ಕರಾವಳಿ

ಅಕ್ಕಮಹಾದೇವಿಯವರ ವಚನಗಳ ಸಾರ ಸಾತ್ವಿಕ ಜೀವನಕ್ಕೆ ಮಾರ್ಗದರ್ಶಿ ; ಕಲ್ಕೂರ

Pinterest LinkedIn Tumblr

ಮಂಗಳೂರು : ಅಕ್ಕಮಹಾದೇವಿಯವರು ಬರೆದ ವಚನಗಳ ಸಾರ ನಮ್ಮ ಸಾತ್ವಿಕಜೀವನಕ್ಕೆ ಮಾರ್ಗದರ್ಶಿಯಾಗಿದೆ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ‌ ಅಧ್ಯಕ್ಷ ಶ್ರೀ ಎಸ್. ಪ್ರದೀಪಕುಮಾರಕಲ್ಕೂರ ನುಡಿದರು.

ಅವರು‌ಅಕ್ಕಮಹಾದೇವಿ ವೀರಶೈವಮಹಿಳಾ ಸಂಘ ಏರ್ಪಡಿಸಿದ್ದ 5ನೇ ವರ್ಷದ ವಚನ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ವಚನ ಸಾರಗಳನ್ನು ನಾವು ಅರಿತುಕೊಳ್ಳುವುದಷ್ಟೇ ಅಲ್ಲ ಮುಂದಿನ ಪೀಳಿಗೆಗೂ ಇದರ ಮಹತ್ವವನ್ನು ತಿಳಿಸಿ ಹೇಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ‌ಎಂದರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಇದರಸಹಯೋಗದೊಂದಿಗೆ‌ಇತ್ತೀಚೆಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಕಾರ್ಯಕ್ರಮ ಜರಗಿತು.

ಮಂಗಳೂರು ವಿಶ್ವವಿದ್ಯಾನಿಲಯದ ಮರೀನ್‌ಜಿಯಾಲಜಿ ವಿಭಾಗದ‌ಉಪನ್ಯಾಸಕಡಾ.ಕೆ.ಎಸ್. ಜಯಪ್ಪ, ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ಎಂ.ಜಿ.ಎಂ. ಕಾಲೇಜಿನ‌ಉಪನ್ಯಾಸಕಿಡಾ. ಕಾತ್ಯಾಯಿನಿ ಕುಂಜಿಬೆಟ್ಟು‌ಉಪನ್ಯಾಸ ನೀಡಿದರು.

ಹಿರಿಯ ಸಮಾಜ ಸೇವಕಿ ಅಬ್ಬಕ್ಕ ಪ್ರಶಸ್ತಿ ವಿಜೇತೆ ಶ್ರೀಮತಿ ಸರಳಾ ಕಾಂಚನ್, ಪ್ರಜ್ಞಾ ಸಲಹಾ ಕೇಂದ್ರದ ಪ್ರೊ. ಹಿಲ್ಡಾ ರಾಯಪ್ಪನ್‌ ಮತ್ತು ಫಾದರ್ ಮುಲ್ಲರ್‌ ಕಾಲೇಜ್‌ ಆಸ್ಪತ್ರೆ ಕಂಕನಾಡಿ ಹಿರಿಯ ಹೃದ್ರೋಗ ಶಸ್ತ್ರಚಿಕಿತ್ಸಾತಜ್ಞರಾದಡಾ. ಕೆ.ಟಿ‌ಆನಂದ್‌ ಇವರನ್ನು ಸನ್ಮಾನಿಸಲಾಯಿತು.

ಸಂಘದ‌ ಅಧ್ಯಕ್ಷೆ ಸುಮಾ‌ ಅರುಣ್ ಮಾನ್ವಿ ಪ್ರಾಸ್ತಾವಿ ಕಭಾಷಣ ಮಾಡಿದರು. ಆಶಾ ಜೈದೇವ್, ಖಜಾಂಜಿ‌ಉಮಾ ಪಾಲಾಕ್ಷಪ್ಪ ವಂದಿಸಿ ದರು,  ಶ್ರೀಮತಿ ಮಣಿ ಶಂಕರ್, ಸಾಂಸ್ಕೃತಿಕ ಕಾರ್ಯದರ್ಶಿ ಜಯಶ್ರೀ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ನಿರ್ಮಲಾಚಂದ್ರ ಶೇಖರ್,  ಕ್ರೀಡಾ ಕಾರ್ಯದರ್ಶಿ ಉಮಾರಮೇಶ್, ಡಾ. ಮಾಲತಿ ಶೆಟ್ಟಿ ಮಾಣೂರು, ಡಾ. ಕಾಸರಗೋಡು‌ಅಶೋಕ್‌ಕುಮಾರ್, ರಘು‌ಇಡ್ಕಿದು, ಪ್ರವೀಣ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ಸುರೇಖಾ ಯಳವಾರ ನಿರೂಪಿಸಿದರು. ಸುಮಂಗಲ ಕಲಾ ತಂಡದಿಂದ ವಚನ ಗಾಯನ ಮತ್ತು ನೃತ್ಯಕಾರ್ಯಕ್ರಮಜರಗಿತು. ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಚನಗಳಿಂದ ಸಾಮಾಜಿಕ ಬದಲಾವಣೆ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ‌ಏರ್ಪಡಿಸಲಾಗಿತ್ತು.

Comments are closed.