ಕರಾವಳಿ

ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ – ಹಿರಿಯ ಅಧಿಕಾರಿಗಳಿಂದ ಪರಿಶೀಲನೆ

Pinterest LinkedIn Tumblr

ಮಂಗಳೂರು: ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ. ಬ್ಯಾಗ್​ವೊಂದರಲ್ಲಿ ಬಾಂಬ್ ಸಿಕ್ಕಿದ್ದು, ಅದನ್ನ ಹೊರಗೆ ತರಲಾಗಿದೆ. ಸದ್ಯ ವಿಮಾನ ನಿಲ್ದಾಣಕ್ಕೆ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ದೌಡಾಯಿಸಿದ್ದಾರೆ.

ಇಂದು ಬೆಳಗ್ಗೆ ಟಿಕೆಟ್ ಕೌಂಟರ್ ಬಳಿ ಲ್ಯಾಪ್‌ಟಾಪ್ ಬ್ಯಾಗ್ ಪತ್ತೆಯಾಗಿತ್ತು. ಅನುಮಾನ ಬಂದ ಹಿನ್ನೆಲೆ ಬಾಂಬ್ ಸ್ಕ್ವಾಡ್ ತಂಡವನ್ನ ಕರೆಸಿ ತಪಾಸಣೆ ನಡೆಸಿದಾಗ ಸಜೀವ ಬಾಂಬ್ ಸಿಕ್ಕಿದೆ. ಸದ್ಯ ಪ್ರಯಾಣಿಕರ ತಪಾಸಣೆ ಮುಂದುವರೆದಿದೆ. ಸಿಐಎಸ್​ಎಫ್ ಭದ್ರತಾ ಪಡೆಯಿಂದ ಏರ್​ಪೋರ್ಟ್​ ಬಳಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

ಪಣಂಬೂರು ಬೀಚ್ ಗೆ ಬಾಂಬ್ ಸ್ಥಳಾಂತರ:

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಅನ್ನು ವಿಶೇಷ ಭದ್ರತಾಯೊಂದಿಗೆ ಪಣಂಬೂರು ಬೀಚ್ ಗೆ ಸಾಗಿಸಲಾಗಿದೆ.ಅಲ್ಲಿ ಬಾಂಬ್ ನಿಷ್ಕ್ರಿಯದಳದಿಂದ ಬಾಂಬ್ ಅನ್ನು ನಿಷ್ಕ್ರಿಯಗೋಳಿಸುವ ಸಾಧ್ಯತೆ ಇದೆ.

ಬ್ಯಾಗ್ ನಲ್ಲಿ 10 ಕೆಜಿ ಸುಧಾರಿತ ಐಇಡಿ ಸ್ಪೋಟಕ ಬಾಂಬ್ ಪತ್ತೆಯಾಗಿದು, ಇಂತಹ ಬ್ಯಾಗ್ ನಲ್ಲಿದ್ದ ಬಾಂಬ್ ಸ್ಪೋಟಿಸಿದರೆ 500 ಮೀಟರ್ ವ್ಯಾಪ್ತಿಯಲ್ಲಿ ಹಾನಿ ಉಂಟಾಗುತ್ತಿತ್ತು. ಹೀಗಾಗಿ ಕೂಡಲೇ ಬಾಂಬ್ ನಿಷ್ಕ್ರೀಯ ಯಂತ್ರದ ಮೂಲಕ ಬೇರೆಡೆಗೆ ಸಾಗಿಸಿರುವ ಬಾಂಬ್ ನಿಷ್ಕ್ರೀಯ ದಳದ ಅಧಿಕಾರಿಗಳು, ಬಾಂಬ್ ನಿಷ್ಕ್ರೀಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಹಿನ್ನಲೆಯಲ್ಲಿ ಮಂಗಳೂರು ನಗರ, ಉಡುಪಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಬಾಂಬ್ ಇಟ್ಟು ಹೋದಂತ ಆರೋಪಿಗಳ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆಗೆ ಇಳಿದಿದ್ದಾರೆ.

Comments are closed.