ಕರಾವಳಿ

ಪಿಎಂಇಜಿಪಿ ಹಾಗೂ ಸಿಎಂಇಜಿಪಿ ಯೋಜನೆಯಡಿ ಸಾಲ ಮತ್ತು ಸಬ್ಸಿಡಿ ನೀಡುವ ಬಗ್ಗೆ ವಂಚನೆ : ಸಾರ್ವಜನಿಕರಿಗೆ ಎಚ್ಚರಿಕೆ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಹಾಗೂ ಮುಖ್ಯ ಮಂತ್ರಿಗಳ ಸ್ವಯಂ ಉದ್ಯೋಗ ಯೋಜನೆ ಕಾರ್ಯಕ್ರಮ (ಸಿಎಂಇಜಿಪಿ) ಅಡಿಯಲ್ಲಿ ಸಾಲ ಮತ್ತು ಸಬ್ಸಿಡಿ ಮಂಜೂರು ಮಾಡುವುದಾಗಿ ಕೆಲವೊಂದು ಸಂಸ್ಥೆಗಳು ಹಾಗೂ ಕೆಲವೊಂದು ವ್ಯಕ್ತಿಗಳು ಭರವಸೆ ನೀಡಿ, ಸಾರ್ವಜನಿಕರಿಗೆ ವಂಚಿಸುತ್ತಿರುವ ಬಗ್ಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಗಮನಕ್ಕೆ ಬಂದಿರುತ್ತದೆ.

ತಮ್ಮ ವ್ಯೆಯಕ್ತಿಕ ಲಾಭಕ್ಕಾಗಿ ಮೋಸ ಮಾಡಲು ಪ್ರಯತ್ನಿಸುತ್ತಿರುವ ಇಂತಹ ಮೋಸದ ಅಂಶಗಳಿಗೆ ಯೋಜನೆಯ ಅಭ್ಯರ್ಥಿಗಳು ಬಲಿಯಾಗದಂತೆ ಈ ಮೂಲಕ ಎಚ್ಚರಿಸಿದೆ.

ಆದ್ದರಿಂದ ಸದರಿ ಯೋಜನೆಗಳಡಿ ಸೌಲಭ್ಯ ಪಡೆಯಲು ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಅಲ್ಲದೇ ಈ ಬಗ್ಗೆ ಯಾವುದೇ ಖಾಸಗಿ ವ್ಯಕ್ತಿ / ಏಜೆಂಟ್ ನೇಮಿಸಿಲ್ಲ ಎಂದು ಇಲಾಖೆಯು ಸಾರ್ವಜನಿಕರಿಗೆ ಈ ಮೂಲಕ ಸ್ಪಷ್ಟಪಡಿಸಿದೆ.

ಯೋಜನೆಗಳ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಇಂಡಸ್ಟ್ರಿಯಲ್ ಎಸ್ಟೇಟ್, ಎಯ್ಯಾಡಿ, ಮಂಗಳೂರು-575008. ದೂರವಾಣಿ ಸಂಖ್ಯೆ: 0824-2214021 ನ್ನು ಸಂಪರ್ಕಿಸುವಂತೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಎಯ್ಯಾಡಿ, ದ.ಕ., ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.