ಕರಾವಳಿ

ಅಯೋಧ್ಯೆ ತೀರ್ಪು: ಉಡುಪಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ: ಭಾನುವಾರವೂ ಮದ್ಯದಂಗಡಿ ಬಂದ್!

Pinterest LinkedIn Tumblr

ಉಡುಪಿ: ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆ ವಿವಾದದ ಬಗ್ಗೆ ಅಂತಿಮ ತೀರ್ಪು ನೀಡಿದ್ದು ಈ ಹಿನ್ನಲೆಯಲ್ಲಿ ಉಡುಪಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು (144 ಸೆಕ್ಷನ್) ಜಾರಿಗೆ ಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.

ಅಯೋಧ್ಯೇ ತೀರ್ಪು ಬಂದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕ ಶಾಂತಿ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ನವೆಂಬರ್ 9 ರ ಬೆಳಿಗ್ಗೆ 10ರಿಂದ ನವೆಂಬರ್ 10 ಬೆಳಿಗ್ಗೆ 6 ಗಂಟೆಯ ಉಡುಪಿ ಜಿಲ್ಲಾದ್ಯಂತ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಕಲಂ 144 ರ ಅನ್ವಯ ಪ್ರತಿಭಂದಕಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಉಡುಪಿ ಎಸ್ಪಿ ನಿಶಾ ಜೇಮ್ಸ್ ಅವರ ಕೋರಿಕೆಯಂತೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.

ಭಾನುವಾರವೂ ಮದ್ಯದಂಗಡಿ ಇಲ್ಲ…
ಅಯೋಧ್ಯೆ ತೀರ್ಪಿನ ಹಿನ್ನೆಲೆ ಶನಿವಾರ ಮದ್ಯದಂಗಡಿ ಬಂದ್ ಮಾಡಿದ್ದು ತೀರ್ಪು ಪ್ರಕಟವಾದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನ.11 (ಸೋಮವಾರ) ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ಬಂದ್ ಮಾಡಿ ಆದೇಶಿಸಲಾಗಿದೆ. ಬಾರ್, ವೈನ್ ಶಾಪ್, ಹೋಟೆಲ್, ಕ್ಲಬ್, ಶೇಂದಿ ಅಂಗಡಿಯಲ್ಲಿ ಮದ್ಯ ಮಾರಾಟ ನಡೆಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಟಾಕಿ ಮಾರುವಂತಿಲ್ಲ, ಸಿಡಿಸುವಂತಿಲ್ಲ..
ತೀರ್ಪು ಪ್ರಕಟವಾದ ಹಿನ್ನೆಲೆ ಯಾವುದೇ ವಿಜಯೋತ್ಸವ ಸೇರಿದಂತೆ ಸಭೆ ಸಮಾರಂಭ ನಡಡಸುವಂತಿಲ್ಲ. ಅಲ್ಲದೇ ಪಟಾಕಿ ಸಿಡಿಸುವಂತಿಲ್ಲ. ಪಟಾಕಿ ಮಾರಾಟ ಮಾಡುವ ಪರವಾನಿಗೆದಾರರು ಪಟಾಕಿ ಮಾರಾಟ ಮಳಿಗೆ ಮುಚ್ಚಬೇಕು ಎಂದು ಡಿಸಿ ಆದೇಶಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.