ಕರಾವಳಿ

ಇಷ್ಟು ದಿನ ಎಲ್ಲಿ ಹೋಗಿದ್ರಿ?- ಪ್ರಶ್ನೆ ಕೇಳಿದ ಪತ್ನಿಗೆ ತಲಾಖ್ ಹೇಳಿದ ಪತಿರಾಯ!

Pinterest LinkedIn Tumblr

ಉಡುಪಿ: ಇನ್ನೊಬ್ಬಾಕೆಗಾಗಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಕುರಿತು ಉಡುಪಿ ಪೊಲೀಸ್ ಠಾಣೆಯಲ್ಲಿ ನೊಂದ ಪತ್ನಿಯು ಪ್ರಕರಣ ದಾಖಲಿಸಿದ್ದಾರೆ.

1997ರ ಮೇ 20 ರಂದು ಮುಸ್ಲಿಂ ಸಂಪ್ರದಾಯದಂತೆ ಕುಂಜಿಬೆಟ್ಟುವಿನ ಸಾಜಿದಾ ಅಶ್ರಫ್ ಹಾಗೂ ಅಶ್ರಫ್ ಮೊಹಮ್ಮದ್ ಬಾಪು ಅವರ ವಿವಾಹವು ಕುದ್ರೋಳಿ ಮಸೀದಿಯಲ್ಲಿ ನಡೆದಿದ್ದು, ಮದುವೆಯಾದ ಸಮಯದಲ್ಲೇ ಆರೋಪಿ ಸ್ಥಾನದಲ್ಲಿರುವ ಪತಿಯು ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು ಇವರಿಗಿಬ್ಬರು ಮಕ್ಕಳಿದ್ದಾರೆ. ಪತಿಯು 10 ದಿನ ಮನೆಗೆ ಬರದ ಕಾರಣ ನವೆಂಬರ್ 17 ರಂದು ಮನೆಗೆ ಬಂದ ಪತಿಯನ್ನು ನೀವು ಇಷ್ಟು ದಿನ ಎಲ್ಲಿಗೆ ಹೋಗಿದ್ದೀರಿ? ಎಂದು ಪ್ರಶ್ನಿಸಿದಾಗ ಆರೋಪಿಯು ತಾನು ಸಮೀನಾ ಎಂಬವರನ್ನು ವಿವಾಹವಾಗಿದ್ದು ಅವರ ಮನೆಗೆ ಹೋಗಿದ್ದಾಗಿ ತಿಳಿಸಿ ಕಾನೂನೂ ಬಾಹಿರವಗಿ ಮೂರು ಬಾರಿ ತಲಾಖ್ ಎಂದು ಹೇಳಿ ಬೆದರಿಕೆ ಹಾಕಿದ್ದಲ್ಲದೆ ದೈಹಿಕ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.