ಕುಂದಾಪುರ: ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದ ಪತಿ ನೇಣು ಹಾಕಿಕೊಂಡ ಘಟನೆ ಕುಂದಾಪುರ ಗೋಳಿಯಂಗಡಿ ಸಮೀದ ಬೆಳ್ವೆ ಗ್ರಾಮದ ಸೆಟ್ ವಳ್ಳಿ ಎಂಬಲ್ಲಿ ಬುಧವಾರ ನಡೆದಿದ್ದು ರಾತ್ರಿ ವೇಳೆ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಸೂರ್ಯನಾರಾಯಣ ಭಟ್ (50) ಎಂಬಾತ ಪತ್ನಿ, ಮಕ್ಕಳನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡರೆ, ಆತನ ಪತ್ನಿ ಮಾನಸಿ (40) ಸುಧೀಂದ್ರ (14) ಸುಧೀಶ್ (8) ಎಂಬುವರೇ ಹತ್ಯೆಯಾದವರು.


ಅಡುಗೆ ಕೆಲಸದ ಜೊತೆಗೆ ಕೃಷಿ ಮಾಡುತ್ತಿದ್ದ ಸೂರ್ಯನಾರಾಯಣ ಭಟ್ ಬುಧವಾರ ಸಂಜೆ ಅಡುಗೆ ಕೆಲಸಕ್ಕೆ ಬರುವುದಾಗಿ ಮಾತುಕೊಟ್ಟಿದ್ದು ಬಾರದಿದ್ದಾಗ ಅಡುಗೆಯವರು ಮೊಬೈಲ್ ಗೆ ಕರೆ ಮಾಡಿದ್ದಾರೆ. ಆಗ ಫೋನ್ ಸ್ವಿಚ್ ಆಪ್ ಬಂದಿದ್ದು, ಪತ್ನಿಯ ಫೊನ್ ಕೂಡ ಸ್ವಿಚ್ ಆಪ್ ಆಗಿತ್ತು ಬಳಿಕ ಅವರ ಅಣ್ಣನಿಗೆ ಕರೆ ಮಾಡಿದ್ದು ಸಹೋದರ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಮೇಲ್ನೋಟಕ್ಕೆ ಕೌಟುಂಬಿಕ ಕಲಹವೇ ಈ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದ್ದು ಪತ್ನಿ ಹಾಗೂ ಮಕ್ಕಳಿಗೆ ವಿಷ ನೀಡಿದ ಬಳಿಕ ತಲೆಗೆ ಹರಿತವಾದ ಆಯುಧದಿಂದ ಚುಚ್ಚಿ ಕೊಲ್ಲಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಗ ಸುಧೀಂದ್ರ ಹೆಬ್ರಿಯ ಎಸ್ ಆರ್ ಎಸ್ ಶಾಲೆಯಲ್ಲಿ ಎಂಟನೇ ತರಗತಿ ಹಾಗೂ ಸುಧೀಶ್ ಅದೇ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಸಿಪಿಐ ಮಂಜಪ್ಪ ಡಿ.ಆರ್., ಶಂಕರನಾರಾಯಣ ಪಿಎಸ್ಐ ಶ್ರೀಧರ್ ನಾಯ್ಕ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ತಜ್ಞರು, ಶ್ವಾನ ದಳ, ಬೆರಳಚ್ಚು ತಜ್ಞರು ಪರೀಕ್ಷೆ ಬಳಿಕ ಮರೋಣತ್ತಾರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.