ಕರಾವಳಿ

ಪೆನ್ನಿನಿಂದ ಪರಿಸರ ರಕ್ಷಣೆಗೆ ಮುಂದಾದ 21 ವಿದ್ಯಾರ್ಥಿಗಳಿಗೆ ಇಕೋ ಫ್ರೆಂಡ್ ಪ್ರಶಸ್ತಿ 

Pinterest LinkedIn Tumblr

ಮಂಗಳೂರು : ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೂಮಾಲಿನ್ಯ ವನ್ನು ತಡೆಯಲು ತಾವು ಬರೆಯುವ ಪೆನ್ನುಗಳು ಭೂಮಿಗೆ ಸೇರದಂತೆ ಶ್ರಮಿಸಿದ 21 ಪರಿಸರ ಪ್ರೇಮಿ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಫಿಲೋಮಿನಾ ಲೂವಿಸ್‌ರವರು ಇಕೋ ಫ್ರೆಂಡ್ 2020 ಪದಕವನ್ನು ನೀಡುವುದರೊಂದಿಗೆ ಸಮ್ಮಾನಿಸಿದರು.

ಇಡಲು ಬಿಡಲು ಸುಡಲು ಆಗದ ವಸ್ತುವಾದ ಪ್ಲಾಸ್ಟಿಕನ್ನು ಶಾಲೆಯಲ್ಲಿ ಸ೦ಪೂರ್ಣವಾಗಿ ನಿಷೇಧಿಸಿದ್ದು , ಪ್ಲಾಸ್ಟಿಕ್ ನಿರ್ಮೂಲನೆಗೆ ವಿದ್ಯಾರ್ಥಿಗಳು ಬರೆಯಲು ಉಪಯೋಗಿಸುವ ಪೆನ್ನುಗಳು ಕೂಡ ಭೂಮಾಲಿನ್ಯಕ್ಕೆ ಕಾರಣವಾಗಿದೆ ಎ೦ಬ ಜಾಗೃತಿಯನ್ನು ವಿದ್ಯಾರ್ಥಿಗಳಿಗೆ ಮೂಡಿಸಲಾಗಿದೆ. ಮರುಬಳಕೆಗೆ ಯೋಗ್ಯವಲ್ಲದ ಮತ್ತು ಬೇಡವಾದ ಪೆನ್ನುಗಳನ್ನು ಶಾಲಾ ಶಿಕ್ಷಕರಾದ ಶ್ರೀ ಲೀಯೋ ಡಿ’ಸೋಜ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸುತ್ತಿದ್ದಾರೆ.

ಪೆನ್ನು ಬಳಸಿ ಅದು ಬೇಡವಾದ ನಂತರ ಅದನ್ನು ಪರಿಸರಕ್ಕೆ ಎಸೆಯುವುದರ ಬದಲು ಅದನ್ನು ಸಂಗ್ರಹಿಸುತ್ತಿದ್ದಾರೆ. . ಈ ಪೆನ್ನುಗಳು ಭೂಮಿಗೆ ಸೇರುವುದರಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದು , ಈ ಯೋಜನೆಗೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದಾರೆ.

ಶಾಲೆಯಲ್ಲಿ ಇಂತಹ ಅಭ್ಯಾಸಗಳನ್ನು ಮಕ್ಕಳಿಗೆ ಚಿಕ್ಕಂದಿನಿಂದಲೇ ಬೆಳೆಸುವುದರಿಂದ ವಿಧ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಬಗ್ಗೆ ಕಾಳಜಿ ಮೂಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇದು ಪರಿಸರ ರಕ್ಷಣೆ ದೊಡ್ಡ ಕೊಡುಗೆಯಾಗುವುದರಲ್ಲಿ ಸಂಶಯವಿಲ್ಲ.

Comments are closed.