ಕರಾವಳಿ

ಜಪ್ಪಿನಮೊಗರು 27 ಲಕ್ಷದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಜಪ್ಪಿನಮೊಗರು ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.

ಜಪ್ಪಿನಮೊಗರು ಬಂಟರ ಸಂಘದಿಂದ ಬೊಲ್ಲ ಸ್ಟಾಪ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದೇವೆ. ಈ ಕಾಮಗಾರಿಗೆ ಸುಮಾರು 27 ಲಕ್ಷ ರೂಪಾಯಿ ಅನುದಾನ ಅವಶ್ಯಕತೆಯಿತ್ತು. ಈ ಪ್ರದೇಶದ ಜನರ ಅವಶ್ಯಕತೆಯನ್ನು ಮನಗಂಡು ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಮಂಗಳೂರು ನಗರ ದಕ್ಷಿಣ ಪ್ರದೇಶವು ನಗರ ವ್ಯಾಪ್ತಿಯಲ್ಲಿದ್ದರೂ ಜಪ್ಪಿನಮೊಗರು ವಾರ್ಡ್ ಒಳಭಾಗದಲ್ಲಿದೆ. ಇಲ್ಲಿ ಸುಸಜ್ಜಿತ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲಾಗುವುದು. ನಗರದ ಅಭಿವೃದ್ಧಿಯ ಜೊತೆಗೆ ಒಳ ಪ್ರದೇಶದಲ್ಲಿರುವ ಎಲ್ಲಾ ವಾರ್ಡುಗಳನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವುದು ನನ್ನ ಗುರಿಯಾಗಿದೆ ಎಂದು ಕಾಮತ್ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ವೀಣಾ ಮಂಗಲ, ಬಿಜೆಪಿ ಮುಖಂಡರಾದ ಭಾಸ್ಕರ್ ಚಂದ್ರ ಶೆಟ್ಟಿ, ಕಿರಣ್ ರೈ, ವಸಂತ್ ಜೆ ಪೂಜಾರಿ, ಭರತ್ ರಾಜ್ ಶೆಟ್ಟಿ,ಶುಭಕರ್ ಶೆಟ್ಟಿ, ದೀಪಕ್, ಶರತ್, ಸಂದೇಶ್ ಶೆಟ್ಟಿ, ಸವಿತಾ, ಸುಜಾತ, ರಾಜೇಶ್ ಸಪಲ್ಯ, ಸ್ನೇಹ, ಸಿಪ್ರಿನ್, ಉದಯ್ ಡಿ ಸೋಜಾ, ಸುರೇಶ್ ಉಳ್ಳಾಲ್ ಹೈೂಗೆ, ಪ್ರವೀಣ್ ಕುಮಾರ್, ನಿತೇಶ್, ಪುಷ್ಪರಾಜ್, ಗಣೇಶ್ ಹಾಗೂ ಸ್ಥಳೀಯ ನಿವಾಸಿಗಳಾದ ವಾಲ್ಟರ್ ಡಿ.ಸೋಜಾ, ಸುನಿಲ್ ಡಿಸೋಜ, ಪ್ಲೇವಿ ಡಿಸೋಜ, ಅಸುಂತ ಡಿಸೋಜ, ಪಾವ್ಲಿನ್ ಡಿಸೋಜ, ಅಮಾಂಡ ಡಿಸೋಜ, ಮೌರಿಸ್ ಡಿಸೋಜ, ಅವಿಲ್ ಡೇಸಾ, ಜೋಸೆಫ್ ಡಿಸೋಜ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.