ಕರಾವಳಿ

ಹಾಲ್ ಟಿಕೇಟ್ ತರಲು ಕಾಲೇಜಿಗೆ ಹೋದ ಕಾರ್ಕಳದ ಯುವತಿ ನಾಪತ್ತೆ

Pinterest LinkedIn Tumblr

ಉಡುಪಿ: ಕಾರ್ಕಳ ತಾಲೂಕು ಮಾಳ ಗ್ರಾಮದ ಮುಡೇಶ್ವರ ನಿಲಯದ ಯುವತಿ ಸುಧಾ ವಿ ಭಟ್ (18) ಎಂಬುವರು ಅಕ್ಟೋಬರ್ 21 ರಂದು ಕಾರ್ಕಳದ ಭುವನೇಂದ್ರ ಕಾಲೇಜಿನಿಂದ ಪರೀಕ್ಷಾ ಪ್ರವೇಶ ಪತ್ರ ಪಡೆದುಕೊಂಡು ಬರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಸದ್ಯ ಪೊಲೀಸರಿಗೆ ದೂರು ನೀಡಲಾಗಿದೆ.

ಕಾಣೆಯಾದವರ ಚಹರೆ:
ಇವರು ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಹಿಂದಿ, ಕನ್ನಡ, ತುಳು, ಇಂಗ್ಲೀಷ್, ಮರಾಠಿ ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.