ಕರಾವಳಿ

ಯುವ ಭಾರತ ನಿರ್ಮಾಣ ನಮ್ಮ ಗುರಿ ಭಾಸ್ಕರ ರೈ ಕಟ್ಟ

Pinterest LinkedIn Tumblr

ಮಂಗಳೂರು ಜನವರಿ 30 : ದೇಶದ ಯುವಜನತೆ ಆ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ. ಅಂತೆಯೇ ಭಾರತವೂ ಕೂಡಾ ಒಂದು ಯುವ ರಾಷ್ಟ್ರವಾಗಿ ನಿರ್ಮಾಣವಾಗುವ ವಾತಾವರಣ ನಾವು ನಿರ್ಮಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಭಾಸ್ಕರ ರೈ ಕಟ್ಟ ಹೇಳಿದರು.
ನಗರದ ಭಾರತೀ ಪದವಿ ಕಾಲೇಜಿನಲ್ಲಿ ನಡೆದ ಯುವ ಸಬಲೀಕರಣ ಕ್ರೀಡಾ ಇಲಾಖೆ ಇದರ ಯುವಸ್ಪಂದನ ಘಟಕದ ಯುವ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಒಟ್ಟು ಜನಸಂಖ್ಯೆಯು ಶೇ 60 ರಷ್ಟು ಯುವಜನತೆಯನ್ನು ಹೊಂದಿದೆ. ಯುವಜನತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶ ಅತಿವೇಗವಾಗಿ ಅತ್ಯುನ್ನತ ಸ್ಥಾನಕ್ಕೆ ಹೋಗುವುದು. ಜೀವನವನ್ನು ದೇಶಕ್ಕೋಸ್ಕರ ಸದ್ವಿನಿಯೋಗ ಮಾಡಬೇಕು ಎಂದರು.

ಯುವ ಸಬಲೀಕರಣ ಇಲಾಖೆ ಯುವಸ್ಪಂದನ ಘಟಕದ ಡೊಂಬಯ್ಯ ಇಡ್ಕಿದು ಮಾತನಾಡಿ, ಯುವಕರು ಸಂವಹನ ಹಾಗೂ ವೃತ್ತಿಪರ ಮೌಲ್ಯಗಳುಳ್ಳ ಜೀವನ ಕೌಶಲ್ಯ ರೂಡಿಸಿಕೊಳ್ಳಬೇಕು. ನಾವು ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬೇಕಾದರೆ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದರು.

ಹಿರಿಯ ಉಪನ್ಯಾಸಕ ಈಶ್ವರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಪ್ರತಿಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ಅಶೋಕ್ ವಂದಿಸಿದರು.

Comments are closed.