ಕರಾವಳಿ

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ; ದ.ಕ ಅಭ್ಯರ್ಥಿ ಚೌಟ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಉಪಸ್ಥಿತಿ

Pinterest LinkedIn Tumblr

ಮಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಭದ್ರಕೋಟೆ ಮಂಗಳೂರಿನಲ್ಲಿ ಭಾನುವಾರ ಭರ್ಜರಿ ರೋಡ್ ಶೋ ನಡೆಸಿದರು.

ನಾರಾಯಣಗುರು ವೃತ್ತದಿಂದ ತೆರೆದ ವಾಹನದಲ್ಲಿ ಆರಂಭವಾದ ರೋಡ್ ಶೋ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಜನಸ್ತೋಮ, ಪ್ರಧಾನಿ ಕಂಡು ಜಯ ಘೋಷ ಮೊಳಗಿಸಿತು.

ಮೋದಿ ಮುಖವಾಡ, ಕೇಸರಿ ಭಾವುಟ ಹಿಡಿದು ನಿಂತ ಅಭಿಮಾನಿಗಳು, ಜಯ ಘೋಷ ಕೂಗಿ ಸಂಭ್ರಮಿಸಿದರು. ಅಭಿಮಾನಿಗಳು ಮೋದಿ ಅವರತ್ತ ಹೂವಿನ ಮಳೆಗರೆದು ಸ್ವಾಗತ ಕೋರಿದರು. ಪ್ರಧಾನಿ ಮೋದಿ ಅವರೊಂದಿಗೆ ಮಂಗಳೂರು ಲೋಕಸಭಾ ಕ್ಷೇತ್ರದ ಭಾಜಪಾ ಅಭ್ಯರ್ಥಿ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

ಪ್ರಧಾನಿ ರೋಡ್‌ ಶೋ ನಡೆಯುವ ರಸ್ತೆಗಳ ಇಕ್ಕೆಲಗಳಲ್ಲಿ ಕರವಾಳಿಯ ಸಂಸ್ಕೃತಿಯನ್ನು ಅನಾವರಣ ಮಾಡಲಾಯಿತು. ದೈವಾರಾಧನೆ, ಕಂಬಳ, ಹುಲಿ ವೇಷ, ಭರತ ನಾಟ್ಯ ಪ್ರದರ್ಶನ ಮೂಲಕ ಮೋದಿಯವರ ಗಮನ ಸೆಳೆಯಲಾಯಿತು.

Comments are closed.