ಕರಾವಳಿ

ಒಂದೇ ದಿನದಲ್ಲಿ ಉಡುಪಿ ಎಸ್ಪಿ ಬದಲು- ನೂತನ ಎಸ್ಪಿ ಎನ್. ವಿಷ್ಣುವರ್ಧನ್ ನೇಮಕ

Pinterest LinkedIn Tumblr

ಉಡುಪಿ: ಹೊಸ ವರ್ಷದ ಸಂದರ್ಭದಲ್ಲಿ (ಡಿಸೆಂಬರ್ ಅಂತ್ಯದಲ್ಲಿ) ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಮೂಲಿ ಪ್ರಕ್ರಿಯೆ. ಅಂತೆಯೇ ಡಿ.31 ಸಂಜೆ ಸುಮಾರಿಗೆ ಒಂದಷ್ಟು ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗಿದ್ದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ನೀಶಾ ಜೇಮ್ಸ್ ಅವರನ್ನು ವರ್ಗಾವಣೆಗೊಳಿಸಿ ಆ ಸ್ಥಳಕ್ಕೆ ಕಲಬುರ್ಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಕ್ಷಯ್ ಹಾಕೆ ಮಚ್ಚಿಂದ್ರ ಅವರಿಗೆ ಭಡ್ತಿ ನೀಡಿ ಉಡುಪಿ ಜಿಲ್ಲೆಯ ನೂತನ ಎಸ್ಪಿಯಾಗಿ ಆದೇಶಿಸಿತ್ತು. ಆದರೆ ಸದ್ಯದ ಬೆಳವಣಿಗೆಯಲ್ಲಿ ಉಡುಪಿಯ ನೂತನ ಎಸ್ಪಿ ಆಗಿ ಎನ್. ವಿಷ್ಣುವರ್ಧನ್ ಅವರನ್ನು ನಿಯೋಜಿಸಲಾಗಿದೆ.

(File Pic)

2015 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ವಿಷ್ಣುವರ್ಧನ್ ಅವರು ಬೆಂಗಳುರು ನಗರದ ಡಿಸಿಪಿ ಆಗಿದ್ದರು. ಇನ್ನು ವಿಶೇಷವೆಂದರೆ ವಿಷ್ಣುವರ್ಧನ್ ಅವರು ಈ ಹಿಂದೆ ಉಡುಪಿ‌ ಹೆಚ್ಚುವರಿ ಎಸ್ಪಿ ಆಗಿದ್ದರು. ಇನ್ನು ಉಡುಪಿ ಜಿಲ್ಲಾ ಎಸ್ಪಿ ಆಗಿ ನಿಯೋಜಿಸಿದ್ದ ಅಕ್ಷಯ್ ಹಾಕೆ ಮಚ್ಚಿಂದ್ರ ಅವರನ್ನು ಉಡುಪಿ ಜಿಲ್ಲೆಯ ಕಾರ್ಕಳದ ನಕ್ಸಲ್ ನಿಗ್ರಹ ಪಡೆಗೆ ವರ್ಗಾವಣೆ ಮಾಡಲಾಗಿದೆ.

Comments are closed.