ಮನೋರಂಜನೆ

‘ಬಿಗ್‍ಬಾಸ್’ನಿಂದ ಹೊರಬಿದ್ದ ಮೂರನೇ ಪ್ರಬಲ ಸ್ಪರ್ಧಿ ಯಾರು ಗೊತ್ತೇ …? ಫೈನಲಿಗೆ ಹೋದವರು ಯಾರು..?

Pinterest LinkedIn Tumblr

ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದೆ. ಈಗಾಗಲೇ 7ನೇ ಆವೃತ್ತಿಯ ಬಿಗ್ ಬಾಸ್ ಯಾರೆಂಬ ಕುತೂಹಲಕ್ಕೆ ಕ್ಷಣಗಣನೆ ಆರಂಭವಾಗಿದೆ.

ಭಾನುವಾರ ನಡೆಯಲಿರುವ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಯಾರ ಕೈ ಮೇಲೆತ್ತಲಿದ್ದಾರೆ ಎಂಬ ಕಾತುರತೆ ಇದೀಗ ಬಿಗ್ ಬಾಸ್ ವೀಕ್ಷಕರಲ್ಲಿ ಮನೆ ಮಾಡಿದೆ.

18 ಸ್ಪರ್ಧಿಗಳಿಂದ ಆರಂಭವಾಗಿದ್ದ ಬಿಗ್ ಬಾಸ್ ಸೀಸನ್ 7 ಇದೀಗ 113 ದಿನಗಳನ್ನು ಪೂರೈಸಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ.

ಆರಂಭದಿಂದಲೂ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸೀಸನ್​ 7ನ ಕೊನೆಯ ವಾರದಲ್ಲಿ ಕಾಣಿಸಿಕೊಂಡಿದ್ದು ಒಟ್ಟು 6 ಸ್ಪರ್ಧಿಗಳು.

ಅದರಲ್ಲಿ ನಟ ಹರೀಶ್ ರಾಜ್ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಹೊರಬಂದಿದ್ದರು. ಅಲ್ಲಿಗೆ ಅಂತಿಮ ಹಣಾಹಣಿಗೆ 5 ಮಂದಿ ಆಯ್ಕೆಯಾಗಿದ್ದರು.

ಹಾಗೆಯೇ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಕಾಣಿಸಿಕೊಳ್ಳುವ ಮೂವರು ಸ್ಪರ್ಧಿಗಳು ಯಾರೆಂಬ ಪ್ರಶ್ನೆಗೆ ತೆರೆಬಿದ್ದಿದೆ.

ಇದರಲ್ಲಿ ಕೊನೆಯ ವಾರದ ಮೊದಲ ಎಲಿಮಿನೇಟ್ ಆಗಿ ಭೂಮಿ ಶೆಟ್ಟಿ ಹೊರಬಿದ್ದಿದ್ದಾರೆ. ಈ ಮೂಲಕ ಬಿಗ್ ಬಾಸ್ ಸೀಸನ್ 7ನಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ.

ಹಾಗೆಯೇ ಫಿನಾಲೆಗೇರುವ ಸ್ಪರ್ಧಿಗಳಲ್ಲಿ ಸ್ಥಾನ ಪಡೆದಿದ್ದ ದೀಪಿಕಾ ದಾಸ್ ಫಿನಾಲೆ ರೌಂಡ್​ನ 2ನೇ ಎಲಿಮಿನೇಟ್ ಆಗುವ ಮೂಲಕ ವೀಕ್ಷಕರಿಗೆ ಶಾಕ್ ನೀಡಿದ್ದಾರೆ.

ಅಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬಿಗ್ ಬಾಸ್ ಫಿನಾಲೆ ಎಲಿಮಿನೇಷನ್​ ತೆರೆಬಿದ್ದಿದ್ದು, ಫೈನಲಿಸ್ಟ್​ಗಳಾಗಿ ಮೂವರು ಪುರುಷ ಸ್ಪರ್ಧಿಗಳು ಕಾಣಿಸಿಕೊಂಡಿದ್ದರು.

ಅವರಲ್ಲಿ ಇದೀಗ ಮತ್ತೊಬ್ಬ ಸ್ಪರ್ಧಿ ಹೊರಬೀಳುವ ಮೂಲಕ ಟಾಪ್ 2 ಸ್ಪರ್ಧಿಗಳಲ್ಲಿ ಪೈಪೋಟಿ ಏರ್ಪಟ್ಟಿದೆ.

ಅದರಂತೆ ಫಿನಾಲೆಗೆ ನೇರ ಎಂಟ್ರಿ ಕೊಟ್ಟಿದ್ದ ವಾಸುಕಿ ವೈಭವ್ ಬಿಗ್ ಬಾಸ್​ ಫೈನಲ್​ ರೌಂಡ್​ನಿಂದ ಔಟ್ ಆಗಿದ್ದಾರೆ ಎಂದು ಹೇಳಲಾಗಿದೆ. ಆ ಮೂಲಕ ಬಿಬಿ7ನಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಟಾಪ್​ 2ನಲ್ಲಿ ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್​ 7 ಗೆಲ್ಲುವ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಹಾಗೆಯೇ ಶೈನ್​ಗೆ ಪ್ರತಿಸ್ಪರ್ಧಿಯಾಗಿ ಕುರಿ ಪ್ರತಾಪ್ ಇದ್ದು, ಬಿಗ್ ಬಾಸ್ ಸೀಸನ್​7 ಪಟ್ಟವನ್ನು ಗಿಟ್ಟಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.

Comments are closed.