ಕರಾವಳಿ

21 ದಿನಗಳ ಕಾಲ ಮತ್ತೆ ಲಾಕ್ ಡೌನ್ ಘೋಷಣೆ: ಯಾವ ಸೇವೆಗಳು ಇರಲಿದೆ, ಯಾವ ಸೇವೆಗಳು ಇರುವುದಿಲ್ಲ ಇಲ್ಲಿದೆ ವಿವರ.

Pinterest LinkedIn Tumblr

ಹೊಸದಿಲ್ಲಿ/ ಮಂಗಳೂರು ,ಮಾರ್ಚ್.24: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಇಂದು ಮಧ್ಯರಾತ್ರಿಯಿಂದ 21 ದಿನಗಳ ಕಾಲ ಮತ್ತೆ ಲಾಕ್ ಡೌನ್ ಘೋಷಣೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣ ‘ಭಾರತ ಲಾಕ್ ಡೌನ್’ ಘೋಷಿಸಿದ್ದು ನಾಳೆಯಿಂದ 21 ದಿನಗಳ ಕಾಲ ಯಾವ ಸೇವೆಗಳು ಇರಲಿದೆ, ಯಾವ ಸೇವೆಗಳು ಇರುವುದಿಲ್ಲ ಇಲ್ಲಿದೆ ವಿವರ.

ಈ ಸೇವೆಗಳಿಗೆ ವಿನಾಯಿತಿ

►ಆಸ್ಪತ್ರೆಗಳು ಮತ್ತು ಆರೋಗ್ಯ ಸಂಬಂಧಿತ ಎಲ್ಲಾ ವಿಭಾಗಗಳು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ತಯಾರಿಕಾ ಮತ್ತು ಹಂಚಿಕೆ ವಿಭಾಗಗಳು (ಖಾಸಗಿ ಮತ್ತು ಸರಕಾರಿ) , ಡಿಸ್ಪೆನ್ಸರಿಗಳು, ಔಷಧ ಮತ್ತು ಔಷಧೀಯ ಸಲಕರಣೆಗಳ ಅಂಗಡಿಗಳು, ಲ್ಯಾಬ್ ಗಳು, ಕ್ಲಿನಿಕ್ ಗಳು, ನರ್ಸಿಂಗ್ ಹೋಂಗಳು, ಆಯಂಬುಲೆನ್ಸ್ ಇತ್ಯಾದಿಗಳು ಸೇವೆಗಳನ್ನು ನೀಡಲಿವೆ. ವೈದ್ಯಕೀಯ ಸಿಬ್ಬಂದಿ, ನರ್ಸ್ ಗಳು, ಪಾರಾ ಮೆಡಿಕಲ್ ಸಿಬ್ಬಂದಿ ಮತ್ತು ಇತರ ಆಸ್ಪತ್ರೆಗಳಿಗೆ ಸಂಬಂಧಿತ ವಾಹನ ಪ್ರಯಾಣಕ್ಕೆ ಅವಕಾಶವಿದೆ.

►ದಿನಸಿ ಅಂಗಡಿಗಳು, ತರಕಾರಿ ಮತ್ತು ಹಣ್ಣುಹಂಪಲು, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೂತ್ ಗಳು, ಮೀನು ಮತ್ತು ಮಾಂಸ, ಪ್ರಾಣಿಗಳ ಮೇವುಗಳ ಅಂಗಡಿಗಳಿಗೆ ವಿನಾಯಿತಿಗಳಿವೆ.
►ಬ್ಯಾಂಕ್ ಗಳು, ಇನ್ಶೂರೆನ್ಸ್ ಕಚೇರಿಗಳು, ಎಟಿಎಂಗಳಿಗೆ ವಿನಾಯಿತಿ

►ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ವಿನಾಯಿತಿ

►ಟೆಲಿಕಮ್ಯುನಿಕೇಶನ್, ಇಂಟರ್ ನೆಟ್ ಸೇವೆಗಳು, ಬ್ರಾಡ್ ಕಾಸ್ಟಿಂಗ್ ಮತ್ತು ಕೇಬಲ್ ಸೇವೆಗಳು, ಐಟಿ ಮತ್ತು ಐಟಿ ಸಂಬಂಧಿತ ಸೇವೆಗಳಿಗೆ ವಿನಾಯಿತಿ. ಸಾಧ್ಯವಿದ್ದಷ್ಟು ಮನೆಯಿಂದಲೇ ಕೆಲಸ ಮಾಡಲು ಸೂಚನೆ

►ಇ ಕಾಮರ್ಸ್ ಮೂಲಕ ಆಹಾರ, ಔಷಧ, ವೈದ್ಯಕೀಯ ಸಲಕರಣೆಗಳ ಡೆಲಿವರಿಗಳಿಗೆ ವಿನಾಯಿತಿ

►ಪೆಟ್ರೋಲ್ ಪಂಪ್ ಗಳು, ಎಲ್ ಪಿಜಿ, ಪೆಟ್ರೋಲಿಯಂ ಮತ್ತು ಗ್ಯಾಸ್ ಚಿಲ್ಲರೆ ಮತ್ತು ಸಂಗ್ರಹಣಾ ಔಟ್ ಲೆಟ್ ಗಳಿಗೆ ವಿನಾಯಿತಿ

