ಮಂಗಳೂರು / ಮುಲ್ಕಿ : ಅಜ್ಜಿ ಓದಲು ಹೇಳಿದಕ್ಕೆ 5ನೇ ತರಗತಿಯ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಿನ್ನಿಗೋಳಿ ಸಮೀಪದ ಮೂರು ಕಾವೇರಿ ಕಮ್ಮಾಜೆ ಎಂಬಲ್ಲಿ ಬುಧವಾರ ನಡೆದಿದೆ.
ಕಿನ್ನಿಗೋಳಿಯ ಸೈಂಟ್ ಮೇರಿಸ್ ಅಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ ದ್ರುವಿ (10) ಅತ್ಮಹತ್ಯೆ ಮಾಡಿಕೊಂಡ ಬಾಲಕಿ.
ಬುಧವಾರ ದಾಮಸ್ಕಟ್ಟೆಯ ಕಿರೆಂ ಚರ್ಚ್ ನ ವಾರ್ಷಿಕ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇದ್ದು, ದ್ರುವಿ ಸಂಜೆ ಮನೆಯಲ್ಲಿ ಟಿವಿ ನೊಡುತ್ತಿದ್ದಳು. ಈ ಸಂದರ್ಭ ಕರೆಂಟ್ ಹೋಗಿದ್ದು, ಈ ವೇಳೆ ಮನೆಯಲ್ಲಿದ್ದ ಅಜ್ಜಿ ದ್ರುವಿಗೆ ಓದುವಂತೆ ಸೂಚಿಸಿದ್ದಾರೆ. ಈ ವೇಳೆ ದ್ರುವಿ ಮನೆಯ ಕೋಣೆಗೆ ಹೋದವಳು ಕರೆಂಟ್ ಬಂದಾಗಲೂ ಹೊರ ಬರದಿರುವುದರಿಂದ ಸಂಶಯಗೊಂಡ ಆಜಿ ಅಜ್ಜಿ ಕೋಣೆಗೆ ಬಂದು ನೋಡಿದ ವೇಳೆ ಬಾಲಕಿ ಅತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅಜ್ಜಿ ಪರೀಕ್ಷೆಗೆ ಓದಲು ಹೇಳಿದ ಕಾರಣಕ್ಕೆ ಕೋಪಗೊಂಡ ಧ್ರುವಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಂಕಿಸಲಾಗಿದೆ.
ತಲೆಗೆ ಕಟ್ಟುವ ರಿಬ್ಬನ್ ಅನ್ನು ಕೊಣೆಯ ಕಿಟಕಿಗೆ ಕಟ್ಟಿ ಕುತ್ತಿಗೆಗೆ ಹಾಕಿ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಜ್ಜಿ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಮುಲ್ಕಿ ಪೊಲೀಸರು ಪ್ರಕರಣ ದಾಖಾಲಿಸಿ, ತನಿಖೆ ನಡೆಸುತ್ತಿದ್ದಾರೆ.

Comments are closed.