ಕರಾವಳಿ

ಕೊರೊನಾ ಭೀತಿ: ‘ನಮ್ಮೂರಿಗೆ ಪ್ರವೇಶ ತಾತ್ಕಾಲಿಕ ನಿಷೇಧ, ಸಹಕರಿಸಿ’- ಬಗ್ವಾಡಿ ಗ್ರಾಮಸ್ಥರು!

Pinterest LinkedIn Tumblr

ಕುಂದಾಪುರ: ಕೋವಿಡ್‌ 19 ಮಹಾಮರಿ ದೇಶಾದ್ಯಂತ ಹಬ್ಬುತ್ತಿದ್ದು, ಈ ನಿಟ್ಟಿನಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ (ಕರ್ಫ್ಯೂ) ಇದೆ. ಪಟ್ಟಣ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಕೋವಿಡ್ ಕೊರೋನಾ ಜಾಗೃತಿ ಹೆಚ್ಚಾಗಿಯೇ ಇದೆ. ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ಗ್ರಾಮದ ಬಗ್ವಾಡಿಯಲ್ಲೂ ಜನ ಹೊರಗಿನಿಂದ ತಮ್ಮ ಊರಿಗೆ ಬರದಂತೆ ಪ್ರವೇಶ ದ್ವಾರದಲ್ಲಿಯೇ ಗೇಟು ನಿರ್ಮಿಸಿಕೊಂಡಿದ್ದಾರೆ.

ಕಳೆದ 3-4 ದಿನಗಳಿಂದ ತಮ್ಮ ಸುತ್ತಮುತ್ತಲಿನ ಊರಿಗೆ ಬೆಂಗಳೂರು ಮತ್ತಿತರ ಪ್ರದೇಶಗಳಲ್ಲಿ ಕೆಲಸಕ್ಕಿದ್ದ ಜನ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದ ಎಲ್ಲಿ ತಮ್ಮ ಊರಿಗೂ ಕೊರೋನಾ ಹಬ್ಬುತ್ತದೋ ಎಂದು ಊರವರೆಲ್ಲ ಭಯಭೀತಗೊಂಡಿದ್ದಾರೆ.

ಹೊರಗಿನಿಂದ ಬಂದವರು ತಮ್ಮ ಊರಿಗೂ ಈ ಮಹಾಮಾರಿ ರೋಗವನ್ನು ಹರಡುವ ಸಾಧ್ಯತೆ ಇದೆ ಎನ್ನುವ ಭೀತಿಯಲ್ಲಿ ಈಗ ಬಗ್ವಾಡಿಯ ಗ್ರಾಮಸ್ಥರೆಲ್ಲ ಒಗ್ಗೂಡಿ, ತಮ್ಮ ಊರಿಗೆ ಯಾರು ಬರದಂತೆ ‘ಕೊರೋನಾ ಜಾಗೃತಿ, ತಾತ್ಕಲಿಕ ಪ್ರವೇಶ ನಿಷೇಧ ಸಹಕರಿಸಿ-ಬಗ್ವಾಡಿ ಗ್ರಾಮಸ್ಥರು’ ಎನ್ನುವುದಾಗಿ ಊರಿಗೆ ಪ್ರವೇಶವಾಗುವ ದಾರಿಯಲ್ಲಿ ಬೋರ್ಡ್‌ ಹಾಕಲಾಗಿದೆ. ಜತೆಗೆ ಯಾರೂ ಪ್ರವೇಶಿಸದಂತೆ ಹಾಗೂ ಊರಿಂದ ಹೊರ ಹೊಗದಂತೆ ತಾತ್ಕಾಲಿಕ ಗೇಟ್ ಹಾಕಲಾಗಿದೆ.

Comments are closed.