10.50: 12ನೇ ಶತಮಾನದಲ್ಲಿ ಇಲ್ಲಿ ದೇಗುಲ ಇತ್ತು ಎಂಬುದು ಉತ್ಖನನದ ವೇಳೆ ಸ್ಪಷ್ಟವಾಗಿದೆ. ಮಸೀದಿಯ ಅಡಿಪಾಯದ ಕೆಳಗೆ ಇರುವ ರಚನೆ ಇಸ್ಲಾಮಿಕ್ಗೆ ಸಂಬಂಧಪಟ್ಟದ್ದು ಆಗಿರಲಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ ಮುಖ್ಯನ್ಯಾಯಮೂರ್ತಿ.
10.46: ರಾಮಮಂದಿರ ಧ್ವಂಸ ಮಾಡಿ ಬಾಬರಿ ಮಸೀದಿ ಕಟ್ಟಲಾಗಿತ್ತು ಎಂದು ವರದಿ ನೀಡಿದ್ದ ಪುರಾತತ್ವ ಇಲಾಖೆಯೆ ವಾದಕ್ಕೆ ಮನ್ನಣೆ ನೀಡಿದ ಸುಪ್ರೀಂಕೋರ್ಟ್.
10.43: ನಿರ್ಮೋಹಿ ಆಖಾಡದ ಅರ್ಜಿ ವಜಾ, ರಮಲಲ್ಲಾ ಅರ್ಜಿ ಮಾನ್ಯ ಮಾಡಿದ ಸುಪ್ರೀಂಕೋರ್ಟ್
10. 41: ರಂಜನ್ ಗೊಗೊಯ್: ಮಸೀದಿಯನ್ನು ಮೊಘಲ್ ದಂಡನಾಯಕ ಮೀರ್ ಬಾಕಿ ಕಟ್ಟಿದ್ದಾನೆಂದು ವಾದಿಸಲಾಗಿತ್ತು. ಹೀಗಾಗಿ ಅದು ಧಾರ್ಮಿಕ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ.
10. 35: 1946 ರ ಫೈಜಾಬಾದ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಶಿಯಾ ವಕ್ಫ್ ಮಂಡಳಿ ಸಲ್ಲಿಸಿದ್ದ ಎಸ್‌ಎಲ್‌ಪಿ(ಸಿಂಗಲ್ ಲೀವ್ ಪಿಟಿಷನ್)ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್
10. 32: ತೀರ್ಪಿಗೆ ಎಲ್ಲ ಐವರೂ ನ್ಯಾಯಮೂರ್ತಿಗಳಿಂದ ಸಹಿ
10.30: ತೀರ್ಪು ಓದಲು ಪ್ರಾರಂಭಿಸಿದ ಸಿಜೆಐ ರಂಜನ್ ಗೊಗೋಯ್
10.22 : ಸಾಂವಿಧಾನಿಕ ಪೀಠದಲ್ಲಿರುವ ಎಲ್ಲ ಐವರು ನ್ಯಾಯಮೂರ್ತಿಗಳೂ ಸುಪ್ರೀಂಕೋರ್ಟ್ಗೆ ಆಗಮನ
10.17: ಸುಪ್ರೀಂಕೋರ್ಟ್ ತಲುಪಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್
10.07: ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಈಗಾಗಲೇ ತಮ್ಮ ಮನೆಯಿಂದ ಹೊರಟಿದ್ದು ಕೆಲವೇ ಕ್ಷಣಗಳಲ್ಲಿ ಸುಪ್ರೀಂಕೋರ್ಟ್ ತಲುಪಲಿದ್ದಾರೆ.
10.05: ರಾಜಸ್ಥಾನ: ಅಜ್ಮರ್ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಾಗಿದ್ದು ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿದೆ.
10.02: ಗೃಹ ಸಚಿವ ಅಮಿತ್ ಷಾ ಅವರು ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆ ಕರೆದಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಗುಪ್ತವರ ಇಲಾಖೆ ಮುಖ್ಯಸ್ಥ ಅರವಿಂದ್ ಕುಮಾತ್ ಮತ್ತಿತರರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
10.00: ಅಧ್ಯಾತ್ಮ ಗುರು ಶ್ರೀ ರವಿಶಂಕರ ಗುರೂಜಿ: ಅಯೋಧ್ಯಾ ತೀರ್ಪು ಏನೇ ಬಂದರೂ ಶಾಂತಿಯಿಂದ ಇರಿ. ನಮ್ಮ ಪರವಾಗಿ ಬಂದರೂ ಅದರ ಸಂಭ್ರಮಾಚರಣೆ ಮಾಡುವುದು ಬೇಡ.
9.58: ಸುಪ್ರೀಂಕೋರ್ಟ್ನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದು ಸೂಕ್ತ ರಕ್ಷಣೆ ಒದಗಿಸಿದ್ದಾರೆ.
9.50: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂದು ನಡೆಯಬೇಕಿದ್ದ ಎಲ್ಲ ಸ್ನಾತಕೋತ್ತರ ಮತ್ತು ನಾನ್ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದ್ದಾಗಿ ವಿವಿ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ.
9.37: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್- ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವ್ಯಾಜ್ಯದ ಸುಪ್ರೀಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ, ಸೌಹಾರ್ದತೆ ಕಾಪಾಡೋಣ.
9.27: ಅಯೋಧ್ಯಾ ತೀರ್ಪು ಏನೇ ಬಂದರೂ ಸರಿ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ ಶಾಂತಿ, ಅಹಿಂಸೆಯ ಮಾರ್ಗದಲ್ಲಿ ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ಪ್ರಧಾನಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
8.53: ಮುಖ್ಯಮಂತ್ರಿ ಯಡಿಯೂರಪ್ಪನವರು ಟ್ವೀಟ್ ಮಾಡಿದ್ದು, ಶತಮಾನದಷ್ಟು ಹಳೆಯದಾದ ಅಯೋಧ್ಯಾ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ಪ್ರಕಟಿಸಲಿದ್ದು ಯಾರ ಪರವಾಗಿಯೇ ಬಂದರೂ ಭಾವೋದ್ವೇಗಕ್ಕೆ ಒಳಗಾಗಬಾರದು. ಕೋಮುಸೌಹಾರ್ದ ಕದಡದೆ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
8.49: ಬಹುತೇಕ ರಾಜ್ಯಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ತೀರ್ಪು ಏನೇ ಬಂದರೂ ಸರಿ ಶಾಂತಿ, ಸಂಯಮದಿಂದ ಇರಬೇಕು. ಯಾವುದೇ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ರಾಜ್ಯದಲ್ಲೂ ಸಹ ಖಾಕಿ ಪಡೆ ಅಲರ್ಟ್ ಆಗಿದ್ದು ಕೊಡ ಎಲ್ಲ ಜಿಲ್ಲೆಗಳಲ್ಲೂ ಸೂಕ್ತ ಭದ್ರತೆ ಒದಗಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸಹ ಪ್ರಚೋದನಾತ್ಮಕ ಪೋಸ್ಟ್ಗಳನ್ನು ಹಾಕಬಾರದು ಎಂದು ಆಯಾ ಜಿಲ್ಲಾಧಿಕಾರಿಗಳು ಕಡಕ್ ಸೂಚನೆ ನೀಡಿದ್ದಾರೆ.

Comments are closed.