ಕರಾವಳಿ

ಭಾರತೀಯ ಕಥೊಲಿಕ್ ಯುವ ಸಂಚಾಲನ್ ಮೇರಿ ವಿಶ್ವಮಾತೆ ದೇವಾಲಯ ರಾಣಿಪುರ ಸುವರ್ಣ ಮಹೋತ್ಸವ ಸಮಾರಂಭ

Pinterest LinkedIn Tumblr

ಮಂಗಳೂರು / ಉಳ್ಭಾಲ : ಭಾರತೀಯ ಕಥೊಲಿಕ್ ಯುವ ಸಂಚಾಲನ್ ಮೇರಿ ವಿಶ್ವಮಾತೆ ದೇವಾಲಯ ರಾಣಿಪುರ ಇದರ ಸುವರ್ಣ ಮಹೋತ್ಸವ ಸಮಾರಂಭ ರಾಣಿಪುರ ದೇವಾಲಯ ದಲ್ಲಿ ನಡೆಯಿತು.ಬಲಿಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಂಗಳೂರು ಧರ್ಮ ಪ್ರಾಂತ್ಯದ ಐ.ಸಿ.ವೈ.ಎಂ.ನಿರ್ದೇಶಕ ರೊನಾಲ್ಡ್ ಪ್ರಕಾಶ್ ಡಿಸೋಜ ಇವರು ವಿಭಿನ್ನ ಶೈಲಿಯಲ್ಲಿ ಬೆಲೂನ್ಗಳನ್ನು ಹಾರಿಸುವುದರ ಮೂಲಕ ಉದ್ಘಾಟಿಸಿ ಶುಭಾ ಹಾರೈಸಿದರು.

ಮಂಗಳೂರು ಧರ್ಮ ಪ್ರಾಂತ್ಯದ ವಿಕಾರ್ ಜೆರಾಲ್ ಅತೀ ವಂದನೀಯ ಮ್ಯಾಕ್ಸಿಮ್ ನೊರೊನ್ಹಾ,ಯುವ ನಿರ್ದೇಶಕ ರಾದ ವಂದನೀಯ ಅಶ್ವಿನ್ ಲೋಹಿತ್ ಕಾರ್ಡೋಜ, ದಕ್ಷಿಣ ವಲಯದ ಯುವ ನಿರ್ದೇಶಕ ರಾದ ವಂದನೀಯ ಮೈಕೆಲ್ ಡಿಸೋಜ, ಕೇಂದ್ರೀಯ ಸಮಿತಿಯ ಅಧ್ಯಕ್ಷ ರಾದ ಲಿಯೋನ್ ಸಲ್ಡಾನ್ಹಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಯ ಮಾಜಿ ಅಧ್ಯಕ್ಷ ರಾದ ರೋಯ್ ಕ್ಯಾಸ್ಟೆಲಿನೊ ,ಋಷಿವನದ ನಿರ್ದೇಶಕ ರಾದ ವಂದನೀಯ ಆಲ್ಫ್ರೆಡ್ ಮಿನೇಜಸ್,ರಾಣಿಪುರ ಚರ್ಚ್ ಇದರ ಧರ್ಮ ಗುರುಗಳಾದ ವಂದನೀಯ ಸಂತೋಷ್ ಡಿಸೋಜ,ಭಗಿನಿ ಮೀನಾ ಬಿ.ಎಸ್, ಡೀಕನ್ .ವಿಲಿಯಂ ಡಿಸೋಜ ಉಪಾಧ್ಯಕ್ಷ ರಾದ ನವೀನ್ ಡಿಸೋಜ, ಕಾರ್ಯದರ್ಶಿ ವಿಲ್ಮಾ ಡಿಸೋಜ, ಅತಿಥಿ ಗಳಾಗಿದ್ದರು.

ಸಭಾ ಅಧ್ಯಕ್ಷ ರಾಗಿ ಮಂಗಳೂರು ಧರ್ಮ ಪ್ರಾಂತ್ಯದ ನಿವ್ರತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ.ಆಲೋಷಿಯಸ್ ಪಾವ್ಲ್ ಡಿಸೋಜರವರು ವಹಿಸಿ ಯುವ ಜನರು ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮ ನ್ನು ತೊಡಗಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ಕರೆ ನೀಡಿ ಶುಭವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಕಳೆದ 50 ವರ್ಷಗಳಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ದ ಸವಿ ನೆನಪಿಗಾಗಿ “ಭಾಂಗ್ರಾಳಿಂ ಪಾವ್ಲಾಂ” ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಲಾಯಿತು.

ಐ.ಸಿ.ವೈ.ಎಂ.ರಾಣಿಪುರ ಅಧ್ಯಕ್ಷ ಸನಿಲ್ ಡಿಸೋಜ ಸ್ವಾಗತಿಸಿದರು. ಸುವರ್ಣ ಮಹೋತ್ಸವದ ಸಂಚಾಲಕರಾದ ಫೆವಿಷಾ ಮೊಂತೇರೊ ವಂದಿಸಿದರು.

ಕಾರ್ಯದರ್ಶಿ ಸೋನು ಡಿಸೋಜ, ಸೇವೆ ಸಲ್ಲಿಸಿದ ಅಧ್ಯಕ್ಷರ ಹೆಸರನ್ನು ವಾಚಿಸಿದರು,ಕಳೆದ 50 ವರ್ಷಗಳ ವರದಿಯನ್ನು ಫ್ಲರ್ವಿಶಾ ಮೊಂತೇರೊ,ಫೆವಿಟಾ ಲೋಬೊ, ಹಾಗೂ ಕ್ಯಾರಲ್ ಡಿಸೋಜ ವಾಚಿಸಿದರು. ಸುವರ್ಣ ಮಹೋತ್ಸವ ದ ಸವಿ ನೆನಪಿಗಾಗಿ ಆಯೋಜಿಸಿದೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಬ್ಯಾಂಡ್ ಚರಿತಾ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ನೆಲ್ಲು ಪೆರ್ಮನ್ನೂರು ತಂಡದಿಂದ ಹಾಸ್ಯ ಚಟಾಕಿ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮ ವನ್ನು ರೋಯ್ಸಟನ್ ಡಿಸೋಜ ಹಾಗೂ ರೆನಿಟಾ ಫಿಗ್ರೇಡೊ ನಿರ್ವಹಿಸಿದರು.

_ ARIF KALKATTA

Comments are closed.