ಕರಾವಳಿ

ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಕೇಬಲ್‌ ಸುದ್ದಿವಾಹಿನಿ ಆರಂಭಿಸಿದ NMC ಚಾನೇಲ್ ಮಾಲಕ ನಿಗೂಡ ಸಾವು

Pinterest LinkedIn Tumblr

ಮಂಗಳೂರು / ಉಡುಪಿ, ಜ.1: ಎರಡು ದಶಕಗಳ ಹಿಂದೆ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಕೇಬಲ್‌ ಸುದ್ದಿವಾಹಿನಿ ಆರಂಭಿಸಿದ ನ್ಯೂ ಮಂಗಳೂರು ಚಾನೇಲ್ ಮಾಲಕ ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಡಿ.31ರ ಮಂಗಳವಾರ ಮಣಿಪಾಲದ ವಸತಿ ಸಮುಚ್ಛಯ ದಲ್ಲಿ ಜನವರಿ1ರ ಮುಂಜನೆ ವೇಳೆ ನಡೆದಿದೆ.

ಮಂಗಳೂರಿನಲ್ಲಿ ಪ್ರಥಮ ಕೇಬಲ್ ಸುದ್ದಿವಾಹಿನಿ ಆರಂಭಿಸಿದ ಎನ್‌ಎಂಸಿ ಮಾಲಕ ರೋಹಿತ್‌ ರಾಜ್ (53) ಸಂಶಯಾಸ್ಪದವಾಗಿ ಮೃತಪಟ್ಟ ವ್ಯಕ್ತಿ.

ಮಂಗಳೂರಿನಲ್ಲಿ ಮೊದಲ ಬಾರಿಗೆ ಕೇಬಲ್ ಸುದ್ದಿವಾಹಿನಿ ಪ್ರಾರಂಭಿಸಿದ್ದ ರೋಹಿತ್ ರಾಜ್ ಸುಮಾರು ೧೫ ವರ್ಷಗಳ ಕಾಲ ತಮ್ಮ ವೃತಿ ಜೀವನದಿಂದ ದೂರವಾಗಿದ್ದರು. ಇದೀಗ ಸುಮಾರು ಒಂದು ವರ್ಷಗಳ ಹಿಂದೆ ಮತ್ತೆ ಮಂಗಳೂರಿಗೆ ಆಗಮಿಸಿದ ಅವರು ತಮ್ಮ ಹಳೆ ಚಾನೇಲ್ ಅನ್ನು ಮತ್ತೆ ಪ್ರಾರಂಭಿಸಿ ತಮ್ಮ ಹೆಂಡತಿಯೊಂದಿಗೆ ಮಣಿಪಾಲ್‌ನ ರಾಯಲ್ ಎಂಬೆಸಿ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.

ರೋಹಿತ್ ದಂಪತಿ ಡಿ.31ರಂದು ರಾತ್ರಿ ಉಡುಪಿಯ ಹೊಟೇಲೊಂದರಲ್ಲಿ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಂಡು ನಸುಕಿನ ವೇಳೆ ತಮ್ಮ ಅಪಾರ್ಟ್ ಮೆಂಟ್‌ಗೆ ಆಗಮಿಸಿದ್ದರು. ಈ ವೇಳೆ ಗಂಡ ಹೆಂಡತಿ ಮಧ್ಯೆ ಜಗಳ ನಡೆಯಿತ್ತೆನ್ನಲಾಗಿದೆ. ಇದರಿಂದ ನೊಂದ ರೋಹಿತ್‌ರಾಜ್ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸುವಾಗ ಕುಸಿದು ಬಿದ್ದು ಮೃತಪಟ್ಟರೆಂದು ಹೇಳಲಾಗಿದೆ. ಹಲವು ವರ್ಷಗಳಿಂದ ತಮ್ಮ ಪತ್ನಿಯೊಂದಿಗೆ ವೈಮನಸ್ಸು ಹೊಂದಿದ್ದ ರೋಹಿತ್‌ ರಾಜ್ ಯಾವೂದೇ ಸಮಸೈಗಳನ್ನು ವ್ಯಕ್ತಪಡಿಸದೇ ಸುಖ ಜೀವನ ನಡೆಸಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ.

ಆದರೆ ಸ್ಥಳಕ್ಕೆ ಆಗಮಿಸಿರುವ ಮೃತರ ತಂದೆ ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಮಣಿಪಾಲ ಪೊಲೀಸರು ಹಾಗೂ ವೈದ್ಯರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Comments are closed.