ಕರಾವಳಿ

ಕುಂದಾಪುರದ ಹೊಸಂಗಡಿಯಲ್ಲಿ ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಯುವಕರು

Pinterest LinkedIn Tumblr

ಕುಂದಾಪುರ: ಹೊಸಂಗಡಿ ಗ್ರಾಮ ಪಂಚಾಯಿತಿ ಕೆ‌ಇಬಿ ಹಳೇ ಕಟ್ಟಡದ ಪಕ್ಕದಲ್ಲಿರುವು ಆವರಣವಿಲ್ಲದ ಬಾವಿಗೆ ಬಿದ್ದ ಹಸು ಬುಧವಾರ ರಕ್ಷಣೆ ಮಾಡಲಾಗಿದೆ. ಹೊಸಂಗಡಿಯಲ್ಲಿ ನಿರುಪಯುಕ್ತ ಬಾವಿಗಳು ಇದ್ದು, ಹಿಂದೆ ಕೂಡಾ ಕಾಡು ಪ್ರಾಣಿಗಳು ಸಾಕು ಪ್ರಾಣಿಗಳು ಬಿದ್ದಿದ್ದು, ಬದ್ರಾಪುರ ಆನಂದ ಗೊಲ್ಲ ಎಂಬವರ ಹಸು ಮೇಯುತ್ತಾ ಅವರಣವಿಲ್ಲದ ಬಾವಿಗೆ ಬಿದ್ದಿತ್ತು. ಬಾವಿಗೆ ಬಿದ್ದ ಹಸು ನೋಡಿದ ನಾಗರಿಕರು ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಸ್ಥಳೀಯ ಯುವಕರು ಬಾವಿಗೆ ಬಿದ್ದ ಹಸು ಹಗ್ಗಕಟ್ಟಿ ಮೇಲಕ್ಕೆತ್ತಿ ಹಸುವಿನ ರಕ್ಷಣೆ ಮಾಡಿದ್ದಾರೆ.

ಸುಮಾರು ೨೫ ಅಡಿ ಆಳದ ಬಾವಿಗೆ ಬಿದ್ದ ಹಸು ಮೇಲಕ್ಕೆ ಎತ್ತುವುದು ಸವಾಲಿನ ಕೆಲಸವಾಗಿತ್ತು. ಮೊದಲು ಅಬಿಜಿತ್ ಗೊಲ್ಲ ಹಾಗೂ ಪ್ರದೀಪ ಆಚಾರ್ ಇಬ್ಬರು ಬಾವಿಗೆ ಇಳಿದು ಹಸುವಿಗೆ ಹಗ್ಗ ಹಾಕಿ ಮೇಲೆತ್ತುವ ಕೆಲಸಕ್ಕೆ ಮುಂದಾಗಿದ್ದರು. ಆದರೆ ಬಾವಿಗೆ ಬಿದ್ದು ಗಾಬರಿಗೊಂಡಿದ್ದ ಹಸು ಯುವಕರ ಹತ್ತಿರಕ್ಕೆ ಬಿಟ್ಟಿಕೊಳ್ಳುತ್ತಿರಲಿಲ್ಲ. ಕೊನೆಗೂ ಹಸು ಸಂಬಾಳಿಸಿಕೊಂಡ ಯುವಕರು ಹಸುವಿನ ಹಿಂಗಾಲು ಹಾಗೂ ಮುಂಗಾಲು ಹೊಟ್ಟೆಯಡಿಯಲ್ಲಿ ಹಗ್ಗ ಹಾಕಿ ಮುಖಕ್ಕೆ ಮುತ್ತೊಂದು ಹಗ್ಗ ಕಟ್ಟಿ ತೊಟ್ಟಿಲ ಹಾಗೆ ಮಾಡಿ, ಅಪಾಯ ಆಗದ ರೀತಿಯಲ್ಲಿ ಮೇಲಕ್ಕೆ ಎತ್ತಲು ಅನುಕೂಲ ಮಾಡಿಕೊಟ್ಟರು.

ಬಾವಿ ಮೇಲಿದ್ದ ಆನಂದ ಕಾರೂರು, ಗಣೇಶ್, ವೆಂಕಟೇಶ್, ತಮ್ಮಪ್ಪ, ಅಭಿಷೇಕ್ ಗೊಲ್ಲ, ಮಂಜುನಾಥ, ಅನಂದ ನಾಯ್ಕ ಹಸುವನ್ನು ನಾಜೂಕಾಗಿ ಮೇಲಕ್ಕೆ ಎತ್ತುವ ಮೂಲಕ ಗೋವನ್ನು ರಕ್ಷಿಸಿದ್ದಾರೆ. ಹೊಸಂಗಡಿ ಪರಿಸರದಲ್ಲಿ ಹಾಳುಬಿದ್ದ ಬಾವಿಗಳಿದ್ದು, ಬಾವಿಸುತ್ತಾ ರಕ್ಷಣಾ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Comments are closed.