ಕರಾವಳಿ

ಮುಂಬೈನ ಭಕ್ತರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿಗೆ ರೂ. 40 ಲಕ್ಷ ವೆಚ್ಚದ ಬಂಗಾರದ ಮಂಟಪ ಸಮರ್ಪಣೆ

Pinterest LinkedIn Tumblr

ಮಂಗಳೂರು,ಫೆಬ್ರವರಿ.02 : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜ.31ರಂದು ವಿವಿಧ ವೈದಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಈ ಸುಸಂದರ್ಭದಲ್ಲಿ ಕಟೀಲು ಶ್ರೀ ಅಮ್ಮನವರಿಗೆ ಮುಂಬೈನ ಭಕ್ತರೋರ್ವರು ಸುಮಾರು ರೂ. 40ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಬಂಗಾರದ ಮಂಟಪದಲ್ಲಿ ಶ್ರೀದೇವರ ಬಲಿಮೂರ್ತಿಯನ್ನಿಟ್ಟು ಪೂಜಿಸಲಾಯಿತು.

ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ಮಹಾಮಾತೆ, ಜಗವನ್ನೇ ಪೊರೆಯುವ ಮಹಾಮಾತೆ, ಶಿಷ್ಟರ ರಕ್ಷಕಿ- ದುಷ್ಟ ಸಂಹಾರಿ, ಬೇಡಿದ ಭಕ್ತರ ಮನದಾಸೆ ಪೂರೈ ಸುವ ಕಾರುಣ್ಯನಿಧಿ; ನಂದಿನಿ ನದಿಯ ಮಡಿಲಲ್ಲಿ ಪವಡಿಸಿದ ಸಾವಿರ ಸೀಮೆಯ ಆದಿಮಾಯೆ, ಭ್ರಾಮರಿ ಅವತಾರಿಣಿ ಕಟೀಲಿನ ಶ್ರೀ ದುರ್ಗಾಪರಮೇಶ್ವರಿಗೆ ಗುರುವಾರ ಪರಮ ಪವಿತ್ರ ಬ್ರಹ್ಮ ಕಲಶೋತ್ಸವ ವೈಭವದಿಂದ ನೆರವೇರಿತು.

ಫೆ.1ರಂದು ಭ್ರಾಮರೀ ವನದಲ್ಲಿ ಸಂಜೆ 7ರಿಂದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ, ಮದ್ದೂರು ಶ್ರೀ ಕೃಷ್ಣಪ್ರಸಾದ ವೈದ್ಯ ಬಳಗದವರ ಸಹಭಾಗಿತ್ವದಲ್ಲಿ ನಾಗಮಂಡಲೋತ್ಸವ  ನೆರವೇರಿತು.

ಫೆ. 2ರಂದು ಭ್ರಾಮರಿ ವನದಲ್ಲಿ ಬೆಳಗ್ಗೆ ಕೋಟಿ ಜಪಯಜ್ಞ ಆರಂಭವಾಗಿ ಸಂಜೆ ಪರಿಸಮಾಪ್ತಿಯಾಗಲಿದೆ. ಫೆ.3ರಂದು ಭ್ರಾಮರಿ ವನದಲ್ಲಿ ಮುಂಜಾನೆ 7ರಿಂದ ಸಹಸ್ರಚಂಡಿಕಾಯಾಗ ನಡೆಯಲಿದೆ.

Comments are closed.