ಕರಾವಳಿ

ತೆಕ್ಕಟ್ಟೆ ಸಮೀಪದ ಮಾಲಾಡಿಯಲ್ಲಿ ಮತ್ತೆ ಚಿರತೆ ಕಾಟ- ಹಾಡುಹಗಲೇ ಚಿರತೆಯ ಓಡಾಟ!

Pinterest LinkedIn Tumblr

ಉಡುಪಿ:  ಜಿಲ್ಲೆಯ ತೆಕ್ಕಟ್ಟೆ ಸಮೀಪದ ಮಾಲಾಡಿ ಎಂಬಲ್ಲಿನ ತೋಟದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಬೆಳ್ಳಂಬೆಳಿಗ್ಗೆ ಚಿರತೆ ಕಂಡು ಜನರು ಬೆದರಿದ್ದಾರೆ.

ವಾರದ ಹಿಂದೆ ಮೇಯಲು ಬಿಟ್ಟ ಜಾನುವಾರನ್ನು ಚಿರತೆ ಬಲಿ ಪಡೆದಿತ್ತು. ಆ ನಂತರದಲ್ಲಿ ಜನರ ಮನವಿ ಮೇರೆಗೆ ಅರಣ್ಯ ಇಲಾಖೆ ಬೋನಿಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆಸಿದರೂ ಕೂಡ ಕಿಲಾಡಿ ಚಿರತೆ ಮಾತ್ರ ಬೋನಿಗೆ ಬೀಳದೆ ಜನರೆದುರೇ ಓಡಾಡುತ್ತಿದೆ. ಚಿರತೆ ಓಡಾಟವಿರುವ ತೋಟದ ಸಮೀಪವೇ ಅಂಗನವಾಡಿ, ಸರಕಾರಿ ಶಾಲೆಯಿದ್ದು ಸುಮಾರು 50 ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ ದೇವಸ್ಥಾನವೂ ಇದೆ. ಇನ್ನು ತೋಟದ ಮದ್ಯೆಯಿರುವ ರಸ್ತೆಯಲ್ಲೆ ಈ ಭಾಗದ ಜನರು ಸಂಚರಿಸಬೇಕಿದೆ.

ಕಳೆದೊಂದು ತಿಂಗಳಿನ ಹಿಂದೆ ಇಲ್ಲೇ ಗಂಡು ಚಿರತೆ ಸೆರೆಯಾಗಿತ್ತು. ಕಳೆದ ವರ್ಷ ಆಗಸ್ಟಿನಲ್ಲಿ ಇದೇ ತೋಟದಲ್ಲಿ ಹೆಣ್ಣು ಚಿರತೆ ಸೆರೆಯಾಗಿತ್ತು. ಮತ್ತೆ ಮತ್ತೆ ಚಿರತೆ ಉಪಟಳದಿಂದ ಈ ಭಾಗದ ಸ್ಥಳಿಯರು ಭೀತಿಗೊಂಡಿದ್ದಾರೆ. ಸದ್ಯ ಅರಣ್ಯ ಇಲಾಖೆ ಬೋನಿಟ್ಟು ಚಿರತೆ ಸೆರೆಗೆ ಮುಂದಾಗಿದೆ.

Comments are closed.