►ಕೋಲ್ಡ್ ಸ್ಟೋರೇಜ್ ಮತ್ತು ಉಗ್ರಾಣ ಸೇವೆಗಳಿಗೆ ವಿನಾಯಿತಿ

►ಖಾಸಗಿ ಭದ್ರತಾ ಸೇವೆಗಳಿಗೆ ವಿನಾಯಿತಿ

►ಅಗತ್ಯ ಸಾಮಗ್ರಿಗಳ ತಯಾರಿಕೆಗೆ ಅವಕಾಶ

►ರಾಜ್ಯ ಸರಕಾರಗಳಿಂದ ಅನುಮತಿ ಪಡೆದ ಬಳಿಕ ನಿರಂತರ ಚಾಲನೆಯಲ್ಲಿರಬೇಕಾದ ಉತ್ಪಾದನಾ ಘಟಕಗಳಿಗೆ ಅವಕಾಶ

►ಅಗತ್ಯ ಸಾಮಗ್ರಿಗಳ ಸಾಗಾಟಕ್ಕೆ ಅವಕಾಶ

►ಅಗ್ನಿಶಾಮಕ, ಕಾನೂನು ಮತ್ತು ತುರ್ತು ಸೇವೆಗಳ ಸಾಗಾಟಕ್ಕೆ ಅವಕಾಶ

►ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ , ಜನರಿಗೆ, ವೈದ್ಯಕೀಯ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ವೈಮಾನಿಕ ಮತ್ತು ನೌಕಾ ಸಿಬ್ಬಂದಿಗೆ ವಸತಿ ಕಲ್ಪಿಸುವ ಹೊಟೇಲ್ ಗಳು, ಹೋಂ ಸ್ಟೇಗಳು , ಲಾಡ್ಜ್ ಗಳು ಮತ್ತು ಮೊಟೇಲ್ ಗಳಿಗೆ ಅವಕಾಶ.

►ಕ್ವಾರಂಟೈನ್ ಸೇವೆಗಳಿಗೆ ಗುರುತಿಸಲಾದ ಬಳಕೆಯಾಗುತ್ತಿರುವ ಕಟ್ಟಡಗಳಿಗೆ ಅವಕಾಶ

►ಪೊಲೀಸ್ , ಹೋಮ್ ಗಾರ್ಡ್ ಗಳು, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆ, ವಿಪತ್ತು ನಿರ್ವಹಣೆ ಮತ್ತು ಜೈಲುಗಳಿಗೆ ವಿನಾಯಿತಿ

►ಜಿಲ್ಲಾಡಳಿತ ಮತ್ತು ಖಜಾನೆಗೆ ವಿನಾಯಿತಿ

►ವಿದ್ಯುತ್ , ನೀರು ಸರಬರಾಜು ಮತ್ತು ಸ್ವಚ್ಛತಾ ಸೇವೆಗಳಿಗೆ ವಿನಾಯಿತಿ

ಈ ಸೇವೆಗಳಿಗೆ ಅವಕಾಶವಿಲ್ಲ

►ಖಾಸಗಿ ಮತ್ತು ವಾಣಿಜ್ಯ ಸಂಸ್ಥೆಗಳು ಬಾಗಿಲು ತೆರೆಯಲು ಅವಕಾಶವಿಲ್ಲ

►ಕೈಗಾರಿಕೆಗಳು ಬಂದ್

►ಎಲ್ಲಾ ಸಾರಿಗೆ ಸೇವೆಗಳು (ವೈಮಾನಿಕ, ರೈಲು, ರಸ್ತೆ)ಗಳು ಬಂದ್

►ಆತಿಥ್ಯ ಸೇವೆಗಳು ಬಂದ್

►ಎಲ್ಲಾ ಶೈಕ್ಷಣಿಕ, ತರಬೇತಿ, ಸಂಶೋಧನ, ಕೋಚಿಂಗ್ ಸಂಸ್ಥೆಗಳು ಬಂದ್

►ಎಲ್ಲಾ ಆರಾಧನಾ ಸ್ಥಳಗಳು ಬಂದ್, ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ. ಯಾವುದೇ ಧಾರ್ಮಿಕ ಸಭೆಗಳಿಗೆ ಪ್ರವೇಶವಿಲ್ಲ. ಇದರಲ್ಲಿ ಯಾವುದೇ ವಿನಾಯಿತಿಯಿಲ್ಲ.

►ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನಾ , ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಬಂದ್

►ಅಂತ್ಯಸಂಸ್ಕಾರಗಳಲ್ಲಿ 20ಕ್ಕಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ

►ಫೆಬ್ರವರಿ 15ರ ನಂತರ ವಿದೇಶಗಳಿಂದ ಭಾರತಕ್ಕೆ ಬಂದವರು ಮತ್ತು ಯಾರಿಗೆಲ್ಲಾ ಆರೋಗ್ಯ ಸಿಬ್ಬಂದಿ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಿದ್ದಾರೋ ಆ ನಿರ್ದಿಷ್ಟ ಅವಧಿಯವರೆಗೆ ಅವರು ಅದನ್ನು ಪಾಲಿಸಬೇಕು. ತಪ್ಪಿದಲ್ಲಿ ಐಪಿಸಿ ಸೆಕ್ಷನ್ 188ರ ಪ್ರಕಾರ ಕಾನೂನು ಕ್ರಮ

►ಭಾರತ ಸರಕಾರದ ಕಚೇರಿಗಳು , ಅದರ ಸ್ವಾಯತ್ತ ಕಚೇರಿಗಳು ಬಂದ್

Comments are closed.