ಕರಾವಳಿ

ರಾಷ್ಟ್ರಪತಿಗಳಿಂದ ಬಾಲ ಪುರಸ್ಕಾರ ಪಡೆದ ಮೂರ್ಜೆ ಸುನಿತಾ ಪ್ರಭು ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ

Pinterest LinkedIn Tumblr

ಮಂಗಳೂರು : ಗೌರವಾನ್ವಿತ ರಾಷ್ಟ್ರಪತಿಗಳಿಂದ ಬಾಲ ಪುರಸ್ಕಾರ ಪಡೆದ ಮೂರ್ಜೆ ಸುನಿತಾ ಪ್ರಭು ಅವರನ್ನು ಇಂದು ಮಧ್ಯಾಹ್ನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಸ್ವಾಗತಿಸಿದರು.

2019ರಲ್ಲಿ ಫಿನೀಕ್ಸ್ ( ಅಮೇರಿಕಾದಲ್ಲಿ ) ನಡೆದ 80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ರವರಿಂದ ಈ ಬಾಲ ಪುರಸ್ಕಾರ ಪಡೆದ ಮೂರ್ಜೆ ಸುನಿತಾ ಪ್ರಭು ಅವರು ಇಂದು ಮಧ್ಯಾಹ್ನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇವರನ್ನು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಸುನಿತಾ ಪ್ರಭು ಅವರ ಪೋಷಕರಾದ ವಿವೇಕಾನಂದ ಪ್ರಭು, ಶಾಂತಲಾ ಪ್ರಭು, ಸಹೋದರ ರಾಹುಲ್, ಮಾಜಿ ಶಾಸಕ ಯೋಗೀಶ್ ಭಟ್,ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹ ನಾಯಕ್,ಬೆಸೆಂಟ್ ಸಂಸ್ಥೆಯ ಗಣೇಶ್ ಭಟ್, ಬೆಳ್ತಂಗಡಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಶಶಿಧರ್ ಪೈ, ಅಡ್ವಕೇಟ್ ಸುಧೇಶ್, ನಾಗೇಶ್, ಕರುಣಾಕರ್, ಶಾಂತಾರಾಮ್ ಮತ್ತಿತರರು ಉಪಸ್ಥಿತರಿದ್ದರು.

ಮೂರ್ಜೆ ಸುನಿತಾ ಪ್ರಭು ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿ ಗೆ ಆಯ್ಕೆ:

ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯದಿಂದ ಘೋಷಿಸಲಾದ ಪ್ರದಾನ ಮಂತ್ರಿ ಬಲ ಪುರಸ್ಕಾರ ಪ್ರಶಸ್ತಿ ಬೆಳ್ತಂಗಡಿಯ ಮೂರ್ಜೆ ಸುನಿತಾ ಪ್ರಭು ರವರಿಗೆ ಒಲಿದಿದೆ . ಈ ಪುರಸ್ಕಾರ ಒಂದು ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ

ಪ್ರತಿಭಾನ್ವಿತೆಯಾಗಿರುವ ಈಕೆ 2019 ರಲ್ಲಿ ಫಿನೀಕ್ಸ್ ( ಅಮೇರಿಕಾದಲ್ಲಿ ) ನಡೆದ 80ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿನ್ನೆಲೆಯಲ್ಲಿ ಈ ಪುರಸ್ಕಾರ ಲಭಿಸಿದೆ.

ಪ್ರಸಕ್ತ ಮಂಗಳೂರಿನ ಸಿ ಎಫ್ ಏ ಎಲ್ ವಿದ್ಯಾ ಸಂಸ್ಥೆಯಲ್ಲಿ ಪಿ ಯು ಸಿ ವ್ಯಾಸಂಗ ಮಾಡುತ್ತಿರುವ ಮೂರ್ಜೆ ಸುನಿತಾ ಪ್ರಭು ಬೆಳ್ತಂಗಡಿಯ ಉದ್ಯಮಿ ವಿನಾಯಕ ವುಡ್ ಇಂಡಸ್ಟ್ರೀಸ್ ನ ಮಾಲಕ ವಿವೇಕಾನಂದ ಪ್ರಭು ಮತ್ತು ಶಾಂತಲಾ ಪ್ರಭು ದಂಪತಿಯ ಪುತ್ರಿ. ಉಜಿರೆ ಶ್ರೀ ಮಂಜುನಾಥೇಶ್ವರ ಸಿ ಬಿ ಯಸ್ ಸಿ ಶಾಲೆಯ ಹಳೆ ವಿದ್ಯಾರ್ಥಿನಿ.

ಜನವರಿ 22ರಂದು ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ರಮಾನಾಥ್ ಕೊವಿಂದ್ ರವರಿಂದ ಈ ಬಾಲ ಪುರಸ್ಕಾರ ಪಡೆದಿರುತ್ತಾರೆ. . ಬಳಿಕ ಜನವರಿ 26ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ನಲ್ಲೂ ಭಾಗವಹಿಸಲು ಅವಕಾಶ ಲಭಿಸಿದ್ದು, ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಪೋಷಕರಿಂದ ದೇಶ ವಿದೇಶಗಳ ಗಣ್ಯ ಅತಿಥಿಗಳನ್ನು ಭೇಟಿಯಾಗುವ ಅವಕಾಶ ಕಲ್ಪಿಸಲಾಗಿತ್ತು.

 

Comments are closed.