ಕರಾವಳಿ

ಪೇಜಾವರ ಶ್ರೀ ಮಗುವಿನ ಮನಸ್ಸಿನ ಮಹಾಜ್ಞಾನಿ : ರಾಘವೇಶ್ವರ ಶ್ರೀ

Pinterest LinkedIn Tumblr

ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ

ಮಂಗಳೂರು / ಬೆಂಗಳೂರು: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಎಲ್ಲರೂ ಪ್ರೀತಿಸಿದ, ಎಲ್ಲರನ್ನೂ ಪ್ರೀತಿಸಿದ ಮಗುವಿನ ಮನಸ್ಸಿನ ಮಹಾಜ್ಞಾನಿಗಳು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದ್ದಾರೆ.

ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ಪೇಜಾವರ ಶ್ರೀ ಅವರ ನಿಧನದ ಬಳಿಕ ತೀವ್ರ ಬೇಸರ ವ್ಯಕ್ತಪಡಿಸಿದ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿಗಳು ನಮ್ಮ ಸಂನ್ಯಾಸ ಸ್ವೀಕಾರ, ಪೀಠಾರೋಹಣ ಹಾಗೂ ಎಲ್ಲ ಮಹತ್ಕಾರ್ಯಗಳಲ್ಲಿ ಪೇಜಾವರ ಶ್ರೀಗಳು ಜತೆಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಶ್ರೀಮಠದ ಹಲವು ಕಾರ್ಯಕ್ರಮಗಳಲ್ಲಿ ಜತೆಯಾಗುತ್ತಿದ್ದ ಪೇಜಾವರ ಶ್ರೀಗಳು ಕಳೆದ ವರ್ಷ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲೂ ಪಾಲ್ಗೊಂಡಿದ್ದರು. ರಾಮ-ಕೃಷ್ಣರ ಅಪೂರ್ವ ಬಾಂಧವ್ಯವನ್ನು ಬಣ್ಣಿಸಲು ಪದಗಳೇ ಇಲ್ಲ ಎಂದು ಸ್ವಾಮೀಜಿ ತಮ್ಮ ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.

Comments are closed.