ಕರಾವಳಿ

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಸಾಂಸ್ಕೃತಿಕ ಕಲಾಮಹೋತ್ಸವ ಸಮಾರೋಪ ಸಮಾರಂಭ

Pinterest LinkedIn Tumblr

ಪರಿಷತ್ತು ಮಾತೃ ಸಂಸ್ಥೆಯಾಗಿ ಬೆಳೆಯಲು ಕಲಾವಿದರು ಪ್ರೋತ್ಸಾಹಿಸಬೇಕು – ಡಾ. ಸುರೇಂದ್ರಕುಮಾರ್ ಹೆಗ್ಡೆ

ಮುಂಬಯಿ : ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದು ಹತ್ತು ಮಕ್ಕಳ ತಾಯಿಯಂತೆ. ತಾಯಿಗೆ ಹತ್ತು ಮಕ್ಕಳಿರುವಾಗ ಆಕೆಯ ಜವಾಬ್ಧಾರಿಯನ್ನು ಒಬ್ಬ ಇನ್ನೊಬ್ಬನಿಗೆ ಮೇಲೆ ಹಾಕುವಂತೆ. ಅಂದರೆ ಅವನಿದ್ದಾನಲ್ಲ ನಾನ್ಯಾಕೆ ನೋಡಬೇಕು ಎಂಬಂತೆ. ಜಾತೀಯ ಹಾಗೂ ಬಾಷೀಯ ಸಂಘಟನೆಗಳಿಗೆ, ಅದು ನಮ್ಮ ಜಾತೀಯ ಯಾ ನಮ್ಮ ಬಾಷೆಯ ಸಂಸ್ಥೆ ಎಂಬಂತೆ ಸಹಕರಿಸುತ್ತಿದ್ದಾರೆ. ಆದರೆ ಇಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಿದ್ದು ಸಹಕಾರ ನೀಡುವ ಬಗ್ಗೆ ಕಳವಳ ಮೂಡುವುದು ಸಹಜ. ಆದುದರಿಂದ ಪರಿಷತ್ತು ಮಾತೃ ಸಂಸ್ಥೆಯಾಗಿ ಬೆಳೆಯಬೇಕಾದರೆ ಇತರ ಗಣ್ಯರೊಂದಿಗೆ ಕಲಾವಿದರು ಪ್ರೋತ್ಸಾಹಿಸಬೇಕು ಎಂದು ಡಾ. ಸುರೇಂದ್ರಕುಮಾರ್ ಹೆಗ್ಡೆ ಯವರು ನುಡಿದರು.

