಲಾಕ್ ಡೌನ್ ನಿಂದ ಊಟಕ್ಕೆ ಕಷ್ಟಪಡುತ್ತಿದ್ದ ಕಾರ್ಮಿಕರಿಗೆ “ಟೀಮ್ ಆರೋಹಿ” ಚಾರಣ ಬಳಗದ ವತಿಯಿಂದ ನೆರವು

Pinterest LinkedIn Tumblr

ಮಂಗಳೂರು : ಮೂಲ್ಕಿ ರೈಲು ನಿಲ್ದಾಣದ ಎದುರುಭಾಗದಲ್ಲಿ ಬೆಳ್ಳಾಯರು ಗ್ರಾಮದಲ್ಲಿ ದೂರದ ಗಂಗಾವತಿ, ಆನೆಗೊಂದಿ ಕಡೆಗಳಿಂದ ರೈಲ್ವೇ ಇಲಾಖೆ ಕಾಮಗಾರಿಗೆಂದು ಆಗಮಿಸಿ ಲಾಕ್ ಡೌನ್ ನಿಂದಾಗಿ ಕಳೆದ ಒಂದೂವರೆ ತಿಂಗಳಿಂದ ಕೆಲಸವೂ ಇಲ್ಲದೆ ದಿನದ ಊಟಕ್ಕೆ ಕಷ್ಟಪಡುತ್ತಿದ್ದ ದಿನಗೂಲಿ ಕಾರ್ಮಿಕರಿಗೆ “ಟೀಮ್ ಆರೋಹಿ” ಚಾರಣ ಬಳಗದ ವತಿಯಿಂದ ನೆರವು ನೀಡಲಾಯಿತು.

ಅಕ್ಕಿ, ಬೇಳೆಕಾಳು, ತರಕಾರಿ, ದಿನಸಿ ಸಾಮಗ್ರಿಯನ್ನು ಅವರಿದ್ದಲ್ಲಿ ತೆರಳಿ ವಿತರಿಸಲಾಯಿತು. ಕಳೆದ ಕೆಲವು ದಿನಗಳಿಂದ ಪಡುಬಿದ್ರಿ ಮೂಲದ ಸಂಘಟನೆಯೊಂದು ರಾತ್ರಿ ಒಂದು ಹೊತ್ತಿನ ಊಟ ನೀಡುತ್ತಾ ಬಂದಿದ್ದು ಬೇರೆ ಹೊತ್ತಿನ ಊಟಕ್ಕೆ ಕೂಲಿ ಕಾರ್ಮಿಕ ಕುಟುಂಬ ಕಷ್ಟ ಪಡುತ್ತಿತ್ತು.

ಇದನ್ನು ಮನಗಂಡ ತಂಡದ ಸದಸ್ಯರು ನೆರವಾಗಿದ್ದು ಮುಂದಿನ ದಿನಗಳಲ್ಲಿ ದಿನಸಿ, ಅಕ್ಕಿ, ತರಕಾರಿ ವಿತರಿಸಲು ತೀರ್ಮಾನಿಸಲಾಗಿದೆ.

ಎಂಟು ಕುಟುಂಬಗಳ ಪುಟ್ಟಮಕ್ಕಳೂ ಸೇರಿದಂತೆ 30ರಷ್ಟು ಮಂದಿ ಇಲ್ಲಿ ಡೇರೆಯಲ್ಲಿ ದಿನಕಳೆಯುತ್ತಿದ್ದು ಲಾಕ್ ಡೌನ್ ನಿಂದ ಊರಿಗೆ ಹೋಗಲಾರದೆ ಇಲ್ಲಿ ಯಾವೊಂದು ಸೌಲಭ್ಯವೂ ಸಿಗದೇ ಕಂಗಾಲಾಗಿದ್ದರು. “ಟೀಮ್ ಆರೋಹಿ” ತಂಡದ ಪತ್ರಕರ್ತ ಶಶಿ ಬೆಳ್ಳಾಯರು, ಸಂದೇಶ್ ಶೆಟ್ಟಿ ಕೃಷ್ಣಾಪುರ, ವಿಶಾಲ್ ಡಿ. ಬಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.