ಕರ್ನಾಟಕ

ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಗ್ರಾಮದಲ್ಲಿ ಕೋವಿಡ್ 19 ವೈರಸ್ ಪಾಸಿಟಿವ್ ಪ್ರಕರಣ ಪತ್ತೆ

Pinterest LinkedIn Tumblr


ಚಿತ್ರದುರ್ಗ: ಜಿಲ್ಲೆಯಲ್ಲಿ ಮೊದಲ ಕೋವಿಡ್ 19 ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಭೀಮಸಮುದ್ರ ಗ್ರಾಮದಲ್ಲಿ ಈ ಪ್ರಕರಣ ಪತ್ತೆಯಾಗಿದ್ದು ಇಲ್ಲಿ ಗಯಾನದಿಂದ ಭಾರತಕ್ಕೆ ಬಂದಿದ್ದ 37 ವರ್ಷದ ಮಹಿಳೆಯ ರಕ್ತ ಪರೀಕ್ಷೆಯ ಸಂದರ್ಭದಲ್ಲಿ ಆಕೆಯಲ್ಲಿ ಕೋವಿಡ್ 19 ವೈರಸ್ ಪಾಸಿಟಿವ್ ಇರುವುದು ಗೊತ್ತಾಗಿದೆ.

ಒಟ್ಟು ಆರು ಜನ ನಗರಕ್ಕೆ ವಿದೇಶದಿಂದ ಬಂದಿದ್ದರು ಮತ್ತು ಅವರೆಲ್ಲರ ರಕ್ತದ ಮಾದರಿಗಳನ್ನು ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ವೈರಸ್ ಪ್ರಕರಣ ಪತ್ತೆಯಾದ ಭೀಮ ಸಮುದ್ರ ಗ್ರಾಮದಲ್ಲಿರುವ ಮಹಿಳೆಯ ಮನೆ ಸುತ್ತ ಐದು ಕಿಲೋಮೀಟರ್ ವ್ಯಾಪ್ತಿಯನ್ನು ರೆಡ್ ಝೋನ್ ಎಂದು ಘೋಷಿಸಿ ನಿಗಾ ವಹಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಮನೆಗಳನ್ನು ಹೊಂದಿರುವವರು ಯಾರೂ ಸದ್ಯಕ್ಕೆ ತಮ್ಮ ತಮ್ಮ ಮನೆಗಳಿಂದ ಹೊರಬರದಂತೆ ಆದೇಶಿಸಲಾಗಿದೆ.

ವಿದೇಶದಿಂದ ನಗರಕ್ಕೆ ವಾಪಾಸಾಗಿರುವ ಅರು ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಇವರಲ್ಲಿ ನಾಲ್ಕು ಜನರ ವರದಿ ನೆಗೆಟಿವ್ ಬಂದಿತ್ತು ಮತ್ತು ಇನ್ನೊಬ್ಬರ ವರದಿ ಇನ್ನಷ್ಟೇ ಕೈ ಸೇರಬೇಕಿದೆ.

ಕೋವಿಡ್ ವೈರಸ್ ಸೋಂಕಿತ ಮಹಿಳೆಯ ಜೊತೆ ಆಕೆಯ ಮಕ್ಕಳು ವಾಸಿಸುತ್ತಿದ್ದರು. ಆದರೆ ಮಕ್ಕಳಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಈ ಮಾಹಿತಿಗಳನ್ನು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಪತ್ರಕರ್ತರಿಗೆ ನೀಡಿದರು.

Comments are closed.