ಕರ್ನಾಟಕ

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ : ಎನ್‌ಎಚ್‌ಎಐ‌ ಹಾಗೂ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತಡೆ ಆದೇಶ

Pinterest LinkedIn Tumblr

 ದಾಂಡೇಲಿ ಬಳಿಯ ಅಣಶಿ (ಕಾಳಿ) ಹುಲಿ ಸಂರಕ್ಷಿತಾರಣ್ಯ (ಟೈಗರ್ ರಿಸರ್ವ್ ಫಾರೆಸ್ಟ್​​​) ದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಚಾರವಾಗಿ ಎನ್‌ಎಚ್‌ಎಐ‌ ಹಾಗೂ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತಡೆ ಆದೇಶ ನೀಡಿದೆ. ಜನವರಿ 6ರವರೆಗೂ ಯಾವುದೇ ಕೆಲಸ ಅಥವಾ ಕಾಮಗಾರಿಯನ್ನು ಮಾಡದಂತೆ ಹೈಕೋರ್ಟ್​ ಆದೇಶಿಸಿದೆ.

ಖಾನಾಪುರದಿಂದ ಗೋವಾಗೆ ಹೈವೇ ನಿರ್ಮಾಣ ಸಂಬಂಧ ಅಣಶಿ(ಕಾಳಿ) ಟೈಗರ್ ರಿಸರ್ವ್ ಫಾರೆಸ್ಟ್ ನಲ್ಲಿ ಮರಗಳ ಕಡಿಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ರಾಷ್ಟ್ರೀಯ ಹೆದ್ದಾರಿ 4ಎ ಅಗಲೀಕರಣ ಮಾಡಲು ಎನ್‌ಎಚ್‌ಎಐ ಸಿದ್ದತೆ ಮಾಡಿಕೊಂಡಿತ್ತು. ದಟ್ಟ ಅರಣ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಎನ್‌ಎಚ್‌ಎಐ‌ ಹಾಗೂ ಕೇಂದ್ರ ಸರ್ಕಾರ ಮರಗಳನ್ನು ಉರುಳಿಸಿ ರಸ್ತೆ ನಿರ್ಮಿಸಲು ಮುಂದಾಗಿದ್ದವು. ದಾಂಡೇಲಿ ಬಳಿಯಿರುವ ಅಣಿಶಿ(ಕಾಳಿ) ಟೈಗರ್ ರಿಸರ್ವ್ ಫಾರೆಸ್ಟ್ ಒಳಗೆ ರಸ್ತೆ ನಿರ್ಮಿಸದಂತೆ ಅಥವಾ ಅಗಲೀಕರಣ ಮಾಡದಂತೆ ಮನವಿ ಮಾಡಿ ಪರಿಸರವಾದಿ ಸುರೇಶ್ ಹೆಬ್ಳೀಕರ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಳೆದ ತಿಂಗಳ 17 ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಎನ್‌ಎಚ್‌ಎಐಗೆ ತರಾಟೆ ತೆಗೆದುಕೊಂಡಿತ್ತು. ಮುಂದಿನ ಆದೇಶದವರೆಗೂ ಮರಗಳನ್ನು ಕಡಿಯದಂತೆ ಖಡಕ್ ಸೂಚನೆ ನೀಡಿತ್ತು.

ಎನ್‌ಎಚ್‌ಎಐ ನಡೆಗೆ ಮುಖ್ಯನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರದಿಂದಲೇ ರಸ್ತೆ ನಿರ್ಮಾಣಕ್ಕೆ 2ನೇ ಹಂತದ ಕ್ಲಿಯರೆನ್ಸ್ ಸಿಕ್ಕಿಲ್ಲ. 2ನೇ ಹಂತದ ಕ್ಲಿಯರೆನ್ಸ್ ಸಿಗುವ ಮುನ್ನವೇ ರಸ್ತೆ ನಿರ್ಮಾಣ ಮಾಡಲು ಮರಗಳನ್ನು ಕಡಿಯಲಾಗಿದೆ. ಎಷ್ಟು ಮರಗಳನ್ನು ಕಡಿದಿದ್ದೀರಾ‌ ಎಂಬುದರ ಅಫಿಡವಿಟ್‌ ಸಲ್ಲಿಸಿ. ಆಫಿಡವಿಟ್‌ನಲ್ಲಿ ಯಾರ ಅನುಮತಿ ಪಡೆದು ಮರ ಕಡಿದಿದ್ದೀರಾ..? ಎಂದು ನಮೂದಿಸಬೇಕು‌ ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತ್ತು.

Comments are closed.