ಕರಾವಳಿ

ಎಣ್ಮೂರು ಕೋಟಿ ಚೆನ್ನಯ ನಾಗಬ್ರಹ್ಮ ಆದಿ ಗರಡಿಗೆ ಸುಮಾರು 1.5 ಕೋಟಿ ಕಾಮಗಾರಿಗೆ ಶಾಸಕ ಅಂಗಾರರಿಂದ ಚಾಲನೆ

Pinterest LinkedIn Tumblr

ಮಂಗಳೂರು : ಎಣ್ಮೂರು ಕೋಟಿ ಚೆನ್ನಯ ನಾಗಬ್ರಹ್ಮ ಆದಿ ಗರಡಿಗೆ ಸುಮಾರು 1.5 ಕೋಟಿ ಕಾಮಗಾರಿಗೆ ಶಾಸಕ ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಸುಲಂತಡ್ಕ ಎಂಬಲ್ಲಿಂದ ಕೋಟಿ ಚೆನ್ನಯ ಆದಿ ಗರಡಿಗೆ ಸುಮಾರು 2 ಕಿಮೀ ಡಾಮರು ರಸ್ತೆಯೂ ಸೇರಿದಂತೆ, ರಂಗಸ್ಥಳಕ್ಕೆ ಇಂಟರ್‌ಲಾಕ್ ಮತ್ತು ಹೆಲೋಜನ್ ಲೈಟ್ ಅಳವಡಿಕೆ, ಬೋರ್‌ವೆಲ್, ನೀರಿನ ಟ್ಯಾಂಕ್, ಪಂಪ್ ಮತ್ತು ನಿದ್ವಾಳ ಮಹಾ ವಿಷ್ಣು ದೇವಸ್ಥಾನದಿಂದ ಕೋಟಿ ಚೆನ್ನಯ ಗರಡಿಯವರೆಗೆ ರಸ್ತೆ ಕಾಮಗಾರಿಯೂ ಸೇರಿದಂತೆ ಸಂಸದರ ನಿಧಿ, ಶಾಸಕರ ನಿಧಿ, ಮತ್ತು ಪ್ರವಾಸೋದ್ಯಮ ಇಲಾಖೆಯು ಸೇರಿದಂತೆ ಒಟ್ಟು ೩ಕೋಟಿ ಕಾಮಗಾರಿಯಲ್ಲಿ 1.5 ಕೋಟಿ ಅನುದಾನ ಬಿಡುಗೊಳಿಸಿ ಗುದ್ದಲಿ ಪೂಜೆ ನೆರವೇರಿಸಿದರು.

ಶಾಸಕರ ಅನುದಾನದಿಂದ ರಸ್ತೆ ಅಭಿವೃದ್ಧಿಯಾಗುವುದು ದೈವ ದೇವರ ಇಚ್ಛೆಯಾಗಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಗರಡಿ ಅನುವಂಶಿಕ ಆಡಳಿತದಾರ ಕಟ್ಟೆ ಬೀಡು ರಾಮಕೃಷ್ಣ ಶೆಟ್ಟಿ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಶ್ರೀ ಕೋಟಿ ಚೆನ್ನಯ ಆದಿ ಗರಡಿಯ ಆಡಳಿತದಾರ ಕಟ್ಟ ರಾಮಕೃಷ್ಣ ಶೆಟ್ಟಿ. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಸುಭದಾ ಎಸ್ ಶೆಟ್ಟಿ, ಎಣ್ಮೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಅಲೆಂಗಾರ, ಉಪಾದ್ಯಕ್ಷ ಕರುಣಾಕರ ಗೌಡ ಹಾಗೂ ಸದಸ್ಯರು, ಎಣ್ಮೂರು ಭಜನಾ ಮಂದಿರದ ಅಧ್ಯಕ್ಷ ರಘುನಾಥ್ ರೈ, ಎನ್ ಜಿ ಪ್ರಭಾಕರ್ ರೈ, ಎನ್ ಜಿ. ಲೋಕನಾಥ್ ರೈ ಮೊದಲಾದವರು ಉಪಸ್ಥಿತರಿದ್ದರು.

Comments are closed.