ಮಂಗಳೂರು: ಸಿಎಎ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಎನ್ನುವ ಯುವತಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ಖಂಡಿಸಿ ವಿಹಿಂಪ , ಬಜರಂಗದಳ ನೇತೃತ್ವದಲ್ಲಿ ಮಗರದ ಕದ್ರಿ ಮಲ್ಲಿಕಟ್ಟೆ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಹಿಂಪ ಮುಖಂಡ ಎಂ ಬಿ ಪುರಾಣಿಕ್ ಅವರು ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಹಿಂದಿರುವ ದುಷ್ಟ ಶಕ್ತಿ ಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಅವರು ಅಮೂಲ್ಯ ಪಾಕ್ ಪರ ಘೋಷಣೆ ಬಗ್ಗೆ ಎನ್ ಐ ಎ ತನಿಖೆಯಾಗಬೇಕು. ಆಕೆಯ ಹೇಳಿಕೆಯ ಹಿಂದೆ ಪಾಕಿಸ್ತಾನದ ಭಯೋತ್ಪಾದಕರ ಕೈವಾಡದ ಸಾಧ್ಯತೆ ಇದೆ ಎಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದ ವಿವಿಧ ಹಿಂದೂ ಸಘಟನೆಗಳ ಪ್ರಮುಖರಾದ ಗೋಪಾಲ್ ಕುತ್ತಾರ್ ಶಿವಾನಂದ ಮೆಂಡನ್ , ರವಿ ಅಸೈಗೋಳಿ ಪುನೀತ್ ಅತ್ತಾವರ .ಮುರುಳೀಧರ್ ರಾವ್. ಸುರೇಖಾ ರಾಜ್, ಅಶಾ ಜಗದೀಶ್ , ಸಂತೋಷ್ ಕದ್ರಿ , ಗುರು ಪ್ರಸಾದ್ ಉಳಾಲ, ಚರಣ್ ರಾಜ್ ಕುಲಶೇಖರ. ವಿಶಾಲಾಕ್ಷಿ ಸುರತ್ಕಲ್, ಗೋಷಿತಾ ಮೊದಲಾದವರು ಅಮೂಲ್ಯ ಪಾಕ್ ಪರ ಮಾಡಿದ ಘೋಷಣೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.



Comments are closed.