ಉಡುಪಿ: ಜಾನುವಾರು ಕಳವುಗೈದು ಅಕ್ರಮವಾಗಿ ಮಾಂಸ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು ನಾಲ್ವರು ಪರಾರಿಯಾಗಿದ್ದಾರೆ. ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಮಣಿಪುರದಲ್ಲಿ ಈ ಘಟನೆ ನಡೆದಿದೆ.
ಮಣಿಪುರ ವೆಸ್ಟ್ ನ ಮಸೀದಿ ರಸ್ತೆಯ ಪಾಪನಾಶಿನಿ ನದಿಯ ಸಮೀಪದಲ್ಲಿರುವ ಕಟ್ಟಡದಲ್ಲಿ ದನಗಳನ್ನು ಮಾಂಸ ಮಾಡಿ ಮಾರಾಟ ಮಾಡಲು ತಯಾರಿ ಮಾಡುತ್ತಿರುವುದಾಗಿ ಬೀಟ್ ಸಿಬ್ಬಂದಿ ನೀಡಿದ ಮಾಹಿತಿಯಂತೆ ಕಾಪು ಠಾಣಾ ಪಿಎಸ್ಐ ರಾಜಶೇಖರ್ ಬಿ ಸಾಗನೂರ್ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.
ಉಡುಪಿ ಮಣಿಪುರದವರಾದ ಅಶ್ರಪ್ (31), ಸಿನಾನ್ (19) ಬಂಧಿತ ಆರೋಪಿಗಳು. ಅಶ್ರಫ್ ಮಣಿಪುರ, ರಶೀದ್ ಮಣಿಪುರ, ರಜಾಬ್ ಮಣಿಪುರ,ಮೊಯಿದ್ದಿನ್ ಮಣಿಪುರ ಈ ವೇಳೆ ಪರಾರಿಯಾಗಿದ್ದಾರೆ.
ಆರೋಪಿಗಳೆಲ್ಲರೂ ದನ ಕಡಿದು ಮಾಂಸ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಕಟ್ಟಡಕ್ಕೆ ದಾಳಿ ನಡೆಸಿ ಆರೋಪಿಳಾದ ಅಶ್ರಫ್ ಮತ್ತು ಸಿನಾನ್ ಅವರನ್ನು ಬಂಧಿಸಲಾಗಿದೆ. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಎಲ್ಲಿಂದಲೋ ದನ ಕರುಗಳನ್ನು ಕದ್ದು ತಂದು ಕಾರಿನಲ್ಲಿ ದನದ ಮಾಂಸವನ್ನು ಕೊಂಡೊಯ್ಯದು ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 52,250 ರೂ. ಆಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋಹತ್ಯಾ ನಿಷೇಧ ಕಾಯ್ದೆ ಮತ್ತು ಕಲಂ 11(1) (ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ತಡೆ ಕಾಯ್ದೆ 1966. ಹಾಗೂ ಕಲಂ 379 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.