ಮಾರ್ಚ್ 14 ರಂದು ಸಂಜೆ ಸಂತಾಕ್ರೂಸ್ ಪೂರ್ವ, ಬಿಲ್ಲವ ಭವನದ ಸಭಾಗೃಹದಲ್ಲಿ ಜರಗಿದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಸಾಂಸ್ಕೃತಿಕ ಕಲಾಮಹೋತ್ಸವ – 2020 ಇದರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ಸುರೇಂದ್ರಕುಮಾರ್ ಹೆಗ್ಡೆ ಯವರು ನಮಗೆ ಸ್ವಂಥ ನಿವೇಶಣದ ಅಗತ್ಯವಿದೆ. ಇದರಿಂದ ನಾವು ನಮ್ಮ ಯೋಜನೆಗಳನ್ನು ಮಾಡಲು ಸಾಧ್ಯವಾಗುತ್ತದೆ. ನಮಗೆ ಆಶ್ರಯ ಬೇಕಿದ್ದು ಅದಕ್ಕೆ ಎಲ್ಲರೂ ಪ್ರೋತ್ಸಾಹಿಸಬೇಕು. ಅದನ್ನು ಮುಂದಿನ ವರ್ಷವಾದರೂ ಪೂರೈಸಬೇಕು. ಕಲೆಯನ್ನು ಉಳಿಸಿ ಬೆಳೆಸುದರೊಂದಿಗೆ ಸಂಕಷ್ಟದಲ್ಲಿರುವ ಕಲಾವಿದರಿಗೆ ಸಹಕರಿಸುವುದು ನಮ್ಮ ಉದ್ದೇಶವಾಗಿದೆ. ಹಿರಿಯ ಕಲಾವಿದರಿಗೆ ವೈದ್ಯಕೀಯ ಸಹಾಯ ಕಲಾವಿದರ ಮಕ್ಕಳಿಗೆ ಶೈಕ್ಷಣಿಕ ಸಹಾಯವನ್ನು ನಾವು ಮಾಡುತ್ತಿದ್ದೇವೆ. ಕಲಾವಿದ ವಿದ್ಯಾರ್ಥಿಯಾಗಿರಬೇಕು ಆಗ ಮಾತ್ರ ಕಲಾವಿದ ಬೆಳೆಯುತ್ತಾನೆ. ಕಲಾವಿದರು ತಮ್ಮ ಸ್ವಾಭಿಮಾನವನ್ನು ಬಿಟ್ಟು ಒಂದಾಗಿ ಕಲಾ ಸೇವೆ ಮಾಡಿದಲ್ಲಿ ನಮ್ಮ ಉದ್ದೇಶವು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುತ್ತದೆ. ಯಕ್ಷಗಾನದ ಪರಂಪರೆಯನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ ಎನ್ನುತ್ತಾ ಎಲ್ಲರ ಸಹಾಯ ಹಾಗೂ ಪ್ರೋತ್ಸಾಹವನ್ನು ಕೋರಿದರು.

ಮುಖ್ಯ ಅತಿಥಿ, ಕೆ. ಜೆ. ಸೋಮಯ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್. ಕೆ. ಭವಾನಿ ಇವರು ಮಾತನಾಡುತ್ತಾ ನಾವೆಲ್ಲರೂ ಕಲಾವಿದರೇ. ಎಲ್ಲರಲ್ಲೂ ಕಲೆ ಇದೆ ಆದರೆ ಅದು ವಿವಿಧ ರೀತಿಯಲ್ಲಿದೆ. ಮಾನವನ ಶಾರೀರಿಕ ಬೆಳವಣಿಗೆಯೊಂದಿಗೆ ಕಲೆಯ ಮೂಲಕ ಮಾನಸಿಕ ಬೆಳವಣಿಗೆ ಯಾಗುತ್ತದೆ. ಕಲಾವಿದನನ್ನು ಗುರುತಿಸಿ ಗೌರವಿಸುತ್ತಿರುವ ಕೆಲಸ ಅಭಿನಂದನೀಯ. ನಾಟಕ, ಯಕ್ಷಗಾನ, ನೃತ್ಯ ಇತ್ಯಾದಿಗಳು ದೃಶ್ಯ ಕಾವ್ಯಗಳು. ಶಾಕುಂತಳ ನಾಟಕವನ್ನು ಅಭಿನಯಿಸುವ ಯೋಗ ಈ ಪರಿಷತ್ತಿಗೆ ಬರಲಿ. ಇಂತಹ ಕಲೆಯನ್ನು ಇಲ್ಲಿ ಬೆಳೆಸುತ್ತಿರುವ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರಕ್ಕೆ ನಾವೆಲ್ಲರೂ ಪ್ರೋತ್ಸಾಹಿಸೋಣ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಂಗೀತ ನಿರ್ದೇಶಕ. ಗಾಯಕ, ಸಂಘಟಕ ಪಧ್ಮನಾಭ ಸಸಿಹಿತ್ತ್ಲು ಇವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಕಲಾಶ್ರೀ ಪ್ರಶಸ್ತಿ ಪ್ರಧಾನಿಸಿ ಸನಿಸಿದರು. ಜಿ. ಟಿ. ಆಚಾರ್ಯ ಇವರು ಅಭಿನಂದನಾ ಬಾಷಣವನ್ನು ಮಾಡಿದರು.

