ಉಡುಪಿ: ಕಾರು ಹಾಗೂ ಬಸ್ಸು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೋರ್ವಳು ಮೃತಪಟ್ಟ ಘಟನೆ ಸೋಮವಾರ ಸಂಜೆ ಉಡುಪಿ ಪಡುಬಿದ್ರಿ ಬೀಡು ಬಳಿ ನಡೆದಿದೆ.
ಮೃತ ಯುವತಿಯನ್ನು ಮಂಗಳೂರು ಕುಪ್ಪೆ ಪದವು ಮೂಲದ ನಿಕ್ಷಿತಾ (21) ಎಂದು ಗುರುತಿಸಲಾಗಿದೆ.

ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ವಾಮಂಜೂರು ನಿವಾಸಿ ಗುರುಕಿರಣ್ ತೀವ್ರ ಗಾಯಗೊಂಡಿದ್ದು, ಮುಲ್ಕಿ ಕಿಲ್ಪಾಡಿ ಗೇರುಕಟ್ಟೆ ಅಮೃತಾನಂದ ನಗರದ ನಿವಾಸಿ ಧನುಷ್ (23), ಮುಲ್ಕಿ ಬಪ್ಪನಾಡಿನ ಆಲಿತೋಟ ನಿವಾಸಿ ಹರ್ಷಿಣಿ (17) ಗಾಯಗೊಂಡು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರು ಅತೀವ ವೇಗದಿಂದ ಮುಲ್ಕಿ ಕಡೆಯಿಂದ ಉಡುಪಿಯತ್ತ ಸಂಚರಿಸುತಿದ್ದು, ಪಡುಬಿದ್ರಿ ಬೀಡು ಬಳಿವಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲಿಂದ ಹಾರಿ ಉಡುಪಿ ಕಡೆಯಿಂದ ಸಂಚರಿಸುತಿದ್ದ ಬಸ್ಸಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯಾದ ರಭಸಕ್ಕೆ ಕಾರು ಹಾಗೂ ಬಸ್ಸಿನ ಮುಂಭಾಗ ಜಖಂಗೊಂಡಿದೆ.
ಪಡುಬಿದ್ರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.