ಕರಾವಳಿ

ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃಧ್ಧಿಗೆ ಸರಕಾರ ಶ್ರಮಿಸುತ್ತಿದೆ : ಪ್ರೊ.ರಾಜಶೇಖರ್ ಹೆಬ್ಬಾರ್

Pinterest LinkedIn Tumblr

ಉದ್ಯೋಗ, ಮಾಹಿತಿ ಕೋಶ ಹಾಗೂ ಯುವ ಸಬಲೀಕರಣ ಕಾರ್ಯಗಾರ ಉದ್ಘಾಟನೆ

ಮಂಗಳೂರು ಫೆಬ್ರವರಿ 01 :ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ, ಮಂಗಳೂರು ವಲಯದ ಸರಕಾರಿ ಕಾಲೇಜುಗಳ ಉದ್ಯೋಗ ಹಾಗೂ ಮಾಹಿತಿ ಕೋಶ ಹಾಗೂ ಯುವ ಸಬಲೀಕರಣ ಘಟಕದ ಸಂಚಾಲಕರ ಕಾರ್ಯಗಾರ ಡಾ.ಪಿ. ದಯಾನಂದ ಪೈ- ಪಿ.ಸತೀಶ.ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ ಮಾತನಾಡಿ “ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಅದರಲ್ಲೂ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಬಹಳಷ್ಟು ಹೊಸ ಪ್ರಯೋಗಗಳನ್ನು ಪ್ರಯತ್ನಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅವರ ಸರ್ವತೋಮುಖ ಅಭಿವೃಧ್ಧಿಗಾಗಿ ಶ್ರಮಿಸುತ್ತಿದೆ.

ಸರ್ಕಾರದ ಈ ಶ್ರಮ ಸಫಲವಾಗಬೇಕಾದರೆ ವಿದ್ಯಾರ್ಥಿ – ವಿದ್ಯಾರ್ಥಿನಿಯರೆಲ್ಲರೂ ಕೂಡಾ ಉತ್ತಮ ಶಿಕ್ಷಣ ಪಡೆದು, ಒಳ್ಳೆಯ ವ್ಯಕ್ತಿಗಳಾಗುವುದರ ಜೊತೆಗೆ ಉತ್ತಮ ಉದ್ಯೋಗವನ್ನೂ ಪಡೆದುಕೊಳ್ಳುವಂತಾಗಬೇಕು” ಈ ಎಲ್ಲಾ ಯಶಸ್ಸನ್ನು ಸಾಧಿಸುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕಾದವರು ಕಾಲೇಜಿನ ಉದ್ಯೋಗ ಮಾಹಿತಿ ಸಂಚಾಲಕರು ಹಾಗೂ ಯುವ ಸಬಲೀಕರಣ ಘಟಕದ ಸಂಚಾಲಕರು ಎಂಬುದಾಗಿ ಅವರು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಯ ಪ್ರೊ. ಎ. ನಾರಾಯಣ ಪ್ರಸಾದ್, ಸಹಪ್ರಾಧ್ಯಾಪಕರು ಮತ್ತು ವಿಶೇಷ ಕರ್ತವ್ಯಾಧಿಕಾರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ಉದ್ಯೋಗ ಮಾಹಿತಿ ಹಾಗೂ ಯುವ ಸಬಲೀಕರಣ ಘಟಕದ ಕಾರ್ಯಕ್ರಮಗಳು, ಕ್ರಿಯಾಯೋಜನೆ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ಒಟ್ಟಿನಲ್ಲಿ ಪದವಿ ವಿದ್ಯಾರ್ಥಿಗಳನ್ನು ಉತ್ತಮ ಉದ್ಯೋಗ ಪಡೆಯುವಂತಾಗಲು ಯಾವ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಪಿ.ದಯಾನಂದ.ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ.ಶಿವರಾಮ್.ಪಿ ಹಾಗೂ ಡಾ.ಜಯಕರ ಭಂಡಾರಿ, ವಿದ್ಯಾರ್ಥಿ ಕ್ಷೇಮಪಾಲಕರು ಉಪಸ್ಥಿತರಿದ್ದರು.

ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ವಲಯದ ಎಲ್ಲಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್ ಸಂಚಾಲಕರು ಹಾಗೂ ಯುವ ಸಬಲೀಕರಣ ಘಟಕದ ಸಂಚಾಲಕರು ಭಾಗವಹಿಸಿ ಮಾಹಿತಿ ಪಡೆದರು. ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್ ಸಂಚಾಲಕ ಮಣಿಭೂಷಣ್ ಡಿಸೋಜ ಹಾಗೂ ಅರುಣ ಕುಮಾರಿ ಕಾರ್ಯಕ್ರಮ ಆಯೋಜಿಸಿದ್ದರು.

Comments are closed.