ಮಂಗಳೂರು: ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಮತ್ತು ಥ್ರೊ ಬಾಲ್ ಕ್ರೀಡಾಕೂಟ ದಲ್ಲಿ ಮಂಗಳೂರು ವಕೀಲರ ಸಂಘದ ತಂಡ ಗಮನಾರ್ಹ ಸಾಧನೆ ಮಾಡಿದೆ.
ವಕೀಲರ ಸಂಘದ ಪುರುಷರ ತಂಡವರು ವಾಲಿಬಾಲ್ ಪಂದ್ಯಾಟದಲ್ಲಿ ರನ್ನರ್ ಅಪ್ ಸಾಧನೆ ಮಾಡಿದೆ. ಫೈನಲ್ ಪಂದ್ಯದಲ್ಲಿ ಉಡುಪಿ ತಂಡದ ಎದುರು ತೀವ್ರ ಹಣಾಹಣಿಯ ಪೈಪೋಟಿ ನಡೆಸಿ ಒಂದು ಅಂಕ ಗಳಿಂದ ಪರಾಭವಗೊಂಡು ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿತು.
ತಂಡದ ಪ್ರತಿಭಾನ್ವಿತ ಕುಮಾರ್ ಪುತ್ರನ್ ಉತ್ತಮ ಹೊಡೆತಗಾರ ಪುರಸ್ಕಾರಕ್ಕೆ ಪಾತ್ರರಾದರು.
ಮಹಿಳಾ ತಂಡ ಕೂಡ ರನ್ನರ್ ಅಪ್ ಸಾಧನೆ ಮಡಿ ಗಮನ ಸೆಳೆಯಿತು. ಫೈನಲ್ ಪಂದ್ಯದಲ್ಲಿ ಉಡುಪಿ ತಂಡದ ಎದುರು ತೀವ್ರ ಹಣಾಹಣಿಯ ಪೈಪೋಟಿ ನಡೆಸಿತು. ಕೇವಲ ಒಂದು ಅಂಕಗಳಿಂದ ಪರಾಭವಗೊಂಡು ಚಾಂಪಿಯನ್ ಪಟ್ಟದಿಂದ ವಂಚಿತವಾಗಿ ದ್ವಿತೀಯ ಸ್ಥಾನಿಯಾಯಿತು.
ಮಹಿಳಾ ತಂಡದ ನೆಸ್ಲಿನ ಪ್ರಿಯಾ ಡಿಸೋಜ ಉತ್ತಮ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.
ವಾಲಿಬಾಲ್ ತಂಡದ ನಾಯಕತ್ವವನ್ನು ನವೀನ್ ಕುಮಾರ್ ಎಂ.ಜಿ. ವಹಿಸಿದ್ದು, ಕುಮಾರ ಪುತ್ರನ್, ಆಶಿಫ್, ಪ್ರಮೋದ್ ಕೆರ್ವಾಶೆ, ಮನೋಹರ್, ಶೀತಲ್ ಕುಮಾರ್ ಜೈನ್, ಯೋಗೀಶ್ ಮೊದಲಾದವರು ತಂಡದ ಸದಸ್ಯರಾಗಿದ್ದರು.
ಮಹಿಳಾ ತಂಡದ ನಾಯಕತ್ವವನ್ನು ಜೀಟಾ ಮರಿಯಾ ಡಿಸೋಜ ವಹಿಸಿದ್ದರು. ತಂಡದಲ್ಲಿ ನೆಸ್ಲಿನ ಪ್ರಿಯಾ ಡಿಸೋಜ, ಲೇಖನ, ಸುಪ್ರಿಯಾ, ದೀಕ್ಷಿತಾ, ನಿಶಿತ್ ಲೋಬೋ ಮೊದಲಾದವರು ತಂಡದ ಸದಸ್ಯರಾಗಿದ್ದರು.
ದ್ವಿತೀಯ ಸ್ಥಾನಿಯಾಗಿ ಗೆದ್ದ ಪುರುಷ ಹಾಗೂ ಮಹಿಳಾ ತಂಡಕ್ಕೆ ಮಂಗಳೂರು ವಕೀಲರ ಸಂಘ ಅಭಿನಂದನೆ ಸಲ್ಲಿಸಿದೆ.








Comments are closed.