ಕರಾವಳಿ

ದ್ವೀಪದ ಬಂಟ ಸಮುದಾಯದ ಸಾಂಸ್ಕ್ರತಿಕ ವೈಭವಕ್ಕೆ ಕ್ಷಣ ಗಣನೆ ಆರಂಭ: ಹದಿನೈದನೇ ವಾರ್ಷಿಕೋತ್ಸವಕ್ಕೆ ನಾಡಿನ ಸಮುದಾಯದ ಗಣ್ಯರುಗಳ ಅಪೂರ್ವ ಸಮ್ಮಿಲನ  

Pinterest LinkedIn Tumblr
ಬಹರೈನ್ ;ಇಲ್ಲಿನ ಅನಿವಾಸಿ ಬಂಟ ಸಮುದಾಯದ ಒಕ್ಕೂಟವಾದ “ಬಂಟ್ಸ್ ಬಹರೈನ್” ತನ್ನ ಹದಿನೈದನೇ   ವಾರ್ಷಿಕೋತ್ಸವದ ಅಂಗವಾಗಿ ಸ್ಥಳೀಯ ಸೀಫ್ ಪರಿಸರದಲ್ಲಿರುವ ಪಂಚತಾರಾ ಹೋಟೆಲ್ ರಾಮೀ ಗ್ರ್ಯಾಂಡ್ ನಲ್ಲಿ ಇದೆ ನವೆಂಬರ್ ತಿಂಗಳ 29ನೇ  ತಾರೀಖಿನ  ಶುಕ್ರವಾರದಂಡು  ಬ್ರಹತ್  ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಬೆಳಿಗ್ಗೆ ಹತ್ತು   ಘಂಟೆಗೆ ಸರಿಯಾಗಿ ಚಾಲನೆಗೊಳ್ಳಲಿರುವ ಈ ವಾರ್ಷಿಕ ಸಮಾರಂಭದಲ್ಲಿ ಬೈಂದೂರಿನ ಜನಪ್ರಿಯ ಶಾಸಕರಾದ ಶ್ರೀ ಬಿ .ಎಂ .ಸುಕುಮಾರ್ ಶೆಟ್ಟಿ ಯವರು  ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸಲಿದ್ದರೆ,ಗೌರವಾನ್ವಿತ ಅತಿಥಿಗಳಾಗಿ ನಾಡಿನ ಖ್ಯಾತ ಉದ್ಯಮಿ ಎಂ .ಆರ್ .ಜಿ  ಹಾಸ್ಪಿಟಾಲಿಟಿ ಆಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಮುಖ್ಯ ಆಡಳಿತ ನಿರ್ದೇಶಕರಾದ ಶ್ರೀ ಪ್ರಕಾಶ್ .ಕೆ .ಶೆಟ್ಟಿ ,ರಾಮೀ ಸಮೂಹ ಹೋಟೆಲ್ ಸಂಸ್ಥೆಯ ಚೇರ್ಮನ್ ಶ್ರೀ ವರದರಾಜ್  ಶೆಟ್ಟಿಯವರು ಪಾಲ್ಗೊಳ್ಳಲಿದ್ದರೆ.
ಆಹ್ವಾನಿತ ಅತಿಥಿಗಳಾಗಿ ನ್ಯೂಯೋರ್ಕ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಾದ ಡಾಕ್ಟರ್ ದಿನೇಶ್ ಶೆಟ್ಟಿ ಯವರು ಪಾಲ್ಗೊಂಡು ವಾರ್ಷಿಕೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿ ವಿಶೇಷ  ಮೆರುಗು  ನೀಡಲಿದ್ದಾರೆ.
ಇಲ್ಲಿನ ಅನಿವಾಸಿ ಬಂಟ ಸಮುದಾಯದ ಪ್ರತಿಭಾನ್ವಿತ ಕಲಾವಿದರುಗಳು ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ರಂಗದ ಮೇಲೆ ಅನಾವರಣಗೊಳಿಸಿ ನೆರೆದವರನ್ನು ರಂಜಿಸಲಿದ್ದಾರೆ.
ಸಮುದಾಯದ ನೋವು,ನಲಿವುಗಳಿಗೆ ಸ್ಪಂದಿಸಲೆಂದೇ ಒಂದೂವರೆ ದಶಕಗಳ ಹಿಂದೆ ದ್ವೀಪ ರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ”ಬಂಟ್ಸ್ ಬಹರೈನ್”   ಬಹರೈನಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿರುವ ತನ್ನ ಸಮುದಾಯದವರನ್ನೆಲ್ಲ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಇಲ್ಲಿರುವ ಹಾಗು ನಾಡಿನ ಬಂಟ ಸಮುದಾಯದ ನೊಂದವರ ಕಣ್ಣೀರೊರೆಸುವ ಅನನ್ಯ ಕೆಲಸವನ್ನು ಮಾಡುತ್ತಿರುವುದು  ಮಾತ್ರವಲ್ಲದೆ , ಇಲ್ಲಿರುವ ಬಂಟ ಬಾಂಧವರನ್ನು  ಒಟ್ಟುಗೂಡಿಸಿಕೊಂಡು ಆಗಾಗ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇರುತ್ತದೆ . “ಬಂಟ್ಸ್ ಬಹರೈನ್ ” ನ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಯುವ ಉದ್ಯಮಿ ಪ್ರದೀಪ್. ಆರ್ .ಶೆಟ್ಟಿ ಯವರು ಚುಕ್ಕಾಣಿಯನ್ನು ಹಿಡಿದಿದ್ದು ಇದಾಗಲೇ ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ಅನೇಕ ರೂಪುರೇಷೆಗಳನ್ನು ಹಾಕಿಕೊಂಡಿದ್ದಾರೆ .
ದ್ವೀಪದ ಅನಿವಾಸಿ ಬಂಟ ಸಮುದಾಯದವರಿಗೆ ಪ್ರವೇಶ ಮುಕ್ತವಾಗಿದ್ದು,ಬಂಟ ಸಮುದಾಯದ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚೆಂದಗಾಣಿಸಿ ಕೊಡಬೇಕೆಂದು ಬಂಟ್ಸ್ ಬಹರೈನ್ ನ ಅಧ್ಯಕ್ಷರಾದ ಪ್ರದೀಪ್.ಆರ್  ಶೆಟ್ಟಿ ಯವರು ಈ ಮೂಲಕ ಕರೆ  ನೀಡಿದ್ದಾರೆ.
ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಪ್ರದೀಪ್.ಆರ್.  ಶೆಟ್ಟಿ ಯವರನ್ನು ಸಂಚಾರಿ ದೂರವಾಣಿ ಸಂಖ್ಯೆ 00973 – 33346263   ಮುಖೇನ ಸಂಪರ್ಕಿಸಬಹುದು.
ವರದಿ -ಕಮಲಾಕ್ಷ ಅಮೀನ್.

Comments are closed.