ಉಡುಪಿ: ದೇಶದಲ್ಲಿ ಬೇರೆ ಎಲ್ಲದಕ್ಕೂ ಕ್ಷಮೆಯೂ ಇದೆ ಜೊತೆಗೆ ಶಿಕ್ಷೆಯೂ ಇದೆ. ಆದರೆ ದೇಶದ್ರೋಹದ ಚಟುವಟಿಕೆಗೆ ಕ್ಷಮೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಶನಿವಾರ ಕಾರ್ಕಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಕ ಪರ ಘೋಷಣೆ ಕೂಗಿದವರನ್ನು ಕ್ಷಮಿಸಿ ಎಂದು ಯಾರು ಕೇಳಬಾರದು ಇಂತಹ ಮಾನಸಿಕತೆ ಬಹಳ ಅಪಾಯಕಾರಿಯಾಗಿದೆ. ನಮ್ಮ ದೇಶದ ರಕ್ಷಣೆಗಾಗಿ ಸೈನಿಕರು ಗುಂಡಿಗೆ ಬಲಿಯಾಗುವುದು ಯಾಕೆ? ಹಿಮಾಲಯದ ಮೈನಸ್ 20 ಡಿಗ್ರಿಯಲ್ಲಿ ಯಾಕೆ ದೇಶಕಾಯಬೇಕು ಎಂದು ಪ್ರಶ್ನಿಸಿದರು.
ಪಾಕಿಸ್ತಾನದ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ? ಇಲ್ಲಿಯ ಅನ್ನ ತಿಂದು ಶತ್ರು ದೇಶದ ಗುಣಗಾನ ಮಾಡ್ತೀರಾ ಈ ಮಾನಸಿಕತೆ ಬಹಳ ಅಪಾಯಕಾರಿಯಾಗಿದ್ದು ಅಮೂಲ್ಯಳ ಹಿಂದೆ ಒಂದು ವ್ಯವಸ್ಥಿತ ತಂಡವೇ ಇದ್ದು ಈ ಬಗ್ಗೆ ಸ್ವತಃ ಆಕೆಯೇ ಬಹಿರಂಗಪಡಿಸಿದ್ದಾಳೆ. ಈ ಪ್ರಕರಣ ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅವರು ಹೇಳಿದರು.
Comments are closed.