ಕರಾವಳಿ

ಸರ್ವಜ್ಞರ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು : ತಾ.ಪಂ. ಅಧ್ಯಕ್ಷ ಮಹಮ್ಮದ್ ಮೊನು ಕರೆ

Pinterest LinkedIn Tumblr

ಮಂಗಳೂರು : ಸರ್ಕಾರವು 22 ವಿವಿಧ ಸಂತರ ಜಯಂತಿಗಳನ್ನು ಆಚರಣೆ ಮಾಡಿಕೊಂಡು ಬಂದಿದೆ. ಜನರು ಅವರ ಸಂದೇಶ ಮತ್ತು ಸಾಧನೆಗಳನ್ನು ಸ್ವಲ್ಪ ಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ತಾಲೂಕು ಪಂಚಾಯತ್, ಅಧ್ಯಕ್ಷ ಮಹಮ್ಮದ್ ಮೊನು ತಿಳಿಸಿದರು.

ಮಂಗಳೂರಿನ ತುಳು ಭವನದಲ್ಲಿ ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದ.ಕ. ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಕುಲಾಲರ/ ಕುಂಬಾರರ ಯುವವೇದಿಕೆ, ಕರಾವಳಿ ವಿಭಾಗ ಕರಾವಳಿ ಕುಲಾಲರ ಸಂಘಟನೆಗಳ ಒಕ್ಕೂಟ, ಮಂಗಳೂರು ಇವರ ವತಿಯಿಂದ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ‘ಸರ್ವಜ್ಞನು ವೇದ, ಉಪನಿಷತ್’ಗಳ ಸಾರವನ್ನು ತ್ರಿಪದಿಗಳ ಮೂಲಕ ಜನಸಾಮಾನ್ಯರಿಗೆ ತಲಪುವಂತೆ ಮಾಡಿದ್ದಾರೆ. ಇದನ್ನು ಜನಸಾಮಾನ್ಯರು ಪಾಲನೆ ಮಾಡಬೇಕು, ಅದರ ಮಹತ್ವ ತಿಳಿದುಕೊಳ್ಳಬೇಕು. ಜಗತ್ತಿನಲ್ಲಿ ಇರುವುದು ಒಂದೇ ಶಕ್ತಿ ಅದುವೇ ಏಕೀಶ್ವರ ಶಕ್ತಿ ಎಂದು ಸರ್ವಜ್ಞರು ಹೇಳಿದ್ದಾರೆ.

ಇಂದು ನಡೆಯುವ ಕಪಟ, ಮೋಸ, ಅನಾಚಾರಗಳ ಕುರಿತು ಕೂಡ ತಮ್ಮ ನಿಲುವನ್ನು ತಿಳಿಸಿದ್ದಾರೆ. ಮನುಷ್ಯ ತನ್ನ ಜೀವನ ನಡೆಸುವುದಕ್ಕೆ ಎಷ್ಟು ಬೇಕು ಅಷ್ಟೇ ಹಣಗಳಿಸಿಕೊಂಡು ಜೀವನ ಸಾಗಿಸಬೇಕು ಅದನ್ನು ಬಿಟ್ಟು ಆಡಂಬರದ ಜೀವನ ನಡೆಸಬಾರದು ಎಂದು ತಮ್ಮ ವಚನದಲ್ಲಿ ಸಂದೇಶ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ ಸಮಾಜದಲ್ಲಿ ಮಕ್ಕಳು ಇಂತಹ ಮಹಾನ್ ಸಂತರ, ನಾಯಕರ ಪುಸ್ತಕ ಓದುವ ಹವ್ಯಾಸ ಬೆಳೆಸುವುದರಿಂದ ಮುಂದೆ ಅವರು ಸುಸಂಸ್ಕøತ ಜನರಾಗಿ ಬೆಳೆಯುತ್ತಾರೆ.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಉಡುಪಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಂಯೋಜಕ ದುಗ್ಗಪ್ಪ ಮಾತನಾಡಿ ಸಾಮಾಜಿಕ ಸುಧಾರಣೆಯನ್ನು ತರುವಲ್ಲಿ ಸರ್ವಜ್ಞರ ಪಾತ್ರ ತುಂಬಾ ದೊಡ್ಡದು. ಯುವಕರು ಸರ್ವಜ್ಞರ ವಚನದ ಅರ್ಥವನ್ನು ತಿಳಿದುಕೊಂಡರೆ ಅವರ ಭವಿಷ್ಯ ಬದಲಾವಣೆ ಹೊಂದುತ್ತದೆ. ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು ಹೊರತು ಇಲ್ಲದ ದೇವರನ್ನು ಹುಡಿಕಿಕೊಂಡು ಹೋಗಬಾರದು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ (ರಿ) ಅಧ್ಯಕ್ಷ ಪ್ರೋಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಅಧ್ಯಕ್ಷ ಕೃಷ್ಣ ಅತ್ತಾವರ, ದ.ಕ. ಜಿಲ್ಲಾ ಕರಾವಳಿ ಕುಲಾಲ ಕುಂಬಾರ ವೇದಿಕೆ ಅಧ್ಯಕ್ಷ ಸುಧಾಕರ್ ಕುಲಾಲ್, ದ.ಕ. ಜಿಲ್ಲಾ ಕರಾವಳಿ ಕುಲಾಲ ಕುಂಬಾರ ವೇದಿಕೆ, ವಿಭಾಗೀಯ ಅಧ್ಯಕ್ಷ ಜಯೇಶ್ ಗೋವಿಂದ್, ಕನ್ನಡ ಮತ್ತು ಸಂಸ್ಕøತ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಮತ್ತಿತರರು ಉಪಸ್ಥಿತರಿದರು.

Comments are closed.