ಕರಾವಳಿ

ವಸಯಿ ಪರಿಸರದಲ್ಲಿ ಕನ್ನಡಿಗ ಉದ್ಯಮಿಗಳಿಂದ 21000 ಜನರಿಗೆ ಅಹಾರ ವಿತರಣೆ

Pinterest LinkedIn Tumblr

ಮುಂಬಯಿ : ವಸಯಿಯ ರುದ್ರ ಶೆಲ್ಟರ್ ಗ್ರೂಫ್ ಮತ್ತು ಫಾರ್ಮ ಹೌಸ್ ಗ್ರೂಫ್ ಆಫ್ ಹೋಟೇಲ್ಸನವರು ವಸಾಯಿ – ವಿರಾರ್ ಮಹಾನಗರ ಪಾಲಿಕೆಯ ಸಹಾಯದಿಂದ ಮೇಘಾ ಕಮ್ಯೂನಿಟಿ ಕಿಚನ್ ಮೂಲಕ ಲಾಕ್ ಡೌನ್ ನ ಈ ಸಮಯದಲ್ಲಿ ಪರಿಸರದ ಜನಸಾಮಾನ್ಯರಿಗೆ ದೈನಂದಿನ ಸಂಪಾದಿಸುವವರಿಗೆ, ದಿನನಿತ್ಯ 21000 ಜನರಿಗೆ ಅನ್ನದಾನ ಮಾಡುತ್ತಾ ಬಡವರ ಕಣ್ಣೀರೊರಸುವ ಕಾರ್ಯವನ್ನು ವಸಾಯಿ – ವಿರಾರ್ ಮೇಯರ್ ಪ್ರವೀಣ್ ಸಿ. ಶೆಟ್ಟಿಯವರ ಮಾರ್ಗದರ್ಶನದಲ್ಲಿ ಉದ್ಯಮಿಗಳಾದ ಪಾಂಡು ಎಲ್ ಶೆಟ್ಟಿ, ಹರೀಶ್ ಪಾಂಡು ಶೆಟ್ಟಿ, ಭರತ್ ಪಾಂಡು ಶೆಟ್ಟಿ ಮೊದಲಾದವರು ಮಾಡುತ್ತಿರುವರು.

ಈ ಸಂದರ್ಭದಲ್ಲಿ ಶೆಲ್ಟರ್ ಗ್ರೂಫ್ ನ ಹರೀಶ್ ಪಾಂಡು ಶೆಟ್ಟಿ ಯವರು ಮಾತನಾಡಿ ನಮ್ಮನ್ನು ಈ ಮಟ್ಟಕ್ಕೆ ತಂದ ನಮ್ಮ ಪರಿಸರದ ಜನರು ಇಂದು ಕಷ್ಟದ ಪರಿಸ್ಥಿತಿಯನ್ನು ಎದುರಿಸುವಾಗ ಅವರಿಗೆ ಸಹಕರಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ನಮ್ಮ ಈ ಪರಿಸರದಲ್ಲಿ ಯಾರೂ ಹಸಿವಿನಿಂದಿರಬಾರದು. ಹೋಟೇಲು ನೌಕರರು ಕೂಡಾ ಇಂದು ಅನಾನುಕೂಲತೆಯನ್ನು ಎದುರಿಸುತ್ತಿದ್ದು ಈ ಸಮಯದಲ್ಲಿ ಅವರಿಗೂ ಸಹಕರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದರು.

ಈ ಸಂದಿಗ್ಧ ಸಂದರ್ಭದಲ್ಲಿ ಆಸಕ್ತ ಕುಟುಂಬ ಬಂಧುಗಳಿಗೆ ಅನ್ನದಾನವನ್ನು ನೀಡುತ್ತಿರುವ ಪಾಂಡು ಶೆಟ್ಟಿ ಅವರ ಪರಿವಾರ ಸೇವಾ ಕಾರ್ಯ ಶ್ಲಾಘನೀಯ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪದ್ಮನಾಭ ಪಯ್ಯಡೆ, ಶೆಲ್ಟರ್ ಗ್ರೂಫ್ ನ ರವಿನಾಥ್ ಶೆಟ್ಟಿ ತೋನ್ಸೆ, ಬಂಟರ ಸಂಘದ ವಸಾಯಿ – ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಪಕ್ಕಳ, ಸಂಚಾಲಕ ಶಶಿಧರ್ ಶೆಟ್ಟಿ ಇನ್ನಂಜೆ ಎಂಎಂ ಹೋಟೆಲಿನ್ ಹರೀಶ್ ಶೆಟ್ಟಿ ಗುರ್ಮೆ ಮತ್ತಿತರರು ಹಾಗೂ ವಸಯಿ ತಾಲೂಕಿನ ಸಂಘ-ಸಂಸ್ಥೆಗಳು ಮಸಾಯಿ ತಾಲೂಕು ಹೋಟೆಲ್ ಅಸೋಷಿಯೇಶನ್ ಅಧ್ಯಕ್ಷರಾದ ಪ್ರಕಾಶ್ ಹೆಗ್ಡೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

Comments are closed.