ಕರಾವಳಿ

ಕರಾವಳಿ ಉತ್ಸವದಲ್ಲಿ ಇಂದಿನ ಕಾರ್ಯಕ್ರಮಗಳು

Pinterest LinkedIn Tumblr

ಮಂಗಳೂರು : ಜನವರಿ 11 ರಂದು ಕರಾವಳಿ ಉತ್ಸವದಲ್ಲಿ ನಡೆಯಲಿರುವ ಕಾರ್ಯಕ್ರಮಗಳು ಇಂತಿವೆ.

ಕದ್ರಿ ಉದ್ಯಾನವನದಲ್ಲಿ: ಸಂಜೆ 6 ಗಂಟೆಯಿಂದ 7.15 ರವರೆಗೆ ನಾಗೇಶ್ ಎ ಬಪ್ಪನಾಡು ಮತ್ತು ತಂಡದಿಂದ ನಾದ ಸ್ವರ ವಾದನ, ಸಂಜೆ 7.15 ರಿಂದ 9.30 ರವರೆಗೆ ನಾಟ್ಯಾರಾಧನಾ ಕಲಾಕೇಂದ್ರ ಉರ್ವ, ಮಂಗಳೂರು ಅವರಿಂದ ನೃತ್ಯ ವೈಭವ ನಡೆಯಲಿದೆ.

ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ): ಸಂಜೆ 5.30 ಗಂಟೆಯಿಂದ 6.30 ರವರೆಗೆ ಭುವನೇಶ್ವರಿ ಹೆಗ್ಡೆ ಮತ್ತು ತಂಡದಿಂದ ಹಾಸ್ಯ ಲಾಸ್ಯ, ಸಂಜೆ 6.30 ಗಂಟೆವರೆಗೆ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ-ಬಡಗುತಿಟ್ಟು ನಡೆಯಲಿದೆ.

ಜನವರಿ 12 ರಂದು :  ಕದ್ರಿ ಉದ್ಯಾನವನದಲ್ಲಿ: ಬೆಳಿಗ್ಗೆ 6 ಗಂಟೆಯಿಂದ 7 ರವರೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ) ಮಂಗಳೂರು ಇವರಿಂದ ಯೋಗ ಪ್ರದರ್ಶನ, ಬೆಳಿಗ್ಗೆ 7 ರಿಂದ 8 ಗಂಟೆವರೆಗೆ ಗಾನಸರಸ್ವತಿ ಸಂಗೀತ ವಿದ್ಯಾಲಯ ಜಪ್ಪಿನಮೊಗರು ಮಂಗಳೂರು, ಅವರಿಂದ ಉದಯರಾಗ ಕಾರ್ಯಕ್ರಮ ನಡೆಯಲಿದೆ.

ಸಂಜೆ 6 ಗಂಟೆಯಿಂದ 8 ರವರೆಗೆ ಶಶಾಂಕ್ ಸುಬ್ರಮಣ್ಯಂ, ಚೆನೈ & ಪ್ರವೀಣ್ ಗೋಡ್ಕಿಂಡಿ, ಬೆಂಗಳೂರು ಮತ್ತು ತಂಡದಿಂದ ಕೊಳಲು-ಬಾನ್ಸುರಿ ಜುಗಲ್ಬಂದಿ, ಸಂಜೆ 8 ರಿಂದ 9.30 ಗಂಟೆವರೆಗೆ ಗಾನ ನೃತ್ಯ ಅಕಾಡೆಮಿ ಉರ್ವ, ಮಂಗಳೂರು ಇವರಿಂದ ನೃತ್ಯ ರೂಪಕ ಕಾರ್ಯಕ್ರಮ ನಡೆಯಲಿದೆ.

ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ): ಸಂಜೆ 6 ಗಂಟೆಯಿಂದ 7 ರವರೆಗೆ ರಾಮಕೃಷ್ಣ ಮಠ, ಮಂಗಳೂರು ಇವರಿಂದ ಸ್ವಾಮಿ ವಿವೇಕಾನಂದ ಸಂಸ್ಮರಣೆ, ಸಂಜೆ 7 ರಿಂದ 9 ಗಂಟೆವರೆಗೆ ಸೂರ್ಯ ಕಲಾ ಆಟ್ರ್ಸ್, ಬಳ್ಳಾರಿ ಇವರಿಂದ ನೃತ್ಯ ರೂಪಕ ನಡೆಯಲಿದೆ.

ಜನವರಿ 13 ರಂದು : ಕದ್ರಿ ಉದ್ಯಾನವನದಲ್ಲಿ: ಸಂಜೆ 6 ಗಂಟೆಯಿಂದ 7.30 ರವರೆಗೆ ಶುದ್ಧಶೀಲ್ ಚಟರ್ಜಿ, ಕೊಲ್ಕತ್ತಾ ಮತ್ತು ತಂಡದಿಂದ ಸಂತೂರ್ ವಾದನ, ಸಂಜೆ 7.30 ರಿಂದ 9 ಗಂಟೆವರೆಗೆ ಪII ಕೈವಲ್ಯ ಕುಮಾರ್ ಗುರವ್, ಧಾರವಾಡ ಮತ್ತು ತಂಡದಿಂದ ಹಿಂದೂಸ್ತಾನೀ ಶಾಸ್ತ್ರೀಯ ಗಾಯನ ಹಾಗೂ ವಚನಗಳು ನಡೆಯಲಿದೆ.

ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ): ಸಂಜೆ 6 ಗಂಟೆಯಿಂದ 6.30 ರವರೆಗೆ ಕುಮಾರಿ ಸಾಯಿ ಶ್ರುತಿ ಸುಳ್ಯ ಇವರಿಂದ ಮಾತನಾಡುವ ಗೊಂಬೆ, ಮಿಮಿಕ್ರಿ, ಸಂಜೆ 6.30 ರಿಂದ 7 ಗಂಟೆವರೆಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ ಖ್ಯಾತಿಯ ಚಂದನ್ ಸುರೇಶ್ ಇವರಿಂದ ಸ್ಟೆನ್ಸಿಲ್ ಚಿತ್ರ, ರಾತ್ರಿ 7 ಗಂಟೆಗೆ ವಿಜಯ ಕಲಾವಿದರು ಕಿನ್ನಿಗೋಳಿ ಇವರಿಂದ ತುಳು ಹಾಸ್ಯ ನಾಟಕ – ಬಿಲೆ ಕಟ್ಟೆರೆ ಆವಂದಿನ ನಾಟಕ ನಡೆಯಲಿದೆ.

Comments are closed.