ಕರಾವಳಿ

ಸಂಸ್ಕಾರದ ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆಗಳು ಅಗತ್ಯ: ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ

Pinterest LinkedIn Tumblr

ಇಡ್ಯಾದಲ್ಲಿ ಬ್ರಹ್ಮಕಲಶ – ಧಾರ್ಮಿಕ ಸಭೆ

ಸುರತ್ಕಲ್ : ನಾಮ ಸಂಕೀರ್ತನೆ ಬ್ರಹ್ಮಕಲಶದ ಮುಖ್ಯ ಉದ್ದೇಶ ನಮ್ಮ ಪಥದಲ್ಲಿ ನಡೆಯುವಂತಹ ಧ್ಯೇಯ. ನಾವು ಮಾಡುವ ಒಂದೊಂದು ಕಾರ್ಯ ವಿಶ್ವದ ಸಾಮರಸ್ಯಕ್ಕೆ ಕಾರಣ ವಾಗುತ್ತದೆ. ಆಧ್ಯಾತ್ಮಿಕ ಧಾರ್ಮಿಕ ಚಿಂತನೆಗಳು ನಮ್ಮ ಪಾದರಕ್ಷೆ. ಮನ ಸ್ಸನ್ನು ನಿಯಂತ್ರಿಸಿದರೆ ಮನಸ್ಥಿತಿಯು ನಿಯಂತ್ರಿತವಾಗುತ್ತದೆ. ಸಂಸ್ಕಾರ ನಮ್ಮ ಜೀವನದಲ್ಲಿ ಬೇಕಾದರೆ ಆಧ್ಯಾತ್ಮಿಕ ಚಿಂತನೆಗಳು ಅತ್ಯಗತ್ಯ ಎಂದು ಮಂಗಳೂರು ಮಾತ ಅಮೃತಾನಂದ ಮಯಿ ಮಠದ ಮಠಾಪತಿ ಬ್ರಹ್ಮಚಾರಿಣಿ ಮಂಗಳಾ ಮೃತ ಚೈತನ್ಯ ನುಡಿದರು.

ಅವರು ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಲಿರುವ ಬ್ರಹ್ಮಕಲಶಾಭೀಷೇಕ, ಅಷ್ಟಪವಿತ್ರ ನಾಗಮಂಡಲೋತ್ಸವ ಹಾಗೂ ಧರ್ಮನೇಮೋತ್ಸವ ದ ಅಂಗವಾಗಿ  ಜರುಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯದೀಶೆ ಪ್ರೀತ್ ಸುರತ್ಕಲ್ ಶಿಕಾರಿಪುರ ಅವರು ನೇರ ವೇರಿಸಿದರು. ಸಭಾ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಎಮ್ ಆರ್ ಪಿ ಎಲ್, ಸಿ ಎಸ್ ಆರ್ ಚೀಫ್ ಮ್ಯಾನೇ ಜರ್ ವೀಣಾ ಟಿ ಶೆಟ್ಟಿ ಚೇಳಾರು ಅವರು ವಹಿಸಿದ್ದರು. ಅಖಿಲಾ ಭಾರತ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಕುಮಾರಿ ಅಕ್ಷತಾ ಬಜ್ಪೆ ಅವರು ಭಾರತೀಯ ಮಹಿಳೆ ವಿಚಾರ ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು.

ಮಂಗಳೂರು ತಾ. ಮಹಿಳಾ ಮಂಡಲ ಒಕ್ಕೂಟ ಅಧ್ಯಕ್ಷೆ ಚಂಚಲ ತೇಜೋಮಯಿ, ಸಾಹಿತಿ ಶಕುಂತಲಾ ಭಟ್ ಹಳೆಯಂಗಡಿ, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಸುರತ್ಕಲ್ ಎಚ್ ವಿ ಸಂಘ ಉಪಾಧ್ಯಕ್ಷೆ ಐ ಉಮಾದೇವಿ, ಮನಪಾ ಸದಸ್ಯೆ ಸರಿತಾ ಶಶಿಧರ್, ವೀಣಾ ಕೃಷ್ಣಮೂರ್ತಿ ಮಂಗಳೂರು, ಮನಪಾ ಸದಸ್ಯರಾದ ಶೋಭಾ ರಾಜೇಶ್, ಲಕ್ಷ್ಮೀ ಶೇಖರ್ ದೇವಾಡಿಗ, ಶ್ವೇತಾ ಪೂಜಾರಿ, ದಕ ಜಿಲ್ಲಾ ಹಾಲು ಒಕ್ಕೂಟ ಮಂಗಳೂರು ಅಧ್ಯಕ್ಷೆ ಸುಭದ್ರಾ ರಾವ್, ಸುರತ್ಕಲ್ ಮಹಿಳಾ ಕೇಂದ್ರ ಅಧ್ಯಕ್ಷೆ ಸುಲೋಚನಾ ವಿ ರಾವ್, ಕುಳಾಯಿ ಶ್ರೀ ವೆಂಕಟ ರಮಣ ಹಿ ಪ್ರಾ ಶಾಲೆ ಸಂಚಾಲಕಿ ಕಲಾವತಿ ಟೀಚರ್, ನಾಟ್ಯ ವಿದೂಷಿ ಸುಮಂ ಗಲಾ ರತ್ನಾಕರ್ ಮಂಗ ಳೂರು, ನ್ಯಾಯ ವಾದಿ ಜಯಶ್ರೀ ರಟ್ಟಿಹಳ್ಳಿ ಹೊಸಬೆಟ್ಟು, ಮಂಗಳಪೇಟೆ ಅರಳೋ ಆಪ್ತ ಸಲಹಾ ಕೇಂದ್ರ ಮತ್ತು ಸಾಮಾರ್ಥ್ಯ ವರ್ಧನ ಕೇಂದ್ರ ತೇಜಾಕ್ಷಿ ವಿ ಶೆಟ್ಟಿ, ಲಲಿತಾ ಕಲಾ ಆರ್ಟ್ಸ್ ಮಂಗಳೂರು ವಿಜಯ ಲಕ್ಷ್ಮೀ ಧನ ಪಾಲ್ ಶೆಟ್ಟಿಗಾರ್ ಸುರತ್ಕಲ್, ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಐ ರಮಾನಂದ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಮಹಿಳಾ ಸಮಿತಿ ಗೌರವಧ್ಯಕ್ಷೆ ಶಕುಂತಳಾ ರಮಾನಂದ ಭಟ್, ರಜನಿದುಗ್ಗಣ್ಣ, ಕುಸುಮ ಮಹಾಬಲ ಪೂಜಾರಿ ಕಡಂಬೋಡಿ ಉಪಸ್ಥಿತರಿದ್ದರು.

ಸಾವಿತ್ರಿ ಬಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಗುಣವತಿ ರಮೇಶ್ ಸ್ವಾಗತಿಸಿದರು.

Comments are closed.