ಕಲಾಶ್ರೀ ಪ್ರಶಸ್ತಿ ಪ್ರಾಯೋಜಕರಾದ ಡಾ. ಆರ್. ಕೆ. ಶೆಟ್ಟಿಯವರು ಪಧ್ಮನಾಭ ಸಸಿಹಿತ್ತ್ಲು ಇವರನ್ನು ಅಭಿನಂದಿಸುತ್ತಾ ಇಂದು ನನಗೂ ಸಂತೋಷದ ದಿನ. ಶಾಲಾ ಕಾಲೇಜುಗಳಲ್ಲಿ ಪಧ್ಮನಾಭ ಸಸಿಹಿತ್ತ್ಲು ಮತ್ತು ನಾನು ಒಟ್ಟಿಗೆ ಕಲಿತವ. ಕೆಲಸದೊಂದಿಗೆ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು ಈ ಕಲಾಶ್ರೀ ಪ್ರಶಸ್ತಿ ಪ್ರಶಸ್ತಿಯು ಸರಿಯಾದ ವ್ಯಕ್ತಿಗೆ ಲಭಿಸಿದೆ. ಪಧ್ಮನಾಭ ಸಸಿಹಿತ್ತ್ಲು ಇವರು ಸಮಾಜಕ್ಕೆ ಬಹಳಷ್ಟನ್ನು ನೀಡಿದ್ದು ಸಮಾಜವು ಅವರಿಗೆ ನೀಡಬೇಕಾಗಿದ್ದು ಇದಕ್ಕೆ ನಾವೂ ಸೂಕ್ತ ಯೋಜನೆಯನ್ನು ಮಾಡಲಿದ್ದು ಎಲ್ಲರೂ ಸಹಕರಿಸಬೇಕೆಂದರು.

ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಧ್ಮನಾಭ ಸಸಿಹಿತ್ತ್ಲು ಅವರು ನಿಜವಾಗಿ ಈ ಪ್ರಶಸ್ತಿಯು ಸಾಧಕರ ಕೈ ಸೇರಬೇಕಾದದ್ದು. ನಾನು ಅದಕ್ಕೆ ಅರ್ಹನೋ ಗೊತ್ತಿಲ್ಲ. ಡಾ. ಆರ್. ಕೆ. ಶೆಟ್ಟಿಯವರು ಕಳೆದ  40 ವರ್ಷಗಳಿಂದ ನನಗೆ ಆತ್ಮೀಯರು. ಎಲ್ಲರೂ ಒಂದಾಗಿ ಕಲಾಸೇವೆಯನ್ನು ಮಾಡೋಣ. ಡಾ. ವಿಜಯ ಕುಮಾರ್ ಶೆಟ್ಟಿಯವರಂತವರ ಮುಂದೆ ಈ ಪ್ರಶಸ್ತಿಯನ್ನು ಪಡೆಯುವುದು ಅಭಿನಂದನೀಯ. ಈ ಪ್ರಶಸ್ತಿಯನ್ನು ನನಗೆ ನೀಡಿ ನೀವು ನನ್ನ ಒಳ್ಳೆತನವನ್ನು ಗುರುತಿಸಿದ್ದೀರಿ. ನನಗೆ ಬಹಳಷ್ಟು ಸಂಘ ಸಂಸ್ಥೆಗಳು ನನಗೆ ಸಹಕರಿಸಿದೆ. ಭಗವತಿ ಮಾತೆಯ ಅನುಗೃಹದಿಂದ ಸಿಕ್ಕಿದ ಈ ಪ್ರಶಸ್ತಿಯನ್ನು ನನ್ನ ಸಮೂಹದ ಸ್ನೇಹ ಕೂಟಕ್ಕೆ ಅರ್ಪಿಸುತ್ತೇನೆ ಎಂದರು.

