ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲಿದೆ ಒಂದೇ ವಾರದಲ್ಲಿ ಚಳಿಗಾಲದಲ್ಲಿ ಕಾಡುವ ಕೂದಲು ಉದುರುವ ಸಮಸ್ಯೆ ನಿವಾರಿಸಿಕೊಳ್ಳಿ ಹೇಗೆ ಗೊತ್ತಾ ತಿಳಿಯಲು ಈ ಲೇಖನ ಓದಿರಿ. ಚಳಿಗಾಲ ಶುರು ಆಗುತ್ತಾ ಇದ್ದಂತೆ ಕೂದಲು ಉದುರುವ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಕೂದಲು ಒರಟು ಆಗುವುದು ತಲೆ ಹೊಟ್ಟು ಕೂದಲು ಉದುರುವಿಕೆ ಈ ರೀತಿಯ ಸಮಸ್ಯೆ ಕಂಡು ಬರುವುದು ಅಧಿಕ ಆದರೆ ಸರಿಯಾದ ಆರೈಕೆ ಮಾಡಿದರೆ ಕೂದಲಿನ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಬಹುದು.
ಚಳಿಗಾಲದಲ್ಲಿ ತಣ್ಣೀರಿನಿಂದ ತಲೆ ತೊಳೆಯುವ ಬದಲು ಉಗುರು ಬೆಚ್ಚಿರುವ ನೀರಿನಿಂದ ತಲೆ ತೊಳೆಯಿರಿ ಉಗುರು ಬೆಚ್ಚಗಿನ ನೀರು ಚಳಿಗಾಲದಲ್ಲಿ ತಲೆಗೆ ಬಿದ್ದಾಗ ರಕ್ತ ಸಂಚಾರ ಚೆನ್ನಾಗಿ ಆಗುವುದು ಇದು ಕೂದಲಿಗೆ ಒಳ್ಳೆಯದು. ಕಂಡೀಷನರ್ ಹಚ್ಚಿ ಒಂದು 2 ನಿಮಿಷ ಬಿಡಿ ನಂತರ ಹದ ಬಿಸಿ ಅಥವಾ ತಣ್ಣೀರಿನಿಂದ ತಲೆ ತೊಳೆಯಿರಿ ಇದರಿಂದ ಕೂದಲು ನುಣುಪು ಆಗುವುದು. ಈರುಳ್ಳಿಯ ರಸವನ್ನು ಕೂದಲಿಗೆ ಹಚ್ಚಿಕೊಂಡು 10 – 20 ನಿಮಿಷ ಬಿಟ್ಟು ನಂತರ ಚೆನ್ನಾಗಿ ತೊಳೆಯಬೇಕು ಹೀಗೆ ವಾರಕ್ಕೆ ಮೂರು ಬಾರಿ ಮಾಡುವುದರಿಂದ ಕೂದಲು ಉದುರುವುದು ಕಡಿಮೆ ಆಗುವುದು.
ಕಾಯಿ ಪಪ್ಪಾಯಿಯನ್ನ ನಾವು ಚೆನ್ನಾಗಿ ರುಬ್ಬಿಕೊಂಡು ತಲೆಗೆ ಹಚ್ಚಿ 10 ರಿಂದ 20 ನಿಮಿಷ ಬಿಟ್ಟು ನಂತರ ಅದನ್ನು ತೊಳೆಯಬೇಕು ಹೀಗೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಸ್ವಲ್ಪ ಹೊತ್ತು ತೆಂಗಿನ ಎಣ್ಣೆಯನ್ನು ಕಾಯಿಸಿ ಮತ್ತು ಅದನ್ನು ನಿಮ್ಮ ಕೂದಲಿನ ಬುಡ ದಿಂದ ತುದಿಯವರೆಗೆ ಲೇಪಿಸಿ ಮಸಾಜ್ ಮಾಡಿರಿ. ಒಂದು ಗಂಟೆ ಬಿಟ್ಟು ತೊಳೆಯಿರಿ ಅಥವಾ ಒಂದು ತೆಂಗಿನಕಾಯಿಯನ್ನು ತುರಿದುಕೊಳ್ಳಿ ಮತ್ತು ಅದರಿಂದ ಹಾಲನ್ನು ತೆಗೆದು ಒಂದು ಲೀಟರ್ ನೀರಿನಲ್ಲಿ ತೊಳೆಯಿರಿ ತೆಂಗಿನ ಎಣ್ಣೆಯನ್ನು ಕೂದಲು ತೆಳ್ಳಗಾದ ಭಾಗದಲ್ಲಿ ಅಥವಾ ಬೊಕ್ಕ ತಲೆ ಕಾಣಿಸಿಕೊಂಡ ಭಾಗದಲ್ಲಿ ಲೇಪಿಸಿ.
ರಾತ್ರಿಯಿಡೀ ಇದನ್ನು ನೆನೆಯಲು ಬಿಡಿ ಮತ್ತು ಬೆಳಗ್ಗೆ ಎದ್ದು ಸ್ನಾನ ಮಾಡಿ. ವಾರಕ್ಕೆ ಒಮ್ಮೆ ಹಸಿ ಕೋಳಿ ಮೊಟ್ಟೆಯ ಲೋಳೆಯನ್ನು ಕೂದಲಿಗೆ ಹಚ್ಚಿಕೊಂಡು 20 ನಿಮಿಷದ ನಂತರ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಮೊಟ್ಟೆಯ ಜೊತೆಗೆ ಆಲಿವ್ ಆಯಿಲ್ ಕೂಡ ಮಿಕ್ಸ್ ಮಾಡಿ ಹಚ್ಚಿಕೊಳ್ಳಬಹುದು.
ನೆಲ್ಲಿಕಾಯಿ ಪುಡಿಯನ್ನು ನಿಂಬೆ ರಸದ ಜೊತೆಗೆ ಮಿಕ್ಸ್ ಮಾಡಿ ಒಣಗಲು ಬಿಡಿ ನಂತರ ಬಿಸಿನೀರಿನಲ್ಲಿ ಶಾಂಪೂ ಹಾಕದೆ ತೊಳೆಯಿರಿ ಇದರಿಂದ ತಲೆಹೊಟ್ಟು ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ. ಮಾನಸಿಕ ಒತ್ತಡ ಇದ್ದರೆ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ ಆದ್ದರಿಂದ ದಿನಡಲಿ ಸ್ವಲ್ಪ ಸಮಯ ಧ್ಯಾನಕ್ಕಾಗಿ ಮೀಸಲಿಡಿ ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಕೂದಲಿನ ಹಾಗೂ ದೇಹದ ಆರೋಗ್ಯ ಹೆಚ್ಚುತ್ತದೆ.
Comments are closed.