ರಾಷ್ಟ್ರೀಯ

ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯ ಮಾತನ್ನೊಮ್ಮೆ ಕೇಳಿ….

Pinterest LinkedIn Tumblr

ನವದೆಹಲಿ: ವರ್ಷದ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪಾಠ ಮಾಡಿದ್ದಾರೆ.

ದೆಹಲಿಯ ಟಲ್ಕಟೊರ ಒಳಾಂಗಣ ಕ್ರೀಡಾಂಗಣದಲ್ಲಿ ಪರೀಕ್ಷಾ ಪೆ ಚರ್ಚಾ-2020 ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಲವು ಸಂದೇಹಗಳಿಗೆ ಉತ್ತರ ಕೊಟ್ಟಿದ್ದಾರೆ, ಜೀವನ ಮತ್ತು ವಿದ್ಯಾರ್ಥಿ ಜೀವನದಲ್ಲಿ ಹೇಗಿರಬೇಕು, ಬೋರ್ಡಿಂಗ್ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು, ಹೇಗೆ ಅಧ್ಯಯನ ಮಾಡಬೇಕು ಇತ್ಯಾದಿ ವಿಷಯಗಳ ವಿದ್ಯಾರ್ಥಿಗಳೊಂದಿಗೆ ವಿಚಾರ ಹಂಚಿಕೊಂಡಿದ್ದಾರೆ. ಶಿಕ್ಷಕರು ಮತ್ತು ಪೋಷಕರು ಕೂಡ ಭಾಗವಹಿಸಿದ್ದಾರೆ.

ಅವರ ಮಾತುಗಳ ಮುಖ್ಯಾಂಶಗಳು ಹೀಗಿವೆ: ಕಳೆದ ವರ್ಷ ದೇಶದ ಬಹು ನಿರೀಕ್ಷಿತ ಇಸ್ರೊ ಕೇಂದ್ರ ಉಡಾಯಿಸಿದ ಚಂದ್ರಯಾನ-2 ವಿಫಲವಾಯಿತು. ಉಡಾವಣೆ ಕಾರ್ಯಕ್ರಮದಲ್ಲಿ ನಾನು ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿದ್ದೆ. ಕೆಲವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದರು. ಉಡಾವಣೆ ಯಶಸ್ವಿಯಾಗುತ್ತದೆ ಎಂದು ವಿಶ್ವಾಸವಿರಲಿಲ್ಲ, ಒಂದು ವೇಳೆ ವಿಫಲವಾದರೆ ಏನು ಮಾಡುವುದು ಎಂದು. ಅದಕ್ಕಾಗಿಯೇ ನಾನು ಅಲ್ಲಿರಬೇಕು ಎಂದು ಹಾಗೆ ಹೇಳಿದವರಿಗೆ ಹೇಳಿದ್ದೆ.

ಚಂದ್ರಯಾನ-2 ವಿಫಲವಾಗುವ ಸಂದರ್ಭದಲ್ಲಿ ವಿಜ್ಞಾನಿಗಳ ಮುಖದಲ್ಲಿ ಮಹತ್ತರ ಬದಲಾವಣೆ ಗಮನಿಸಿದೆ. ನಂತರ ಅವರು ನನ್ನ ಬಳಿ ಬಂದು ವಿಫಲವಾಯಿತು ಎಂದು ಹೇಳಿದರು. ಆಗ ಬೇಸರಪಟ್ಟುಕೊಳ್ಳಬೇಡಿ ಎಂದು ಸಮಾಧಾನ ಹೇಳಿ ಅಲ್ಲಿಂದ ಬಂದೆ ಎಂದರು.

ಆದರೆ ನನಗೆ ಸಮಾಧಾನವಾಗಲಿಲ್ಲ. ಪ್ರಧಾನಮಂತ್ರಿ ಕಾರ್ಯಾಲಯದ ತಂಡದವರನ್ನು ಕರೆದು ನನ್ನ ಸಮಯವನ್ನು ಬದಲಾಯಿಸಿ ಮರುದಿನ ಬೆಳಗ್ಗೆ ವಿಜ್ಞಾನಿಗಳನ್ನು ಭೇಟಿ ಮಾಡಿದೆ. ನನ್ನ ಭಾವನೆಗಳನ್ನು ಅವರ ಜೊತೆ ಹಂಚಿಕೊಂಡು ಅವರ ಪ್ರಯತ್ನವನ್ನು ಶ್ಲಾಘಿಸಿದೆ. ವೈಫಲ್ಯದಲ್ಲಿ ಯಶಸ್ಸಿನ ಶಿಕ್ಷಣ ನಮಗೆ ಸಿಗಬೇಕು.

ಪ್ರಧಾನಿ ಮೋದಿ ಚಂದ್ರಯಾನ-2 ಉದಾಹರಣೆಯನ್ನು ವಿದ್ಯಾರ್ಥಿಗಳು ಕಲಿಕೆ ಮತ್ತು ಇತರ ಚಟುವಟಿಕೆಗಳಲ್ಲಿ ಎಂದಿಗೂ ಉತ್ಸಾಹ ಕಳೆದುಕೊಳ್ಳಬಾರದು ಎಂಬ ವಿಷಯಕ್ಕೆ ಉದಾಹರಣೆಯಾಗಿ ನೀಡಿದರು.

ಯಾವತ್ತಿಗೂ ವಿಶ್ವಾಸ, ಉತ್ಸಾಹ ಕಳೆದುಕೊಳ್ಳಬಾರದು, ನಮಗೆ ಬೇರೆಯವರಿಂದ ಅತಿಯಾದ ನಿರೀಕ್ಷೆಯಿದ್ದಾಗ ಈ ಸಮಸ್ಯೆ ಉದ್ಭವವಾಗುತ್ತದೆ. ನಾವು ಅಂದುಕೊಂಡ ಕೆಲಸ ಈಡೇರದಿದ್ದಾಗ ನಿರಾಶೆಯಾಗುತ್ತದೆ. ವಿದ್ಯಾರ್ಥಿಗಳು ಬೇರೆಯವರ ಸ್ಥಾನದಲ್ಲಿ ನಿಂತು ಅವರ ನಿರೀಕ್ಷೆಗಳು ಏಕೆ ಯೋಚಿಸಬೇಕು ಎಂದು ಕೇಳಬೇಕು. ವೈಫಲ್ಯದಿಂದ ಉತ್ಸಾಹ ಕಳೆದುಕೊಳ್ಳದವರು ಜೀವನದಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ.

Comments are closed.