ಕರಾವಳಿ

ಪಲಿಮಾರು ಬಾಗಿ ಪೂಜಾರಿ ಕುಟುಂಬಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಬಿಲ್ಲವ ಚೇಂಬರ್ಸ್ & ಕೋಮರ್ಸ್ ವತಿಯಿಂದ ಮನೆ ನಿರ್ಮಾಣಕ್ಕೆ ಸಹಾಯ ಹಸ್ತ

Pinterest LinkedIn Tumblr

ಪಲಿಮಾರು ; ಪಲಿಮಾರು ಗ್ರಾಮದ ನಿವಾಸಿ ಹಿರಿಯ ಬಿಲ್ಲವ ಸಮಾಜದ ಮುತ್ಸದ್ದಿ ಶ್ರೀಮತಿ ಬಾಗಿ ಪೂಜಾರಿ ಅವರ ಮನೆ ನಿರ್ಮಾಣ ಕಾರ್ಯಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ನ ಜಂಟಿಯಾಗಿ ಸಹಾಯ ಹಸ್ತವನ್ನು ನೀಡಿದ್ದಾರೆ.

ಪಲಿಮಾರು ಗ್ರಾಮದ ಸುತ್ತಮುತ್ತ ಸುಮಾರು ಐನೂರಕ್ಕೂ ವಿಕ್ಕಿ ಹೆರಿಗೆ ಯನ್ನು ಮಾಡಿರುವ ಬಾಗಿ ಪೂಜಾರಿ ಅವರ ನಿವೇಶನವು ಶಿಥಿಲ ಕೊಂಡಿರುವುದನ್ನು ಗಮನಿಸಿ ಮನೆ ಮಾಡುವುದಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೇತೃತ್ವ ವಹಿಸಿರುವ ಐಕಳ ಹರೀಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮತ್ತು ಯುವ ಉದ್ಯಮಿ ಎನ್ ಟಿ ಪೂಜಾರಿ ಅವರ ನೇತೃತ್ವದ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ನ ಯ ಬಾಗಿ ಪೂಜಾರಿಯವರ ಮನೆ ನಿರ್ಮಾಣಕ್ಕೆ ಸಹಾಯ ಹಸ್ತವನ್ನು ನೀಡುವುದಕ್ಕೆ ಮುಂದಾಗಿದ್ದಾರೆ

ಮನೆ ನಿರ್ಮಾಣದ ಕೆಲಸವನ್ನು ವೀಕ್ಷಿಸಲು ಹೋಗಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮತ್ತು ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ನಿರ್ದೇಶಕ ಗಂಗಾಧರ್ ಏನ್ ಅಮೀನ್ ಕರ್ನಿರೆ ಬಾಗಿ ಪೂಜಾರಿಯವರ ಕುಟುಂಬದ ಸುಮನ ವಿಠ್ಠಲ್ ಪೂಜಾರಿಯವರಿಗೆ ಸಹಾಯ ಹಸ್ತವನ್ನು ಸಮರ್ಪಿಸಿದ್ದರು ಈ ಸಂದರ್ಭದಲ್ಲಿ ಮುಖೇಶ್ ಅಮೀನ್ ಕರ್ನಿರೆ. ಜೈದೀಪ್ ಅಮೀನ್ ಕರ್ನಿರೆ ಮತ್ತಿತರರು ಉಪಸ್ಥಿತರಿದ್ದರು.

_ದಿನೇಶ್ ಕುಲಾಲ್

Comments are closed.