ರಾಷ್ಟ್ರೀಯ

ವಿಮಾನ ನಿಲ್ದಾಣದಲ್ಲಿ ಸಿಕ್ಖ್ ಪೈಲಟ್‌ನ ಶಿರೋಮಣಿ ತೆಗೆಸಿ ಅವಮಾನ

Pinterest LinkedIn Tumblr

ಹೊಸದಿಲ್ಲಿ : ಸ್ಪೇನ್‌ನ ಮ್ಯಾಡ್ರಿಡ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದ ಸಿಕ್ಖ್ ಪೈಲಟ್ ಒಬ್ಬರ ರುಮಾಲು ತೆಗೆಸಿ ಅವಮಾನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಶಿರೋಮಣಿ ಅಕಾಲಿದಳ, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು, ಈ ವಿಚಾರವನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬಗೆಹರಿಸುವಂತೆ ಆಗ್ರಹಿಸಿದೆ.

ಕ್ಯಾಪ್ಟನ್ ಸಿಮ್ರಂಜೀತ್ ಸಿಂಗ್ ಗುಜ್ರಾಲ್ ಅವರು ಮಂಗಳವಾರ ಕರೆ ಮಾಡಿ ಈ ಘಟನೆ ಬಗ್ಗೆ ವಿವರಿಸಿದ್ದಾಗಿ ಅಕಾಲಿದಳ ಮುಖಂಡ ಮಂಜೀಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಲೋಹಶೋಧಕ ಯಂತ್ರದ ಮೂಲಕ ಹಾದುಹೋದ ಬಳಿಕವೂ ವಿಮಾನ ನಿಲ್ದಾಣ ಅಧಿಕಾರಿಗಳು ಗುಜ್ರಾಲ್ ಅವರ ರುಮಾಲು ತೆಗೆಸಿದ್ದಾರೆ. ಇದು ಸಿಕ್ಖರ ಬಗ್ಗೆ ಪಕ್ಷಪಾತ ಮತ್ತು ಜನಾಂಗೀಯ ತಾರತಮ್ಯದ ಕ್ರಮ ಎಂದು ಅವರು ಆಪಾದಿಸಿದ್ದಾರೆ.

ಏರ್‌ ಇಂಡಿಯಾ ಅಧಿಕಾರಿ ಕ್ಯಾಪ್ಟನ್ ಸಿಮ್ರಂಜೀತ್ ಸಿಂಗ್ ಗುಜ್ರಾಲ್ ಅವರು ಅನುಭವಿಸಿದ ಕಿರುಕುಳವನ್ನು ಗಮನಕ್ಕೆ ತರುತ್ತಿದ್ದೇವೆ. ರುಮಾಲಿನ ಕಾರಣದಿಂದ ಇವರು ಜನಾಂಗೀಯ ತಾರತಮ್ಯಕ್ಕೆ ಒಳಗಾಗಿದ್ದಾರೆ. ವಿಮಾನ ನಿಲ್ದಾಣ ಅಧಿಕಾರಿಗಳು ರುಮಾಲು ತೆಗೆಸಿ ದೈಹಿಕ ಪರೀಕ್ಷೆಗೆ ಒಳಪಡಿಸಿದ್ದು, ಇದು ಸಿಕ್ಖರ ಪ್ರಕಾರ ಅಪರಾಧ ಎಂದು ಸಿರ್ಸಾ ಹೇಳಿದ್ದಾರೆ.

Comments are closed.