ಕರಾವಳಿ

ಬಂಟ್ವಾಳದಲ್ಲಿ ಕೊರೋನದಿಂದ ಮೃತಪಟ್ಟ ಮಹಿಳೆಯ ಪಕ್ಕದ ಮನೆಯ ಮಹಿಳೆಯಲ್ಲೂ ಸೋಂಕು ದೃಢ

Pinterest LinkedIn Tumblr

ಮಂಗಳೂರು/ ಬಂಟ್ವಾಳ, ಎಪ್ರಿಲ್.21: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮತ್ತೊಂದು ವ್ಯಕ್ತಿಯಲ್ಲಿ ಕೋವಿಡ್ – 19 (ಕೊರೋನ) ಸೋಂಕು ತಗುಲಿರುವುದು ದೃಢಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕಿನಿಂದ ರವಿವಾರ ಮೃತಪಟ್ಟ (ಕೊರೋನಗೆ ಮೊದಲ ಬಲಿಯಾದ) ಬಂಟ್ವಾಳ ಪೇಟೆಯ ಮಹಿಳೆಯ ನೆರೆ ಮನೆಯ ಮಹಿಳೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, . ಬಂಟ್ವಾಳ ತಾಲೂಕಿನ 67 ವರ್ಷ ಪ್ರಾಯದ ವೃದ್ಧೆಯೊಬ್ಬರಿಗೆ ಕೋವಿಡ್ – 19 (ಕೊರೋನ) ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಮೃತ ಮಹಿಳೆಯ ಸಂಪರ್ಕದಿಂದ ಇವರಿಗೂ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಮಹಿಳೆಯನ್ನು ಎ.18ರಂದು ಮಂಗಳೂರು ಕೋವಿಡ್ – 19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ – 19 ಪರೀಕ್ಷೆಗೆ ಕಳುಹಿಸಿದ್ದ ವೃದ್ಧೆಯ ಗಂಟಲ ದ್ರವ ಮಾದರಿಯ ವರದಿ ಇಂದು ಬಂದಿದ್ದು ಅದರಲ್ಲಿ ಪಾಸಿಟಿವ್ ಆಗಿದೆ ಎಂದು ಪ್ರಕಟನೆ ತಿಳಿಸಿದೆ.

ಈ ಬಗ್ಗೆ ಮಂಗಳವಾರ ಬೆಳಗ್ಗೆ ಬುಲೆಟಿನ್ ಬಿಡುಗಡೆ ಮಾಡಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯ ವೃದ್ಧೆಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ.

ಬಂಟ್ವಾಳದಲ್ಲಿ ಆತಂಕ :

ಭಾನುವಾರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳದ ಕಸ್ಬಾದ ಮಹಿಳೆಯೋರ್ವರು ಮೃತಪಟ್ಟಿದ್ದು ಗಂಟಲ ಮಾದರಿಯ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಡಪಟ್ಟಿತ್ತು. ಮಂಗಳವಾರ ಆ ಮಹಿಳೆಯ ನೆರೆಮನೆಯ 67 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದ್ದು ಈಗಾಗಲೇ ಸೀಲ್‌ಡೌನ್‌ ಮಾಡಲಾಗಿರುವ ಬಂಟ್ವಾಳದಲ್ಲಿ ಈ ಘಟನೆ ಆತಂಕ ಉಂಟುಮಾಡಿದೆ.

ಈಗಾಗಲೇ ಬಂಟ್ವಾಳ ನಗರದಲ್ಲಿ ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದ್ದು ಇದೀಗ ಬಂಟ್ವಾಳ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು ಆ ಪೈಕಿ 3 ಸಕ್ರಿಯ ಪ್ರಕರಣಗಳಾಗಿದೆ.

Comments are closed.