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ. ಸುರೇಂದ್ರಕುಮಾರ್ ಹೆಗ್ಡೆ, ಮುಖ್ಯ ಅತಿಥಿ, ಕೆ. ಜೆ. ಸೋಮಯ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಸ್. ಕೆ. ಭವಾನಿ, ಅತಿಥಿ ಜವಾಬ್, ಅಂಧೇರಿ ಇದರ ಅಧ್ಯಕ್ಷರಾದ ಸಿಎ ಐ. ಆರ್. ಶೆಟ್ಟಿ, ಸಾನ್ವಿಸ್ಟಾರ್ ಹೊಸ್ಪಿಟಾಲಿಟೀ ಯ ಸಿ.ಎಂ.ಡಿ. ಮಾನಾಡಿ ಸಂತೋಷ್ ಕುಮಾರ್ ಶೆಟ್ಟಿ, ಖ್ಯಾತ ಲೆಕ್ಕಪರಿಶೋಧಕರಾದ ಸಿಎ ಹರಿದಾಸ್ ಭಟ್, ರಂಗಭೂಮಿ ಫೈನ್ ಆರ್ಟ್ ಮುಂಬಯಿಯ ಅಧ್ಯಕ್ಷರಾದ ತಾರನಾಥ ಶೆಟ್ಟಿ ಪುತ್ತೂರು, ತ್ರಿಮೂರ್ತಿ ಕ್ಯಾಟರಿಂಗ್ ಸರ್ವಿಸಸ್ ನ ಆಶೋಕ ಶೆಟ್ಟಿ ಮುಂಡ್ಕೂರು, ಶ್ರೀ ಶನೀಶ್ವರ ದೇವಸ್ಥಾನ ನಿರೂಲ್ ಇದರ ಟ್ರಷ್ಟಿ ಪ್ರಭಾಕರ ಹೆಗ್ಡೆ, ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಆರ್ ಬೆಳ್ಚಡ, ಮೀರಾರೋಡ್ ಅಮಿತಾ ಕಲಾ ಮಂದಿರದ ಅಮಿತಾ ಜತ್ತಿನ್, ಕಲಾಶ್ರೀ ಪ್ರಶಸ್ತಿ ಪ್ರಾಯೋಜಕರಾದ ಡಾ. ಆರ್. ಕೆ. ಶೆಟ್ಟಿ, ತಾರಾ ಬಂಗೇರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಉಪಾಧ್ಯಕ್ಷರಾದ ಅರವಿಂದ ಶೆಟ್ಟಿ ಕೊಜಕೊಳ್ಳಿ ಎಲ್ಲರನ್ನು ಸ್ವಾಗತಿಸಿದರು. ಉಪಾಧ್ಯಕ್ಷರಾದ ಕಮಲಾಕ್ಷ ಸರಾಫ್, ಜೊತೆ ಕಾರ್ಯದರ್ಶಿ ಚಂದ್ರಾವತಿ ವಸಂತ್, ಜೊತೆ ಕೋಶಾಧಿಕಾರಿ ನವೀನ್ ಇನ್ನ ಬಾಳಿಕೆ, ರಾಜು ಶ್ರೀಯಾನ್, ಪ್ರಥ್ವಿರಾಜ್, ಸಂಚಾಲಕ ರಮೇಶ್ ಶಿವಪುರ, ಪರಿಷತ್ತಿನ ವಿವಿಧ ಉಪಸಮಿತಿಗಳ ಪಧಾದಿಕಾರಿಗಳು ಮತ್ತು ಎಲ್ಲಾ ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಬಾಬಾ ಪ್ರಸಾದ್ ಅರಸ್ ಕಾರ್ಯಕ್ರಮವನ್ನು ನಿರೂಪಿಸಿದರು, ಗೌರವ ಕೋಶಾಧಿಕಾರಿ ಪಿ. ಬಿ. ಚಂದ್ರಹಾಸ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಮನೋರಂಜನೆಯ ಅಂಗವಾಗಿ ಪರಿಷತ್ತಿನ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಸುಧನ್ವ ಮೋಕ್ಷ ಪ್ರಸ್ತುತಪಡಿಸಲಾಯಿತು.

ವರದಿ: ಈಶ್ವರ ಎಂ ಐಲ್   /  ಚಿತ್ರ: ದಿನೇಶ್ ಕುಲಾಲ್

Comments are closed.