ಕರಾವಳಿ

ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮದ ಬಗ್ಗೆ ಜನಜಾಗೃತಿಗಾಗಿ ಬೀದಿನಾಟಕ ಪ್ರದರ್ಶನ

Pinterest LinkedIn Tumblr

ಮಂಗಳೂರು : ಜಿಲ್ಲಾಧಿಕಾರಿಯವರು ಮತ್ತು ಕಾರ್ಮಿಕ ಆಯುಕ್ತರು, ಬೆಂಗಳೂರು ಇವರ ನಿರ್ದೇಶನದಂತೆ ಬಾಲಕಾರ್ಮಿಕ ಯೋಜನೆ ಸಂಘ, ದ.ಕ ಜಿಲ್ಲೆ ಮಂಗಳೂರು, ಇವರು ನಡೆಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಹೆಚ್ಚಾಗಿ ವಾಸಿಸಿರುವ ಕಾಲೋನಿಗಳಾದ ಕಡಬ, ನೆಕ್ಕಿಲಾಡಿ ಉಪ್ಪಿನಂಗಡಿ, ಕುಂಬ್ರ, ಪುತ್ತೂರು, ಸುಳ್ಯ, ಜಾಲ್ಸೂರು, ಬೆಳ್ಳಾರೆ, ಕಲ್ಲಕೆರೆ, ಉಜಿರೆ, ಧರ್ಮಸ್ಥಳ, ಮುಂತಾದ ಕಡೆಗಳಲ್ಲಿ ಜನವರಿ 24 ಮತ್ತು 25 ರಂದು ಬೀದಿನಾಟಕ ಪ್ರದರ್ಶನಗಳನ್ನು ಮಾಡಿ ಸಾರ್ವಜನಿಕರಿಗೆ ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮದ ಬಗ್ಗೆ ಜನಜಾಗೃತಿ ಮೂಡಿಸಲಾಯಿತು.

Comments are closed.