ಕರಾವಳಿ

ಕಾಶೀಮಠಾಧೀಶರ ಅಮೃತ ಹಸ್ತಗಳಿಂದ ಕೊಂಚಾಡಿಯಲ್ಲಿ ವನಿತಾ ಅಚ್ಚುತ್ ಪೈ ಕನ್ವೆನ್ಷನ್ ಸೆಂಟರ್ ಉದ್ಘಾಟನೆ

Pinterest LinkedIn Tumblr

ಮಂಗಳೂರು : ವನಿತಾ ಅಚ್ಚುತ್ ಪೈ ಕನ್ವೆನ್ಷನ್ ಸೆಂಟರ್ ಉದ್ಘಾಟನಾ ಸಮಾರಂಭ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಿಂದ ನಡೆಯಲಿದೆ. ಈ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಶ್ರೀ ಸಂಸ್ಥಾನದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆಚರಣೆಯ ಸುಸಂದರ್ಭದಲ್ಲಿ ಶ್ರೀಗಳವರ ವ್ರ೦ದಾವನದಲ್ಲಿ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಬಿಡುಗಡೆಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತೂರಿ ಸದಾಶಿವ ಪೈ , ಮಾರೂರ್ ಶಶಿಧರ್ ಪೈ , ಶ್ರೀ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಡಿ . ವಾಸುದೇವ್ ಕಾಮತ್ , ಪ್ರಶಾಂತ್ ಪೈ ಉಪಸ್ಥಿತರಿದ್ದರು.

ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಶ್ರೀ ವೆಂಕಟರಮಣ ದೇವಸ್ಥಾನ ಕೊಂಚಾಡಿ ಶ್ರೀ ಕಾಶೀ ಮಠ ಪದವಿನಂಗಡಿ , ಮಂಗಳೂರು ಇದರ ಪ್ರತಿಷ್ಠಾ ಕಾರ್ಯಕ್ರಮವು ಪರಮ ಪೂಜ್ಯ ಸದ್ಗುರು, ಪ್ರಾತಃ ಸ್ಮರಣೀಯ ಧರ್ಮಾಚಾರ್ಯ ಶ್ರೀ ಸಂಸ್ಥಾನ ಕಾಶೀಮಠದ ಯತಿವರ್ಯ ಶ್ರೀಮದ್ ಸುಧೀಂದ್ರ ತೀರ್ಥ ಭಗವತಪಾದರ ಅಮೃತ ಹಸ್ತಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಇಷ್ಟ ದೇವರಾದ ಶ್ರೀ ವೆಂಕಟರಮಣ ದೇವರು ಹಾಗೂ ಕುಲದೇವಿ ಶ್ರೀ ಮಹಾಲಸಾ ನಾರಾಯಣೀ ದೇವರ ಅನುಗ್ರಹದಿಂದ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಅನೇಕ ಸುವರ್ಣಕ್ಷರಗಳಿಂದ ಬರೆಯುವ ಕಾರ್ಯಕ್ರಮಗಳು ನಡೆದು ಈಗ ಮತ್ತೊಮ್ಮೆ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ಶ್ರೀ ಮಹಾಲಸಾ ನಾರಾಯಣೀ ದೇವಿಯ ರಜತಮಯ ತೀರ್ಥ ಮಂಟಪ, ಅಮೃತ ಶಿಲಾಮಯ ಶ್ರೀಮತ್ ಸುಧೀಂದ್ರ ತೀರ್ಥರ ವಿಗ್ರಹ ಪ್ರತಿಷ್ಠೆ, ಶ್ರೀ ಭೂ ಸಮೇತ ಭದ್ರ ನರಸಿಂಹ ದೇವರಿಗೆ ಸ್ವರ್ಣ ಕವಚ ಸಮರ್ಪಣೆ ಹಾಗೂ ದಾನಿಗಳಿಂದ ಸಮರ್ಪಿಸಲ್ಪಟ್ಟ ಭವ್ಯ ದಿವ್ಯವಾದ ಹಾಗೂ ಸುಂದರ ವನಿತಾ ಅಚ್ಚುತ್ ಪೈ ಸಭಾ ಭವನದ ಉದ್ಘಾಟನೆ ಹಾಗೂ ಉಭಯ ದೇವರಿಗೆ ಶತಕಲಶಾಭಿಷೇಕ, ಗಂಧಲೇಪನ, ಶ್ರೀದೇವರ ಸಾನಿದ್ಯಾಭಿವೃದ್ದಿ ಮತ್ತು ಸಮಸ್ತ ಲೋಕಕಲ್ಯಾಣಾ ರ್ಥವಾಗಿ ಶ್ರೀ ಮಹಾವಿಷ್ಣು ಯಾಗ, ಶ್ರೀ ಮಹಾಲಸಾ ನಾರಾಯಣಿ ದೇವಿಯ ಸ್ವರ್ಣರಥ ಉತ್ಸವ, ಶ್ರೀ ವೆಂಕಟರಮಣ ದೇವರಿಗೆ ರಜತ ಬಂಡಿ ಉತ್ಸವಗಳು ಇದೇ ವಿಕಾರಿ ನಾಮ ಸಂವತ್ಸರದ ಮಾಘ (ತಾ-06-02-2020 ರಿಂದ ತಾ-15-02-2020) ನಡೆಯಲಿದೆ.

Comments are closed.