ಕರಾವಳಿ

ಮಂಗಳೂರಿನ ಚಿಲಿಂಬಿಯಲ್ಲಿ ಹಾಡುಹಗಲೇ ನಿಲ್ಲಿಸಿದ್ದ ಕಾರಿನ ಕಿಟಕಿ ಗಾಜು ಒಡೆದು 15 ಲಕ್ಷ ರೂ. ದರೋಡೆ

Pinterest LinkedIn Tumblr

ಮಂಗಳೂರು,ಡಿಸೆಂಬರ್.13: ಹಾಡಹಗಲೇ ಕಾರಿನ ಹಿಂಬದಿ ಗಾಜು ಒಡೆದು ಕಾರಿನ ಒಳಗಿಟ್ಟಿದ್ದ 15 ಲಕ್ಷ ರೂ. ನಗದು ದರೋಡೆ ಮಾಡಿದ ಘಟನೆ ಮಂಗಳೂರಿನ ಲೇಡಿಹಿಲ್ ಸಮೀಪದ ಚಿಲಿಂಬಿಯ ಮೋರ್ ಮಳಿಗೆ ಪಕ್ಕ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಹಣದ ವಾರಸುದಾರರು ತಮ್ಮ ಕಾರನ್ನು ಚಿಲಿಂಬಿಯಲ್ಲಿರುವ ಸೌತ್ ಇಂಡಿಯಾ ಬ್ಯಾಂಕ್ ಮುಂಭಾಗ ಪಾರ್ಕ್ ಮಾಡಿ ಡೋರ್ ಲಾಕ್ ಮಾಡಿ ಬ್ಯಾಂಕಿಗೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಕಾರಿನ ಹಿಂಬದಿ ಸೀಟಿನ ಬಾಗಿಲಿನ ಗಾಜು ಪುಡಿಗೈದು ಕಾರಿನಲ್ಲಿದ್ದ ಒಳಗಿದ್ದ 15 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದರೆನ್ನಲಾಗಿದೆ.

ಕೆ ಎ 03ಎಂವೈ 4390 ನೋಂದಣಿಯ ಕಪ್ಪು ಬಣ್ಣದ ಹುಂಡೈ ಐ 10 ಕಾರಿನಲ್ಲಿ ಕಾರಿನಲ್ಲಿ ಹಣವಿರಿಸಲಾಗಿತ್ತು ಎಂದು ತಿಳಿದುಬಂದಿದ್ದು, ಬೈಕಿನಲ್ಲಿ ಬಂದ ಹೆಲ್ಮಟ್ ಧರಿಸಿದ್ದ ಇಬ್ಬರು ಕಾರಿನ ಗಾಜು ಪುಡಿಗೈದು ದರೋಡೆ ನಡೆಸಿದ್ದಾರೆ. ಈ ಕೃತ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು ಬರ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಹಣ ಹಾಗೂ ಕಾರಿನ ವಾರೀಸುದಾರರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

 

Comments are closed.