ಕರಾವಳಿ

ಜಪ್ಪಿನಮೊಗರು ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು ವಾರ್ಡಿನ ತಂದೊಳಿಗೆ ನಾಗಬನಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಜಪ್ಪಿನಮೊಗರು ವಾರ್ಡಿನ ತಂದೊಳಿಗೆ ನಾಗಬನಕ್ಕೆ ತೆರಳುವ ರಸ್ತೆ ಅಭಿವೃದ್ಧಿಪಡಿಸಬೇಕೆಂದು ಈ ಪರಿಸರದ ಸಾರ್ವಜನಿಕರು ನನ್ನಲ್ಲಿ ಕೋರಿದ್ದರು. ಸ್ಥಳೀಯರ ಬೇಡಿಕೆಯ ಅನ್ವಯ ಈ ರಸ್ತೆ ಕಾಮಗಾರಿಗೆ 8 ಲಕ್ಷ ರೂಪಾಯಿ ಬಿಡುಗಡೆಗೊಳಿಸಿದ್ದು ಶೀಘ್ರವೇ ಕಾಮಗಾರಿ ನಡೆಯಲಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ಎಲ್ಲಾ ವಾರ್ಡುಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸಲಾಗಿದೆ. ಜಪ್ಪಿನಮೊಗರು ವಾರ್ಡಿನ ಅಭಿವೃದ್ಧಿಗಾಗಿ ಈಗಾಗಲೇ ದೊಡ್ಡ ಮೊತ್ತದ ಅನುದಾನ ನೀಡಲಾಗಿದೆ. ಹಾಗೂ ಮುಂದಿನ ದಿನಗಳಲ್ಲಿ ಆಗಬೇಕಿರುವ ಕಾಮಗಾರಿಗಳ ಪಟ್ಟಿ ತಯಾರಿಸಿ ಎಲ್ಲಾ ಕಾಮಗಾರಿಗಳನ್ನೂ ಮಾಡಲಾಗುವುದು ಎಂದಿದ್ದಾರೆ.

ಈ ಸಂಧರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರಾದ ವೀಣಾ ಮಂಗಲ, ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ, ಭರತ್ ಶೆಟ್ಟಿ, ಹರೀಶ್, ಶರತ್ ಶೆಟ್ಟಿ, ಶಿವರಾಜ್, ಸಿಪ್ರಿನ್, ನಾಗಮ್ಮ, ಕಮಲ, ರಮೇಶ್, ದೀಪಕ್, ನಿತೇಶ್, ಸ್ನೇಹ, ಸುಜಾತ, ಸವಿತ, ಸಂದೇಶ್,ಗಣೇಶ್ ಶೆಟ್ಟಿ, ಲೋಹಿತ್, ಪ್ರೇಮ್, ನಾಗರಾಜ್, ಕೀರ್ತಿ,ಪುಷ್ಪರಾಜ್, ಶೋಭಾ, ಸುಷ್ಮಿತ, ಶ್ರೀನಿವಾಸ್, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.

Comments are closed.