ಕರಾವಳಿ

ಅಯೋಧ್ಯೆ ಭೂವಿವಾದ : ಅಂತಿಮ ತೀರ್ಪು ಪ್ರಕಟ

Pinterest LinkedIn Tumblr

ನವದೆಹಲಿ: ಅಯೋಧ್ಯೆ ಭೂವಿವಾದದ ಅಂತಿಮ ತೀರ್ಪು ಹೊರ ಬಿದ್ದಿದ್ದೆ. ರಾಮಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು ಅಯೋಧ್ಯೆಯಲ್ಲಿ ರಾಮಲಲ್ಲಾಗೆ 2.77 ಎಕರೆ ಜಾಮೀನು ನೀಡುವಂತೆ ಆದೇಶ ಮಾಡಿದೆ.ಮಾತ್ರವಲ್ಲದೇ ಸರಕಾರದ ವತಿಯಿಂದ ರಾಮಮಂದಿರ ನಿರ್ಮಿಸುವಂತೆ ಆದೇಶದಲ್ಲಿ ತಿಳಿಸಿದೆ.

ಇಡೀ ಭಾರತ ಎದುರು ನೋಡುತ್ತಿದ್ದ ಅಯೋಧ್ಯೆ ವಿವಾದಕ್ಕೆ ಅಂತ್ಯ ಹಾಡಿರುವ ಸುಪ್ರೀಂಕೋರ್ಟ್, ಐತಿಹಾಸಿಕ ತೀರ್ಪು ನೀಡಿದೆ. ವಿವಾದಿತ ಪ್ರದೇಶದಲ್ಲಿ ಮಂದಿನ ನಿರ್ಮಾಣಕ್ಕೆ ಉಚ್ಛ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ.

ಇದೇ ವೇಳೆ ಅಯೋಧ್ಯೆಯಲ್ಲಿ ಸುನ್ನಿ ವಕ್ಫ ಬೋರ್ಡ್‍ಗೆ 5 ಎಕರೆ ಜಮೀನು ನೀಡುವಂತೆ ಆದೇಶ ಮಾಡಿದೆ. ಈ ಜಮೀನಿನಲ್ಲಿ ಮಸೀದಿ ಕಟ್ಟುವುದು ಮುಸ್ಲಿಂರಿಗೆ ಬಿಟ್ಟ ವಿಚಾರ ಎಂದು ಆದೇಶದಲ್ಲಿ ತಿಳಿಸಿದೆ.

ರಾಮಮಂದಿರ ನಿರ್ಮಾಣದ ಸಂಬಂಧ ಮೂರು ತಿಂಗಳೊಳಗೆ ಟ್ರಸ್ಟ್​ ರಚನೆ ಮಾಡಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ತೀರ್ಪಿನ ಪ್ರತಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ, ಶಿಯಾ ವಕ್ಫ್ ಮಂಡಳಿಯ ವಿಶೇಷ ರಜಾ ಅರ್ಜಿಯನ್ನು ವಜಾಗೊಳಿಸಿದೆ. 1946ರಲ್ಲಿ ಉತ್ತರ ಪ್ರದೇಶದ ಫೈಜಾಬಾದ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

 

Comments are closed.